*ನಾಗರಗಾಳಿ:ತಡರಾತ್ರಿ ಮುಳ್ಳುಹಂದಿ ಕೊಲ್ಲಿತ್ತಿದ್ದವನು ಅರೆಸ್ಟ್*
ಬೆಳಗಾವಿ: ನಶಿಸುವ ಅಂಚಿನಲ್ಲಿರುವ ಮುಳ್ಳುಹಂದಿ ಅಕ್ರಮವಾಗಿ ತಡರಾತ್ರಿ ಭೇಟಿ ಆಡಿದ್ದ ವ್ಯಕ್ತಿಯನ್ನು ನಾಗರಗಾಳಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ನಾಗರಗಾಳಿ ಅರಣ್ಯ ವಲಯದ ಬಸ್ತವಾಡ ಗ್ರಾಮದ ಪರಶುರಾಮ ನಾರಾಯಣ ಕಾಪೋಲಕರ ಎಂಬಾತ ಕಳೆದ ಜು. 8ರಂದು ಮಧ್ಯರಾತ್ರಿ ತನ್ನ ಸಿಂಗಲ್ ಬಾರ್ ಗನ್ ನಿಂದ ಮುಳ್ಳುಹಂದಿಗೆ ಗುಂಡು ಹಾರಿಸಿ, ಕಳ್ಳತನದಿಂದ ಹೊತ್ತೊಯ್ಯುತ್ತಿದ್ದಾಗ ಕರ್ತವ್ಯದಲ್ಲಿದ್ದ DRFO ಸಂತೋಷ ಗೌಡರ ಮತ್ತು ಸಿಬ್ಬಂಧಿ ರಾಜು ಚಿಂತಾ, ಮಂಜುನಾಥ ಹುಣಸಿಕಟ್ಟಿ, ಮಂಜುನಾಥ ಮಾದರ ಆತನನ್ನು ಸುಮಾರು 2ವರ್ಷದ ಮೃತ ಮುಳ್ಳು ಹಂದಿ ಸಹಿತ ವಶಕ್ಕೆ ಪಡೆದಿದ್ದರು.
ಕರ್ನಾಟಕ ಅರಣ್ಯ ಕಾಯ್ದೆ 1963, ವನ್ಯಜೀವಿ ಕಾಯ್ದೆ 1972 ಹಾಗೂ ಶಶ್ತ್ರಾಸ್ತ್ರ ಕಾಯ್ದೆಯಡಿ 1959 ಅಡಿ ಮಪ್ರಕರಣ ದಾಖಲಿಸಲಾಗಿದ್ದು ಖಾನಾಪುರ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಸರಕಾರಿ ವೈದ್ಯರಿಂದ ಹತ್ಯೇಗೀಡಾದ ಮುಳ್ಳುಹಂದಿಯ ಶವಪರೀಕ್ಷೆ ನಡೆಸಲಾಯಿತು. ನಾಗರಗಾಳಿ ACF ಎಂ. ಕೆ. ಪಾತ್ರೋಟ ಹಾಗೂ RFO ಎಂ. ಬಿ. ಕುಸನಾಳ ಉಪಸ್ಥಿತರಿದ್ದರು.