ಬೆಳಗಾವಿ- ಯಮಕನಮರಡಿ ಕ್ಷೇತ್ರದಲ್ಲಿ ಲಖನ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ನಡುವೆ ವಾಕ್ ಸಮರ ಮುಂದುವರೆದಿದ್ದು ಶಾಸಕ ಸತೀಶ್ ಜಾರಕಿಹೊಳಿ ಸವಾಲಿಗೆ ಸಹೋದರ ಲಖನ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ
ಸಹೋದರ ಲಖನ್ ಜಾರಕಿಹೊಳಿ ಪ್ರತಿಕ್ರಿಯೆ, ನೀಡಿ ಸತೀಶ್ ಜಾರಕಿಹೊಳಿ ಸವಾಲನ್ನ ಸ್ವೀಕಾರ ಮಾಡಿದ್ದೇನೆ, ಈ ಬಾರಿ ಯಮಕನಮರಡಿ ಕ್ಷೇತ್ರದಿಂದಲೆ ಸ್ಪರ್ಧೆ ಮಾಡುತ್ತೇನೆ, ಸತೀಶ್ ಜಾರಕಿಹೊಳಿ ಮೊದಲು ಬ್ಲಾಕ್ ಮೇಲ್ ಪ್ರವೃತ್ತಿ ಬಿಡಲಿ,
ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಲಖನ್ ಸತೀಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ
ಸತೀಶ್ ಜಾರಕಿಹೊಳಿ
ದಿನಕ್ಕೊಂದು ರಾಜಕೀಯ ಪಕ್ಷದ ಪಕ್ಷದ ಬಾಗಿಲು ತಟ್ಟುತಿದ್ದಾರೆ,
ಮೊದಲು ಸತೀಶ್ ಜಾರಕಿಹೊಳಿ ಯಾವ ಪಕ್ಷದಿಂದ ಸ್ಪರ್ಧಿಸಲ್ಲಿದ್ದೇನೆ ಎಂದು ಸ್ಪಷ್ಟಪಡಿಸಲಿ,ಎಂದು ಲಖನ್ ಸತೀಶ್ ಜಾರಕಿಹೊಳಿಗೆ ಸವಾಲ್ ಹಾಕಿದ್ದಾರೆ
ಶೀಘ್ರದಲ್ಲಿಯೇ ಯಮಕನಮರಡಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಲಿದ್ದೇನೆ,
ಯಾವ ಪಕ್ಷದಿಂದ ಚುನಾವಣೆ ಸ್ಪರ್ಧೆ ಬಗ್ಗೆ ಮುಂಬರುವ ದಿನಗಳಲ್ಲಿ ಹೇಳುತ್ತೇನೆ.
ಲಖನ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ