ಬೆಳಗಾವಿ : ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ನೀಡಿದ ಬರವಸೆಗಳ್ನನು ಈಡೇರಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವೀರತ ಪ್ರಯತ್ನ ನಡೆಸಿದ್ದು, ಗ್ರಾಮೀಣ ಕ್ಷೇತ್ರದ ರಸ್ತೆಗಳ ಸುಧಾರಣೆಗೆ ನೀರಾವರಿ ಇಲಾಖೆಯಿಂದ ಎಸ್‍ಇಪಿ, ಟಿಎಸ್‍ಪಿ ಯೋಜನೆಯಡಿಯಲ್ಲಿ 5 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ಜನ ವಾಸಿಸುವ ಬಡಾವಣೆಗಳ ರಸ್ತೆಗಳ ಸುಧಾರಣೆಗಾಗಿ ನೀರಾವರಿ ಇಲಾಖೆ ಎಸ್‍ಇಪಿ, ಟಿಎಸ್‍ಪಿ ಯೋಜನೆಯಡಿಯಲ್ಲಿ ಅನುದಾನ ನೀಡುತ್ತಿದೆ. ಬಿಡುಗಡೆಯಾಗಿರುವ 5 ಕೋಟಿ ರೂ. ಅನುದಾನದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರಡಿಗುದ್ದಿ ಗ್ರಾಮಕ್ಕೆ 10 ಲಕ್ಷ, ಖನಗಾಂವ ಕೆ.ಎಚ್. 5 ಲಕ್ಷ, ಕರಿಕಟ್ಟಿ 1 ಕೋಟಿ, ಭೀಮಘಡ 40 ಲಕ್ಷ, ಸೋಮನಟ್ಟಿ 10 ಲಕ್ಷ, ಮಾರಿಹಾಳ 10 ಲಕ್ಷ, ಚಂದೂರ 50 ಲಕ್ಷ, ಯದ್ದಲಬಾವಿಹಟ್ಟಿ 10ಲಕ್ಷ, ಚಂದನಹೊಸೂರ 15 ಲಕ್ಷ ಹೀಗೆ ಒಟ್ಟು 2.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.
ಉಳಿದ 2.50 ಕೋಟಿ ಅನುದಾನದಲ್ಲಿ ಸಾವಗಾಂವ 25 ಲಕ್ಷ, ಹಿಂಡಲಗಾ 25 ಲಕ್ಷ, ಹಲಗಾ 50 ಲಕ್ಷ, ಬಸ್ತವಾಡ 40 ಲಕ್ಷ, ಖನಗಾಂವ 5 ಲಕ್ಷ, ಬಾಳೆಕುಂದ್ರಿ 25 ಲಕ್ಷ, ಕಂಗ್ರಾಳಿ ಬಿ.ಕೆ. 25 ಲಕ್ಷ, ಕಂಗ್ರಾಳಿ ಕೆ.ಎಚ್. 30 ಲಕ್ಷ, ಹಿರೇಬಾಗೇವಾಡಿ 10 ಲಕ್ಷ ಹಾಗೂ ತಾರಿಹಾಳ ಗ್ರಾಮಕ್ಕೆ 20 ಲಕ್ಷ ಬಿಡುಗಡೆಯಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಸ್ತೆಗಳ ಸುಧಾರಣೆಗೆ ಲೋಕೊಪಯೋಗಿ ಇಲಾಖೆಯಿಂದ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆಯಿಂದ ವಿಶೇಷ ಅನುದಾನ ನೀಡುವಂತೆ ಸಚಿವರುಗಳಿಗೆ ಮನವಿ ಅರ್ಪಿಸಲಾಗಿದೆ. ಮಳೆಗಾಲ ಮುಗಿಯುವ ಒಳಗಾಗಿ ರಸ್ತೆಗಳ ಸುಧಾರಣೆಗೆ ವಿಶೇಷ ಅನುದಾನ ಬಿಡುಗಡೆಯಾಗಲ್ಲಿದ್ದು, ಮಳೆಗಾಲ ಮುಗಿದ ನಂತರ ರಸ್ತೆಗಳ ಸುಧಾರಣಾ ಕಾಮಗಾರಿಗಳು ನಡೆಯಲ್ಲಿವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬರವಸೆ ನೀಡಿದ್ದಾರೆ.
ನಾಳೆ ಅಭಿನಂದನಾ ಸಮಾರಂಭ
ವಿಧಾನ ಸಭೆಯ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗಾಗಿ ಹಗಲಿರಳು ಶ್ರಮೀಸಿರುವ ಹಿನ್ನಲೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬಾನುವಾರ ಬೆಳಗಾವಿಯ ಧರ್ಮನಾಥ ಭವನದಲ್ಲಿ ಪಕ್ಷದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ, ಮುಖಂಡರುಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮುಂಜಾನೆ 11 ಗಂಟೆಗೆ ಆರಂಭವಾಗಲ್ಲಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿಕೊಂಡಿದ್ದಾರೆ.