*ಕನ್ನಡ ನಾಡಿನಲ್ಲಿ ಮತ್ತೇ ಕುಮಾರಪರ್ವ*
*ಸಕ್ಕರೆ ಕನಸಿನಲ್ಲಿ ಮುಗುಳ್ನಗೆ ಬೀರುತ್ತಿರುವ ಬೆಳಗಾವಿ*
‘ಕನ್ನಡ ನಾಡಿನ ಅಸ್ಮಿತೆಗೆ ಕಾಲದ ಅವಶ್ಯಕತೆ’ ಎನ್ನುವಂತೆ ಕನ್ನಡಕುವರ ಎಚ್.ಡಿ. ಕುಮಾರಸ್ವಾಮಿಯವರ ಕುಮಾರಪರ್ವ ಸುರುವಾಗಿದೆ. ಇದಕ್ಕೆ ಕಾರಣವೂ ಇದೇ : ಈ ಹಿಂದೆ 2009ರಲ್ಲಿ ಮುಖ್ಯಮಂತ್ರಿಯಾದಾಗ ಇಡೀ ಕರ್ನಾಟಕದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿದ್ದರ. ನಾಡಿನ ಉದ್ದಗಲ್ಲಕ್ಕೂ ಸಂದಿಗೊಂದಿಗಳಲ್ಲಿ ಮಿಂಚಿನಂತೆ ಸುತ್ತಾಡಿದ ಕುಮಾರಸ್ವಾಮಿ ಅವರು ನಾಡಿನ ಹಿತಾಸಕ್ತಿಗೆ ಶಕ್ತಿ ಮೀರಿ ಶ್ರಮಿಸುವುದರ ಮೂಲಕ ಜನತೆಯ ಮೆಚ್ಚುಗೆಗೆ ಪಾತ್ರವಾಗಿದ್ದರು. ಅದರಲ್ಲೀ ವಿಶೇಷವಾಗಿ ‘ಬೆಳಗಾವಿ ಕನ್ನಡದ’ ನೆಲ ಎಂದು ದೇಶದ ಎದೆಯಲ್ಲಿ ನೆಲೆಗೊಳ್ಳಲು ಅವರು ಕೈಗೊಂಡ ಹೊಸ ಹೊಸ ಯೋಜನೆಗಳು, ನಿರ್ವಹಿಸಿದ ರಚನಾತ್ಮಕ ಕಾರ್ಯಗಳನ್ನು ಬೆಳಗಾವಿ ಜನತೆ ಎಂದಿಗೂ ಮರೆಯುವುದಿಲ್ಲ. ಅವರ ಬೆಳಗಾವಿಯ ಅಭಿವೃದ್ಧಿಯ ಚರಿತ್ರೆಯ ಗುರುತುಗಳಾಗಿ ಸುವರ್ಣ ವಿಧಾನಸೌಧ, ಚಳಿಗಾಲದ ಅಧಿವೇಶನ ಸಾಕ್ಷಿ ನುಡಿಯುತ್ತಿವೆ. ಕುಮಾರಸ್ವಾಮಿ ಅವರು ಕಂಡಕನುಸುಗಳು ಇವು. ನಂತರ ರಾಜಕೀಯ ಏರಿಳಿತದಲ್ಲಿ ಈಡೇರಿಸಿದ್ದು ಬೇರೆ ಪಕ್ಷದವರಾದರೂ ಅದಕ್ಕೆ ನಾಂದಿ ಹಾಡಿಕ್ರಿಯಾಶೀಲಗೊಳಿಸಿದವರು ಕುಮಾರಸ್ವಾಮಿ ಅವರು. ಅಂದು ಬೆಳಗಾವಿ ಸಂದಿಗೊಂದಿಗಳಲ್ಲಿ ಸುತ್ತಾಡಿ ಜನರಲ್ಲಿ ಬೆಳಗಾವಿ ಗುರುತಿಸಿದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು. ಭಾಷಾ ದ್ವೇಷದ ವಿಷಬೀಜ ಬಿತ್ತಿ ಅಭಿವೃದ್ಧಿಗೆ ಮುಂದಾಗದ ಸ್ವಹಿತಾಸಕ್ತಿಗಾಗಿ ರಾಜಕೀ ಬಂದರವ ಬಣ್ಣ ಬಯಲುಗೊಳಿಸಿ, ಕನ್ನಡೇತರ ಭಾಷಿಕ ಬಾಂಧವರಲ್ಲಿ ಕನ್ನಡ ಸಂಚಲನ ಮೂಡಿಸಿದ ಕುಮಾರಸ್ವಾಮಿಯವರು ಸಾಧನೆಯ ಕಿರು ಹೆಚ್ಚೆ ಗುರುತುಗಳು ಬೆಳಗಾವಿಯ ಇತಿಹಾಸದ ಪುಟಗಳಲ್ಲಿ ಅಚ್ಚಾಗಿವೆ.
ಎಚ್.ಡಿ. ಕುಮಾರಸ್ವಾಮಿ ಅವರು ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಕನ್ನಡ ನಾಡಿಗೆ ಕುಮಾರಸ್ವಾಮಿ ಅವರ ಸೇವೆಯ ಅವಶ್ಯವಿದೆ ಎನ್ನುವಂತೆ ತುಪ್ಪಜಾರಿ ಅವರ ರೊಟ್ಟಿಯಮೇಲೆ ಬಿದ್ದಿದೆ. ಅದನ್ನು ಉಳಿಸಿಕೊಳ್ಳಲು ಚುನಾವಣೆಯ ನಂತರ ಅವರು ಎದುರಿಸಿದ ಸವಾಲು ಸಾಹಸದಿಂದ ಕೂಡಿತ್ತು. ಅದನ್ನು ಅವರು ಯಶಸ್ವಿಯಾಗಿ ನಿರ್ವಹಿಸಿ ಸಾಬೀತುಪಡಿಸಿರುವುದು ಕರ್ನಾಟಕದ ಜನತೆಯಲ್ಲಿ ನೆಮ್ಮದಿಯ ಭಾವ ಮೂಡಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಕ್ಕೆ ಸಮಾಧಾನದ ನಿಟ್ಟೂಸಿರು ಬಿಟ್ಟಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಮುಂದಿನ ದಾರಿ ಅಷ್ಟು ಸುಲಭದಲ್ಲ. ಪ್ರತಿಹೆಜ್ಜೆಗೂ ಅವರು ಎದೆ ಉಸಿರು ಬಿಡಬೇಕಾಗುತ್ತದೆ. ತಮ್ಮ ಜವಾಬ್ದಾರಿಯನ್ನು ಮುಂದಿನ ಅಷ್ಟೂ ದಿನಗಳಲ್ಲಿ ಸಮರ್ಥವಾಗಿ ನಿರ್ವಹಿಸಬೇಕಾದ ಅನಿವಾರ್ಯ ಮತ್ತು ತೀರ ಅಗತ್ಯವಿದೆ. ಅದರಲ್ಲೂ ವಿಷೇಶವಾಗಿ ಪ್ರಾರಂಭದ ಒಂದು ವರ್ಷ ಅವರಿಗೆ ದೊಡ್ಡ ಸವಾಲಾಗಿದೆ. ಕನ್ನಡದ ಅಸ್ಮಿತೆ ಹಾಗೂ ಪ್ರಜಾತಂತ್ರದ ನೀತಿಯನ್ನು, ಸಾಂವಿಧಾನಿಕ ಆಶಯವನ್ನು ಹೊತ್ತುಕೊಂಡು ದೇಶದ ಐಕ್ಯತೆಯ ಮೂಲಕ ಅವರು ಸಾಬೀತುಪಡೆಸುವ ಅಗತ್ಯವಿದೆ. ಈ ಒಂದು ವರ್ಷದಲ್ಲಿ ಅವರ ಹಾಗೂ ಜಾತ್ಯತೀತ ಪ್ರಾದೇಶಿಕ ಪಕ್ಷಗಳ ರಾಜಕೀಯ ಭವಿಷ್ಯ ಅಡಗಿದೆ. ಹೀಗಾಗಿ ಇದನ್ನು ಕುಮಾರಪರ್ವ ಎಂದು ಕರೆಯಬೇಕಾಗಿದೆ.
ಇದರೊಟ್ಟಿಗೆ ಗಡಿಭಾಗದ ಅಸ್ಮಿತೆಯ ಸಂಕೇತಗಳನ್ನು ಉಳಿಸಿ, ಇನ್ನಷ್ಟು ಬಣ್ಣಬಳಿದು ಮೆರುಗು ನೀಡಬೇಕಾಗದ ಅಗತ್ಯ ಅವರ ಎದುರಿಗಿದೆ. ಈ ದೃಷ್ಟಿಯಿಂದ ಬೆಳಗಾವಿ ‘ಕುಮಾರಣ್ಣ ಮತ್ತೇ ಬಂದಿದ್ದಾನೆ’ ಎಂದು ಬೆಳಗಿನ ಸಕ್ಕರೆ ನಿದ್ದೆಯ ಕನಸಿನಲ್ಲಿ ಕನವರಿಸುತ್ತಿದೆ. ಸಕ್ಕರೆ ನಗೆಯಲ್ಲಿರುವ ಬೆಳಗಾವಿಯನ್ನು ಅವರು ಮತ್ತೊಮ್ಮೆ ಎತ್ತಿಕೊಳ್ಳಬೇಕಾಗದ ಅಗತ್ಯವಿದೆ. ಅವರು ಬೆಳಗಾವಿ ಕನ್ನಡ ನಾಡಿನ ಅವಿಭಾಜ್ಯ ಅಂಗ ಎಂದು ಸಾಬೀತುಪಡೆಸಲು ಕಂಡ ಕನಸುಗಳು ಅರ್ಧದಲ್ಲಿಯೇ ಉಳಿದಿವೆ. ಇಲ್ಲಿನ ಸರ್ವ ಭಾಷಿಕರ ಹಿತಾಸಕ್ತಿಯೊಂದಿಗೆ ಅಭಿವೃದ್ದಿಯ ಕ್ರಾಂತಿ ಮಾಡಬೇಕಾಗಿದೆ. ಇಲ್ಲಿಯ ಪ್ರತಿಭೆಗಳು ವಲಸೆ ಹೋಗದಂತೆ ಸ್ವಾಭಿಮಾನ ಬದುಕಿಗೆ ಬೇಕಾದ ಅಭಿವೃದ್ಧಿ ಮತ್ತು ಅಗತ್ಯತೆಗಳನ್ನು ಪೂರೈಕೆಗೆ ಕೈಹಾಕಬೇಕಾದ ತೀವ್ರ ಅಗತ್ಯವಿದೆ. ಕನ್ನಡ ಅಸ್ಮಿತೆಗಾಗಿ ಕನ್ನಡಪರ ಕೆಲಸಗಳು ಅವರಿಂದ ಇಲ್ಲಿ ಇನ್ನೂ ಸಾಕಷ್ಟು ಆಗಬೇಕಾಗಿದೆ. ನಿದ್ದೆ ಮಂಪರದಲ್ಲಿರುವ ಜನಪ್ರತಿನಿಧಿಗಳನ್ನು ಎಚ್ಚರಗೊಳಿಸವ ಕೆಲಸವನ್ನೂ ಕುಮಾರಸ್ವಾಮಿಯವರೇ ಮಾಡಬೇಕಾದ ಅನಿವಾರ್ಯತೆಯಿದೆ.
ಬೆಳಗಾವಿ ಹದಿನೆಂಟು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದೆ ನರಳುತ್ತಿರವ ದೊಡ್ಡ ಜಿಲ್ಲೆ. ಕಾಂಗ್ರೆಸ್‍ನ ಮೂವರು ಪ್ರಭಾವಿ ನಾಯಕರು ಅವರೊಂದಿಗಿದ್ದಾರೆ. ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ಹಾಗೂ ಅಭಿವೃದ್ಧಿಗಾಗಿ ಮುನ್ನುಗ್ಗುವ ಸಾಹಸ ಪ್ರವೃತ್ತಿಯ ಲಕ್ಷ್ಮಿ ಹೆಬ್ಬಾಳಕರ ಅವರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಇಲ್ಲಿಯ ಅಭಿವೃದ್ಧಿಯ ತೀವ್ರತೆಯ ಕಾರಣ ಈ ಮೂವರಿಗೂ ಮಂತ್ರಿ ಪದವಿ ಲಭಿಸಿದರೆ ಹೆಚ್ಚು ಅನುಕೂಲವಾಗಲಿದೆ. ಕುಮಾರಪರ್ವಕ್ಕೆ ಮೆರಗು ದೊರೆಯಲಿದೆ. ಆ ಮೂಲಕ ಕುಮಾರಸ್ವಾಮಿ ಅವರು ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಹೊಸ ನೆಲೆಯನ್ನು ಮತ್ತೇ ಸ್ಥಾಪಿಸುವ ಅಗತ್ಯವಿದೆ. ರಾಜಕೀಯ ಹೊಸ ಗಾಳಿಗೆ ಅವರು ಕಾರಣವಾಗಬೇಕಾಗಿದೆ.
ಇಡೀ ಕನ್ನಡ ನಾಡಿನ ಜೊತೆಗೆ ಬೆಳಗಾವಿ ಸಹಿತ ಕುಮಾರಸ್ವಾಮಿ ಅವರಿಂದ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದು. ಅದನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾಯ್ದೆ ನೋಡಬೇಕಾಗಿದೆ.