ಬೆಳಗಾವಿ- ಕುರುಬ ಸಮಾಜವನ್ನು ಪರಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಕುಂದಾನಗರಿ ಬೆಳಗಾವಿಯಲ್ಲಿ ಹಾಲುಮತ ಮಹಾಸಭೆ ವತಿಯಿಂದ ಬೃಹತ್ತ ಪ್ರತಿಭಟನಾ ರ್ಯಾಲಿ ನಡೆಯಿತು ಲಕ್ಷಾಂತರ ಜನ ಕುರುಬ ಸಮುದಾಯದ ಜನ ಸಮಾವೇಶ ಗೊಳ್ಳುವದರ ಮೂಲಕ ಮೀಸಲಾತಿಗಾಗಿ ಐತಿಹಾಸಿಕ ನೆಲದಲ್ಲಿ ರಣಕಹಳೆಯೂದಿದರು
ಬೆಳಗಾವಿಯ ಅಶೋಕ ವೃತ್ತದಿಂದ ಆರಂಭಗೊಂಡ ಮೀಸಲಾತಿಯ ಮೆರವಣಿಗೆ ಸಿಪಿಎಡ್ ಮೈದಾನದವರೆ ಸಾಗಿತು ಮೆರವಣಿಗೆಯಲ್ಲಿ ಯುವಕರು ಮಹಿಳೆಯರು ಸೇರಿದಂತೆ ಕುರುಬ ಸಮಾಜದ ಲಕ್ಷಾಂತರ ಜನ ಭಾಗವಹಿಸಿ ಎಲ್ಲರ ಗಮನ ಸೆಳೆದರು
ಕರ್ನಾಟಕದಲ್ಲಿನ ಕುರುಬರನ್ನು ಎಸ್ ಟಿ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಈ ಪ್ಳರತಿಭಟನೆ ನಡೆಯಿತು
ಇದಾದ ಬಳಿಕ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ “ಕುರುಬ ಜಾಗೃತಿ ಸಮಾವೇಶ” ನಡೆಯಲಿದ್ದು ಹಾಲುಮತ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಶೋಷಣೆಗೊಳಗಾವಿರುವ ಮತ್ತು ಅಲೆಮಾರಿಗಳಾಗಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಡಗಕ್ಕೆ ಸೇರಿಸುವಂತೆ ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಆದ್ರೆ ಇದುವರೆಗೂ ಕುರುಬ ಸಮುದಾಯದ ಕೂಗನ್ನು ಯಾವ ರಾಜಕೀಯ ಪಕ್ಷಗಳು ಪರಿಗಣಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಕುರುಬ ಸಮುದಾಯವನ್ನು ಎಸ್ ಟಿಗೆ ಸೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಕುರುಬ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಿಪಿಎಡ್ ಮೈದಾನವದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಹಶಲುಮತ ಸಮಾಜದ ಮುಖಂಡರು ತಿಳಿಸಿದರು ಸಮಾವೇಶದಲ್ಲಿ ಕೈಗೊಂಡ ಜನಮತರ ನಿರ್ಣಯವನ್ನು ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವದು. ಈ ಸಮಾವೇಶದಲ್ಲಿ ಸ್ವಾಮೀಜಿಗಳು, ನಿವೃತ್ತ ನ್ಯಾಯಾಧಿಶರು, ವೈದ್ಯರು ಹಾಗೂ ಸಮಾಜದ ಬಾಂಧವರು ಪಾಲ್ಗೊಳ್ಳಲಿದ್ದಾರೆ
. ಇದೇ ವೇಳೆ ಮಾತನಾಡಿದ ಹಾಲುಮತ ಸಮಾಜದ ಮುಖಂಡರು , ರಾಯಣ್ಣ ಬ್ರಿಗೇಡ್ ಗೂ ಹಾಗೂ ಹಾಲಮತ ಮಹಾಸಭಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಯಣ್ಣ ಸ್ವಾತಂತ್ಯಕ್ಕಾಗಿ ಹೋರಾಟ ಮಾಡಿದ ಮಹಾನ್ ನಾಯಕ. ರಾಯಣ್ಣ ಯಾವುದೇ ಸಮುದಾಯ ಹಾಗೂ ಜಾತಿಗೆ ಸೀಮಿತವಾಗಿಲ್ಲ. ರಾಯಣ್ಣನ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡುವದು ಸರಿಯಲ್ಲ ಎಂದು ರುದ್ರಣ್ಣ ಗುಳಗುಳಿ ಎಚ್ಚರಿಕೆ ನೀಡಿದ್ದಾರೆ