ಬೆಳಗಾವಿ-ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆ ವಿಚಾರದ ಕುರಿತು
ರಾಜಕೀಯ ಲಾಭ ಹಾನಿ ಕುರಿತು ಯೋಚನೆ ಮಾಡುವುದನ್ನ ಬಿಟ್ಟು
ರಾಜಕೀಯ ಲಾಭದ ಹೆಸರಿನಲ್ಲಿ ನಮಗೆ ಸಿಗಬೇಕಾದ ಪ್ರತ್ಯೇಕ ಧರ್ಮದ ಸ್ಥಾನಮಾನ ತಪ್ಪಿಸಲು ಯತ್ನಸಬೇಡಿ ಎಂದು
ಬಿಜೆಪಿ ಮುಖಂಡರಿಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕಿವಿ ಮಾತು. ಹೇಳಿದ್ದಾರೆ
ಬೆಳಗಾವಿಯಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ಯ ವಿಕಲಾಂಗ ಮಕ್ಕಳಿಗೆ ಹಾಲು ಕುಡಿಸಿ ಮೌಢ್ಯದ ವಿರುದ್ಧ ಸಮರ ಸಾರಿದ ಶ್ರೀಗಳು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು
ಜಯಮೃತ್ಯುಂಜಯ ಸ್ವಾಮೀಜಿ,ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರುಗಳಾಗಿದ್ದು
ಪ್ರತ್ಯೇಕ ಲಿಂಗಾಯತ ಧರ್ಮ ಆಗಲೇಕು.
ರಾಜ್ಯ ಸರ್ಕಾರ ಶಿಪಾರಸ್ಸು ಮಾಡಿದರೆ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ತಂದು ಮಸೂದೆಯನ್ನ ಅನುಷ್ಠಾನ ಮಾಡಲು ಮುಂದಾಗಬೇಕು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನ ಮಾನ ದೊರಕಿಸುವ ಮೂಲಕ ಲಿಂಗಾಯತ ಧರ್ಮದ ಋಣ ತೀರಿಸಲಿ ಎಂದು ಶ್ರೀಗಳು ಹೇಳಿದರು
ಕರ್ನಾಟಕದಲ್ಲಿರುವವರೆಲ್ಲಾ ವೀರಶೈವರಲ್ಲ.
ಹಿಂದಿನ ಕಾಲದಿಂದ ಈ ಶಬ್ದ ಬಳಕೆ ಮಾಡುತ್ತಾ ಬಂದಿದ್ದೇವೆ.
ವೀರಶೈವ -ಲಿಂಗಾಯತ ಸಮಾನಾರ್ಥಕ ಪದಗಳಲ್ಲ.
ಇವೆರಡರ ಅರ್ಥ ಬೇರೆ ಬೇರೆಯಾಗಿದೆ.ಇದನ್ನ ಅರಿತು ನಡೆಯಬೇಕು.ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದರು
ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನ ಮಾನ ಕೊಡುವ ವಿಷಯದಲ್ಲಿ ಕೆಲವರು ಗೊಂದಲದ ಹೇಳಿಕೆ ನೀಡಿ ಹೋರಾಟದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿರುವದು ಸರಿಯಲ್ಲ ಪ್ರತ್ಯೇಕ ಸ್ಥಾನ ಮಾನ ಸಿಗೋವರೆಗೆ ಹೋರಾಟ ಮುಂದುವರೆಯುತ್ತದೆ ಎಂದು ಸ್ವಾಮೀಜಿಗಳು ಹೇಳಿದರು