ಬೆಳಗಾವಿ-
ಪಿಎಲ್.ಡಿ ಬ್ಯಾಂಕ್ ಅದ್ಯಕ್ಷ ಉಪಾಧ್ಯಕ್ಷ ಚುನಾವಣೆ ಮುಂದುಡಿಕೆ ಪ್ರಕರಣಕ್ಕೆ ಸಮಂಧಿಸಿದಂತೆ ಧಾರವಾಡ ಹೈಕೋರ್ಟ್ ಪೀಠ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಧಾರವಾಡ ಆದೇಶ ನೀಡಿದೆ
ಅಗಸ್ಟ್ 28ರಂದು ನಡೆಯಬೇಕಿದ್ದ ಚುನಾವಣೆಯನ್ನು ಬೆಳಗಾವಿ ತಹಶೀಲ್ದಾರ ಮುಂದೂಡಿದ್ದರು ಅಗಸ್ಟ್ 27ರಂದು ಪಿಎಲ್.ಡಿ ಬ್ಯಾಂಕ್ ನಿರ್ದೇಶಕರೊಬ್ಬರು ಕಾಣೆಯಾಗಿದ್ದಾರೆ ಎಂದು ಕೋಡ್ ಮಾಡಿ ತಹಶಿಲ್ದಾರ ಚುನಾವಣೆ ಮುಂದೂಡಿದ್ದರು
ಇದನ್ನ ಪ್ರಶ್ನಿಸಿಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೈಕೋರ್ಟ್ ಮೇಟ್ಟಿಲೇರಿದ್ದರು ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಆದೇಶ ನೀಡಿದೆ
ಬೆಳಗಾವಿ ತಹಶಿಲ್ದಾರ ಹಾಗೂ ಪಿಎಲ್.ಡಿ ಬ್ಯಾಂಕ್ ಚುನಾವಣಾ ಅಧಿಕಾರಿಗೆ ಸೂಚನೆ ನೀಡಲಾಗಿದೆ ಪಿಎಲ್.ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮೊದಲ ಜಯ ಸಾಧಿಸಿದ್ದಾರೆ
ಹೆಬ್ಬಾಳ್ಕರ್ ಪರ ಇರುವ ಒಂಬತ್ತು ಜನ ನಿರ್ದೇಶಕರ ಒಪ್ಪಿಗೆ ಮೇರೆಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ
ಸಹಕಾರಿ ಸಂಘ ಸಂಸ್ಥೆಗಳ ಅಧಿನಿಯಮದ ಪ್ರಕಾರ ಸೆಪ್ಟೆಂಬರ್ 8 ರೊಳಗಾಗಿ ನಿಗಧಿತ ಅವಧಿ ಮುಗಿಯಲಿದ್ದು ಅಷ್ಟರೊಳಗಾಗಿ ಚುನಾವಣೆ ನಡೆಯುವ ಸಾಧ್ಯತೆ ಇದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ