ಮಹಾರಾಷ್ಟ್ರದ ಕೊಂಕಣ ತೀರದಲ್ಲಿ ಹಾಗೂ ಕರ್ನಾಟಕದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದರಿಂದ ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ. ಹೀಗಾಗಿ ನದಿಯ ನೀರಿನ ಮಟ್ಟ ಹೆಚ್ಚಳಗೊಂಡು ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಿಕೊಡುವ ಕುಡಚಿ-ಉಗಾರ, ಚಿಂಚಲಿ-ಭಿರಡಿ, ಸೆತುವೆಗಳು ಜಲಾವೃತಗೋಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿವೆ.
ಕೃಷ್ಣಾ ನದಿಯ ಒಳ ಹರಿಯು ಹೆಚ್ಚಾಗಿದ್ದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಬೀತಿಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಶುಕ್ರವಾರ ನೀಧಾನ ಗತಿಯಲ್ಲಿ ಏರಿಕೆಯಾಗುತ್ತಿದು ಸಾಯಂಕಾಲ ನದಿ ಏರಿಕೆಯ ಪ್ರಮಾಣದಲ್ಲಿ ಹೇಚ್ಚಳವಾಗಿದೆ. ಇದೇ ರೀತಿ ಹೇಚ್ಚಾದರೆ ಶುಕ್ರವಾರ ತಡರಾತ್ರಿ ಚಿಂಚಲಿ-ರಾಯಬಾಗ ಸೇತುವೆ ಮುಳುಗಡೆ ಸಾಧ್ಯತೆ ಇದೆ ಎನ್ನಲಾಗಿದೆ.
ಮಾರ್ಗ ಬದಲಾವಣೆ: ಕುಡಚಿ ರಸ್ತೆ ಸಂಚಾರ ಸ್ಥಗಿತ ಗೊಂಡಿದ್ದರಿಂದಾಗಿ ಬಾಗಲಕೋಟ, ಬಿಜಾಪೂರ, ಜಮಖಂಡಿ, ಗೋಕಾಕ ಕಡೆಗಳಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್ಸು ಹಾಗೂ ವಾಹನಗಳು ಅಥಣಿ ಮಾರ್ಗವಾಗಿ ಸಂಚರಿಸುತ್ತವೆ.
ಕೃಷ್ಣಾ ನದಿಯ ಪ್ರವಾಹ ಮಟ್ಟ ಹೆಚ್ಚುತ್ತಿದ್ದು ಸೇತುವೆ ಮುಳುಗಡೆಯಾದರು ಕೇಲವರು ದು:ಸಾಹಸಕ್ಕೆ ಮುಂದಾಗಿ ಜಲಾವೃತ ಸೇತುವೆ ಮೇಲೆಯೇ ವಾಹನ ಚಲಾಯಿಸುತ್ತಿದ್ದಾರೆ, ಅಲ್ಲದೇ ಇನ್ನು ಚಿಕ್ಕ ಮಕ್ಕಳು ಸೇರಿದಂತೆ ದೊಡ್ಡವರು ನದಿಯಲ್ಲಿ ಹೋಗುತ್ತಿದ್ದಾರೆ. ಇದು ಅಪಾಯಕರ ಸಂಗತಿಯಾಗಿದೆ. ಕಾರಣ ಜಲಾವೃತಗೊಂಡಿರುವ ಸೇತುವೆಗಳ ಬಳಿ ಪೋಲಿಸ್‍ರನ್ನು ನಿಯೋಜಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …