ಬೆಳಗಾವಿ- ಡ್ರಗ್ ಮುಕ್ತ ಕರ್ನಾಟಕ ಮಾಡಲು ಸರ್ಕಾರ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಅಧಿಕಾರಿಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ಸರ್ಕಾರ ಕೊಟ್ಟಿದೆ, ಯಾವುದೇ ಒತ್ತಡ, ಬಲಾಡ್ಯ ಇದ್ದರೂ ಯಾವುದಕ್ಕೂ ಮಣಿಯದೇ ಗೃಹ ಇಲಾಖೆ ಕೆಲಸ ಮಾಡುತ್ತಿದೆ, ಗೃಹಸಚಿವರು ಸಹ ವಿಶೇಷವಾದ ನಿಗಾ ವಹಿಸಿದ್ದಾರೆ, ಯಾರಿಗೂ ಸಂಶಯ ಬೇಡ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ರಾಜಕಾರಣಿ ಮಕ್ಕಳಿರಲಿ, ಪ್ರಭಾವ ವ್ಯಕ್ತಿಗಳಿರಲಿ ಅವರ ಹೆಡೆಮುರಿ ಕಟ್ಟುವ ಕೆಲಸ ಗೃಹ ಇಲಾಖೆ ಮಾಡ್ತಿದೆ, ರಾಗಿಣಿ ಇರಲಿ, ಪಾಗಿಣಿ ಇರಲಿ ನಮಗೆ ಸಂಬಂಧ ಇಲ್ಲ,
ಡ್ರಗ್ ಮಾಫಿಯಾದಲ್ಲಿ ರಾಗಿಣಿ ಜೈಲು ಹೋಗಿದ್ದಾರೆ, ತನಿಖೆ ನಡೀತಿದೆ, ತಪ್ಪಿತಸ್ಥರಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ,ಎಂದರು ಲಕ್ಷ್ಮಣ ಸವದಿ.
ರಾಗಿಣಿ ಜೊತೆ ಬಿ.ವೈ.ವಿಜಯೇಂದ್ರ ಫೋಟೋ ವೈರಲ್ ವಿಚಾರವಾಗಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಟನಟಿಯರು ಚುನಾವಣೆಯಲ್ಲಿ ಸ್ವಾಭಾವಿಕವಾಗಿ ಪಕ್ಷಗಳ ಪರ ಪ್ರಚಾರ ಮಾಡುತ್ತಾರೆ. ಡ್ರಗ್ ಮಾಫಿಯಾದಲ್ಲಿ ತನಿಖೆಗೊಳಲ್ಪಟ್ಟ ನಟಿಯರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಜೊತೆಗೂ ಫೋಟೋಗಳೂ ಇವೆ, ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋಗಳು ಸಹ ಇವೆ, ಅವರು ಡ್ರಗ್ ಮಾಫಿಯಾದಲ್ಲಿದ್ದಾರಂತೆ ಅವರಿಗೂ ಗೊತ್ತಿರಲಿಲ್ಲ, ನಮಗೂ ಗೊತ್ತಿರಲಿಲ್ಲ, ಚಿತ್ರನಟರಿಂದ ಜನರು ಆಕರ್ಷರಾಗ್ತಾರಂತ ಪ್ರಚಾರಕ್ಕೆ ಬಂದಿರ್ತಾರೆ, ಬಳಸಿಕೊಂಡಿರುತ್ತೇವೆ ಎಂದು ಡಿಸಿಎಂ ಸವದಿ ಉತ್ತರ ನೀಡಿದ್ರು.
ಡ್ರಗ್ಸ್ ಮಾಫಿಯಾ ಹಣದಿಂದ ಸಮ್ಮಿಶ್ರ ಸರ್ಕಾರ ಪತನ ಮಾಡಲಾಯಿತು ಎಂಬ ಹೆಚ್‌ಡಿಕೆ ಆರೋಪ ವಿಚಾರ ಪ್ರಸ್ತಾಪಿಸಿದ ಅವರು, ಕುಣಿಯಲು ಬರದಿದ್ದರೇ ನೆಲ ಡೊಂಕು ಎಂದಂತಾಗಿದೆ, ಇಲ್ಲಿಯವರೆಗೆ ಹೆಚ್‌ಡಿಕೆ ಯಾಕೆ ಬಾಯಿ ಮುಚ್ಚಿಕೊಂಡು ಇದ್ರು, ಹೆಚ್.ಡಿ.ಕುಮಾರಸ್ವಾಮಿಗೆ ಡಿಸಿಎಂ ಲಕ್ಷ್ಮಣ್ ಸವದಿ ಪ್ರಶ್ನಿಸಿದರು. ಹೇಳಬೇಕಾಗಿತ್ತಲ್ಲಾ? ಒಂದು ವರ್ಷ ಬೇಕಾಯ್ತಾ ಬಾಯಿ ಬಿಡಲಿಕ್ಕೆ?, ಯಾವುದೋ ಕುಂಟುನೆಪ ಹೇಳಿ ಅನವಶ್ಯಕವಾಗಿ ಹೆಚ್‌ಡಿಕೆ ಆರೋಪ ಮಾಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಮಾತು ಕೇಳಿದ್ರೆ ನಗು ಬರುತ್ತೆ ಎಂದರು.
ಸಚಿವ ಸಂಪುಟದ ವಿಸ್ತರಣೆ ಯಾವಾಗ ನಡೆಯುತ್ತದೆ ನನಗೆ ಗೊತ್ತಿಲ್ಲ,ಮುಖ್ಯಮಂತ್ರಿಗಳಿಗೆ ಕೇಳಿ ಹೇಳ್ತೀನಿ,ಸಚಿವ ಸಂಪುಟದಲ್ಲಿ ಉಮೇಶ್ ಕತ್ತಿ ಸೇರ್ಪಡೆಯಾದರೆ ಸ್ವಾಗತ,ಅವರು ಹಳೆಯ ಸ್ನೇಹಿತರು ಅವರೂ ಮಂತ್ರಿ ಆಗಬೇಕೆನ್ನುವದು ನಮ್ಮ ಅಪೇಕ್ಷೆ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗುಂಪುಗಾರಿಕೆ ಇಲ್ಲ,ರಾಜಕಾರಣದಲ್ಲಿ ಎಲ್ಲರಿಗೂ ಆಕಾಂಕ್ಷೆ, ಅಪೇಕ್ಷೆಗಳಿರುವದು ಸಹಜ ಎಂದು ಲಕ್ಷ್ಮಣ ಸವದಿ ಹೇಳಿದ್ರು