Breaking News

ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರದೇಶಾಭಿವೃದ್ಧಿಗೆ 9 ಕೋಟಿ- ಹೆಬ್ಬಾಳಕರ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವು ಬಡಾವಣೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನೂರು ಕೋಟಿ ವಿಶೇಷ ಪ್ಯಾಕೇಜ್ ಅನುದಾನದಲ್ಲಿ 9 ಕೋಟಿ ರೂ ವೆಚ್ಚದ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ

ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿಯಲ್ಲಿ ವಿಧಾನಸಭೆಯ ಅಧಿವೇಶನ ನಡೆಯುವ ಸಂಧರ್ಭದಲ್ಲಿ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರದಕ್ಷಣೆ ಮಾಡಿಸಿ ಇಲ್ಲಿಯ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಸಿದ ಫಲವಾಗಿ ಗ್ರಾಮೀಣ ಕ್ಷೇತ್ರದ ಸಮಸ್ಯಾತ್ಮಕ ಪ್ರದೇಶದ ಅಭಿವೃದ್ಧಿಗೆ 9 ಕೋಟಿ ವೆಚ್ಚದ ಕಾಮಗಾರಿಗಳು ಮಂಜೂರಾಗಿವೆ ಎಂದು ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು

ನಗರಾಭಿವೃದ್ಧಿ ಸಚಿವರ ಇಚ್ಛಾಶಕ್ತಿ,ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರ ಮತ್ತು ತಮ್ಮ ನಿರಂತರ ಪ್ರಯತ್ನದ ಫಲವಾಗಿ ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಕ್ಷೇತ್ರದ ವಿನಾಯಕ ನಗರ,ಜಯನಗರ,ಶಿಂದಿ ಕಾಲೋನಿ ಗಣೇಶ ನಗರ  ಹಾಗು ಓಂಕಾರ ನಗರದಲ್ಲಿ ರಸ್ತೆ ಹಾಗು ಚರಂಡಿ ನಿರ್ಮಿಸಲು ಎರಡು ಕೋಟಿ ಅನುದಾನ ಮಂಜೂರಾಗಿದೆ ಎಂದು ಹೆಬ್ಬಾಳಕರ ತಿಳಿಸಿದರು

ಅದರಂತೆ ಬಂಜಾರಾ ಕಾಲೋನಿ ಚಿಕ್ಕುಭಾಗ ಆಝಾಧ ಕಾಲೋನಿ ಗಳಲ್ಲಿ ಆಂತರಿಕ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಎರಡು ಕೋಟಿ,ಸಹ್ಯಾದ್ರಿ ನಗರ ಹಾಗು ಸುತ್ತ ಮುತ್ತಲಿನ ಪ್ರದೇಶಾಭಿವೃದ್ಧಿಗೆ ಎರಡು ಕೋಟಿ

ಪೋಲೀಸ್ ಕಾಲೋನಿ ಡ್ರೈವರ್ ಕಾಲೋನಿ ಇರಿಗೇಶನ್ ಕಾಲೋನಿ ಅಭಿವೃದ್ಧಿಗೆ ಒಂದುಕೋಟಿ ಹೊಸ ವೈಭವ ನಗರ ಶಾಹು ನಗರ ಅನ್ನಪೂರ್ಣವಾಡಿ ರಸ್ತೆ ಹಾಗು ಚರಂಡಿ ನಿರ್ಮಾಣಕ್ಕೆ ಎರಡು ಕೋಟಿ ಹೀಗೆ ಒಟ್ಟು 9 ಕೋಟಿ ರೂ ಮಂಜೂರಾಗಿವೆ ಎಂದು ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ

ಸಂಜಯ ಪಾಟೀಲ ಗ್ರಾಮೀಣ ಕ್ಷೇತ್ರದ ಶಾಸಕರಾಗಿ 9 ವರ್ಷಗಳು ಕಳೆದಿವೆ ಈ ಅವಧಿಯಲ್ಲಿ ಸರ್ಕಾರದ 300 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾದರೂ ಸಹ ಸಂಜಯ ಪಾಟೀಲ ಒಂದು ಬಾರಿ 80 ಲಕ್ಷ ಇನ್ನೊಂದು ಬಾರಿ ಒಂದು ಕೋಟಿ 65 ಲಕ್ಷ ಅನುದಾನ ಮಾತ್ರ ಮಂಜೂರು ಮಾಡಿಸಿದ್ದಾರೆ ಆದರೆ ಈಗ ತಾವು ಮಾಡಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ನಾನೇ ಮಾಡಿಸಿದ್ದೇನೆ ಎಂದು ಶಾಸಕ ಸಂಜಯ ಪಾಟೀಲ ಕ್ಷೇತ್ರದ ಜನರನ್ನು ದಿಶಾಬೂಲ ಮಾಡುತ್ತಿದ್ದಾರೆ ಎಂದು ಹೆಬ್ಬಾಳಕರ ಆರೋಪಿಸಿದ್ದಾರೆ

ಸಂಜಯ ಪಾಟೀಲ ಅವರು ಮಂಜೂರು ಮಾಡಿಸಿರುವ ಕಾಮಗಾರಿ ಗಳಲ್ಲಿ ನಾನೆಂದಿಗೂ ಹಸ್ತ ಕ್ಷೇಪಮಾಡಿಲ್ಲ ಆದರೆ ಈಗ ತಾವು ಮಂಜೂರು ಮಾಡಿಸಿರುವ ಕಾಮಗಾರಿಗಳನ್ನು ಮಾಡಿಸ್ತೀನಿ..ನಾನೇ ಮಂಜೂರು ಮಾಡ್ತೇನಿ ಎಂದು ಕಂಡು ಕಂಡಲ್ಲಿ ಹೇಳುತ್ತ ತಿರುಗಾಡುತ್ತಿದ್ದಾರೆ ಆದರೆ ಕ್ಷೇತ್ರದ ಜನರಿಗೆ ಸತ್ಯಾಂಶ ಏನು? ಅನ್ನೋದು ಗೊತ್ತಿದೆ ಎಂದು ಹೆಬ್ಬಾಳಕರ ತಿಳಿಸಿದ್ದಾರೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *