ಸಳಗಾವಿ ಸುದ್ದಿ:-
ಬೆಳಗಾವಿ:- ಕುತ್ತಿಗೆಯ ಸೇರಿದಂತೆ ನರ ದೌರ್ಬಲ್ಯದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವೀಯಾಗಿ ನಮ್ಮ ತಂಡದ ವತಿಯಿಂದ ನಡೆಸಲಾಗಿದೆ ಎಂದು ಲೆಕ್ ವ್ಯೂ ಆಸ್ಪತ್ರೆಯ ಬೆನ್ನೆಲುಬು ಶಸ್ತ್ರ ವೈಧ್ಯರಾದ ಡಾ/ಕೀರ್ತಿರಾಯ ಮಾನೆ ತಿಳಿಸಿದರು.
ಬೆಳಗಾವಿಯ ಲೆಕ್ ವ್ಯೂ ಆಸ್ಪತ್ರೆಯಲ್ಲಿ ಸುದ್ದಿಗೋಷ್ಟಿಯನ್ನುದ್ದೆಶಿಸಿ ಮಾತನಾಡಿದ ವೈಧ್ಯ ಮಾನೆಯವರು.
ಬೆನ್ನು ಹುರಿಯ,ಕುತ್ತಿಗೆ ನರದೌರ್ಬಲ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಮಸ್ಕತ್ ಓಮನ್ ದೇಶದ ವ್ರದ್ದ ಸುಲೀಮಾನ್ ಎಂಬುವರ ಶಸ್ತ್ರ ಚಿಕಿತ್ಸೆಯನ್ನು ಯಶಸ್ವೀಯಾಗಿ ನಡೆಸಿದ್ದೇವೆ ಎಂದು ಹೇಳಿದರು.
ಕೈ ಕಾಲುಗಳು ನಡುಗುವುದು,ಬರೆಯುವಾಗ ಕೈಗಳು ನಡುಗಿ ಬರೆಯಲಾಗದ ಸ್ಥಿತಿ,ನಡೆಯವಾಗ ಹಾಗೂ ಓಡುವಾಗ ರೋಗಿಯು ನೆಲಕ್ಕೆ ಕುಸಿದು ಬೀಳುತ್ತಿದ್ದರು.
ಕುತ್ತಿಗೆಯ ಹಾಗೂ ಬೆನ್ನುಹುರಿಯ ನರಗಳು ಸವೆತ ಹಾಗೂ ಅವುಗಳು ಕ್ಷೀಣತೆಯಿಂದ ರೋಗಿಯು ಸೂಪ್ಡ್ ಭಂಗಿ ಹಾಗೂ ಅತೀಯಾದ ಕುತ್ತಿಗೆ ನೋವಿನಿಂದ ಬಳಲುತ್ತಿದ್ದರು ಹಾಗೂ ರಕ್ತನಾಳದ ಥ್ರಂಬೋಸಿಸ್ ಕಾಯಿಲೆಗೆ ಕಾರಣವಾಬಹುದಾದ ಕಾಯಿಲೆ ಅಲ್ಲದೇ ಎಂ ಆರ್ ಐ ವರದಿಯಲ್ಲಿ ರೋಗಿಯ ಬೆನ್ನು ಹುರಿಗೆ ರಕ್ತದ ಕೋರತೆಯಿಂದ ನರಗಳು ಸಂಪೂರ್ಣವಾಗಿ ಸಂಕುಚಿತಗೋಂಡಿದ್ದವು.
ಸುಮಾರು 2ರಿಂದ 3ಲಕ್ಷದವರೆಗೆ ವೆಚ್ಚವಾಗುವ
ಈ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ನಡೆಸಿದಾಗ ಶಸ್ತ್ರ ಚಿಕಿತ್ಸೆಯನ್ನು ಕುತ್ತಿಗೆ ಮುಂಭಾಗದಿಂದ ಹಾಗೂ ಹಿಂಭಾಗದಿಂದ ಸಂಪೂರ್ಣ ಸಂಕುಚಿತಗೋಂಡಾಗ ಪೂರ್ತಿಯಾಗಿ ಕುತ್ತಿಗೆಯ ಎಲ್ಲಾ ಭಾಗಕ್ಕೂ ಸಮರ್ಪಕ ಪ್ಲೇಟ್ ಗಳನ್ನು ಅಳವಡಿಸಿ ಶಸ್ತ್ರ ಕುತ್ತಿಗೆಯ ನೋವಿನಿಂದ ಬಳಲುತ್ತಿದ್ದ ಸುಲೀಮಾನ್ ರಿಗೆ ಪ್ರಾಯೋಗಿಕವಾಗಿ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.
ಕುತ್ತಿಗೆಯ ಎರಡೂ ಭಾಗಗಳಾದ ಹಿಂದೆ ಹಾಗೂ ಮುಂದೆ ಡಿಸ್ಟ್ಕೆಕ್ಟಮಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ 4 ರಿಂದ 5ಜನ ವೈಧ್ಯರ ತಂಡದಿಂದ 8ಗಂಟೆಗಳ ಕಾಲ ಈ ಚಿಕಿತ್ಸೆಯನ್ನು ಯಶಸ್ವೀಯಾಗಿ ನಡೆಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಚಿಕಿತ್ಸೆಯ 2ವಾರಗಳ ನಂತರ ರೋಗಿಯು ಅತೀ ಆತ್ಮವಿಶ್ವಾಸದಿಂದ ಇರಲು ಸಾಧ್ಯವಾಗುತ್ತದೆ ಎಂದ ಅವರು ರೋಗಿಯು ಎಲ್ಲಾ ರೀತಿಯಿಂದಲೂ ಚೇತರಿಕೆ ಕಂಡು ಆರೋಗ್ಯವಾಗಿದ್ದಾರೆ ಎಂದು ಹೇಳಿದರು.
ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿ ಸುಲೀಮಾನ್ ಮಾತನಾಡಿ ಸಾವಿನ ಕದ ತಟ್ಟಿ ಬಂದ ನನಗೆ ಈ ಆಸ್ಪತ್ರೆಯ ವೈಧ್ಯರು ಸಮರ್ಪಕವಾದ ಚಿಕಿತ್ಸೆ ನೀಡಿ ನನಗೆ ಮರುಜನ್ಮ ನೀಡಿದ್ದಾರೆ ಈ ವೈಧ್ಯರಿಗೆ ನಾನು ಸದಾ ಚಿರಖುಣಿಯಾಗಿರುತ್ತೇನೆ ಎಂದು ವೈಧ್ಯರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಡಾ/ವೀರಣ್ಣಾ ಬೇವಿನಗಿಡದ,ಅರವಳಿಕೆ ವೈಧ್ಯರಾದ ಡಾ/ಸಾಗರ್, ಡಾ/ಪ್ರಶಾಂತ್ ಹಾಗೂ ವಿಶ್ವನಾಥ್ ಉಪ್ಪಲದಿನ್ನಿ ಸೇರಿದಂತೆ ಸಿಬ್ಬಂದಿವರ್ಗದವರು ಇದ್ದರು.