Breaking News

ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ,ಅಧಿಕಾರಿಗಳ ಕ್ಲಾಸ್ ತೆಗೆದುಕೊಂಡ ಲಕ್ಷ್ಮೀ ಹೆಭ್ಬಾಳಕರ

ಬೆಳಗಾವಿ:- ಬೆಳಗಾವಿ ಗ್ರಾಮೀಣ ಕ್ಷೇತ್ರ ತೀರಾ ಹಿಂದುಳಿದ ಕ್ಷೇತ್ರವಾಗಿದೆ. 25 ವರ್ಷದ ಅಭಿವೃದ್ಧಿ ಕೆಲಸವನ್ನು ಐದೇ ವರ್ಷದಲ್ಲಿ ಮಾಡುತ್ತೇನೆಂದು ಹೇಳಿ ನಾನು ಇಲ್ಲಿಗೆ ಬಂದು ಕುಳಿತಿದ್ದೇನೆ. ಅತೀ ವೇಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡವಳಿದ್ದೇನೆ. ನನ್ನ ವೇಗಕ್ಕೆ ಹೊಂದಿಕೊಂಡು ಕೆಲಸ ಮಾಡಿ. ಇಲ್ಲದಿದ್ದರೇ ನಿಮಗೆ ಹೊಂದಾಣಿಕೆಯಾಗುವ ಪ್ರದೇಶಕ್ಕೆ ಹೋಗಿ ಇದು ನನ್ನ ಸೂಚನೆಯೂ ಅಲ್ಲ, ಆದೇಶವೂ ಅಲ್ಲ, ಇದು ನನ್ನ ರಿಕ್ವೇಷ್ಟ ಆಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದು ಹೀಗೆ.
ಬೆಳಗಾವಿ ನಗರದಲ್ಲಿರುವ ಜಿಲ್ಲಾ ಪಂಚಾಯತಿಯ ಹಳೆಯ ಕಟ್ಟಡದ ಸಭಾಭವನದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಭಿವೃದ್ಧಿ ಕಾಮಗಾರಿಗಳ ವಿವರವಾದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.
ಇಲಾಖಾವಾರು ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು ನಾನು ಅಧಿಕಾರದಲ್ಲಿ ಇರಲಿ ಅಥವಾ ಬಿಡಲಿ ನಾನು ಮಂತ್ರಿಯಾಗಲಿ, ಅಥವಾ ಬಿಡಲಿ ನನ್ನ ಕೆಲಸದ ಶೈಲಿ ಬದಲಾಗುವುದಿಲ್ಲ. ಅಧಿಕಾರ ಇಲ್ಲದಿದ್ದರೂ ನಾನು ಯಾವ ರೀತಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇನೆ ಎಂಬುದು ಎಲ್ಲ ಅಧಿಕಾರಿಗಳಿಗೆ ಗೊತ್ತಿದೆ. ಅಧಿಕಾರಿಗಳ ಸಹಕಾರ ನನಗೆ ಬೇಕು. ಎಲ್ಲರೂ ಸೇರಿಕೊಂಡು ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸೋಣ. ಮಾನವೀಯತೆ ಆಧಾರದ ಮೇಲೆ ಎಲ್ಲರೂ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ. ಜನರ ಸಂಕಷ್ಟಗಳಿಗೆ ಸ್ಪಂಧಿಸೋಣ ಎಂದು ಲಕ್ಷ್ಮೀ ಹೆಬ್ಬಾಳಕರ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಕ್ಷೇತ್ರದ ಜನ ನನ್ನಿಂದ ಹಲವಾರು ಅಪೇಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕಾಟಾಚಾರಕ್ಕೆ ನಾನು ಸಭೆ ಮಾಡುವುದಿಲ್ಲ. ಅಧಿಕಾರಿಗಳಿಗೆ ಮೂರು ತಿಂಗಳ ಕಾಲಾವಕಾಶÀ ಕೊಡುತ್ತೇನೆ. ಈ ಹಿಂದೆ ಏನಾಗಿದೆ ನಾನು ಕೇಳುವುದಿಲ್ಲ. ಇಂದಿನಿಂದ ಹೊಸ ಅಧ್ಯಾಯ ಆರಂಭವಾಗಿದೆ. ಹಳೆಯದನ್ನು ಮರೆತು ಹೊಸತನದೊಂದಿಗೆ ಹೊಸ ಅಧ್ಯಾಯದೊಂದಿಗೆ ಕೆಲಸ ಆರಂಭಿಸಿ. ಸರ್ಕಾರದ ಮಟ್ಟದಲ್ಲಿ ಯಾವುದೇ ರೀತಿಯ ಅಡ ತಡೆಯಿದ್ದರೆ ನನ್ನನ್ನು ಸಂಪರ್ಕಿಸಿ. ದಿನದ 24 ಗಂಟೆಯೂ ನಾನು ಜನರ ಸೇವೆಗಾಗಿ ಸಿದ್ಧಳಾಗಿದ್ದೇನೆಂದು ಲಕ್ಷ್ಮೀ ಹೆಬ್ಬಾಳಕರ ಅಧಿಕಾರಿಗಳಿಗೆ ತಿಳಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಜಿಲ್ಲಾ ಪಂಚಾಯತಿಯ ರಸ್ತೆಗಳು ಏಷ್ಟಿವೆ? ಅದರಲ್ಲಿ ಏಷ್ಟು ಕಿ. ಮೀ. ರಸ್ತೆಗಳು ಸುಸಜ್ಜಿತವಾಗಿವೆ. ಏಷ್ಟು ರಸ್ತೆಗಳು ಹದೆಗೆಟ್ಟಿವೆ? ಹದಗೆಟ್ಟ ರಸ್ತೆಗಳ ಸುಧಾರಣೆಗೆ ಏಷ್ಟು ಅನುದಾನ ಬೇಕು ಎನ್ನುವುದನ್ನು ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಅಧಿಕಾರಿಗಳು ಕೂಡಲೇ ಪ್ರಪೋಜಲ್‍ಗಳನ್ನು ರೆಡಿ ಮಾಡಿ ಸರ್ಕಾರದಿಂದ ಮಂಜೂರಾತಿ ಪಡೆದುಕೊಂಡು ಬರುವುದು ನನ್ನ ಜವಾಬ್ದಾರಿ ಎಂದು ಲಕ್ಷ್ಮೀ ಹೆಬ್ಬಾಳಕರ ಅಧಿಕಾರಿಗಳಿಗೆ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ಸರ್ಕಾರದ ಹಲವಾರು ಯೋಜನೆಗಳಿಗೆ ತಮ್ಮ ಜಮೀನು ನೀಡಿದ್ದಾರೆ. ರಾಕಸಕೊಪ್ಪ ಗ್ರಾಮದ ರೈತರು ಜಲಾಶಯ ಕಟ್ಟಲು ತಮ್ಮ ಜಮೀನು ನೀಡಿದ್ದರಿಂದ ಬೆಳಗಾವಿ ನಗರದ ಜನ ಜಲಾಶಯದ ನೀರು ಕುಡಿಯುತ್ತಿದ್ದಾರೆ. ಆದರೆ ರಾಕಸಕೊಪ್ಪ ಗ್ರಾಮದ ಜನರಿಗೆ ಕುಡಿಯಲು ನೀರಿಲ್ಲ. ಹಲಗಾ – ಬಸ್ತವಾಡ ಗ್ರಾಮದ ಜನ ಸುವರ್ಣ ಸೌಧ ಕಟ್ಟಲು ಜಮೀನು ನೀಡಿದರು. ಸುವರ್ಣ ಸೌಧದ ಸುತ್ತಲಿನ ಹಲವಾರು ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಿಲ್ಲ. ಬೆಳಗಾವಿ ನಗರದ ಕಸವನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ತುರಮರಿ ಗ್ರಾಮದಲ್ಲಿ ಡಂಪ್ ಮಾಡಲಾಗುತ್ತಿದೆ. ಹೀಗೆ ಸರ್ಕಾರದ ಯೋಜನೆಗಳಿಗೆ ತ್ಯಾಗ ಮಾಡಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರ ಜನ ಸರ್ಕಾರದ ಸವಲತ್ತುಗಳಿಗಾಗಿಯೇ ಪರದಾಡುತ್ತಿದ್ದಾರೆ. ಕ್ಷೇತ್ರದ ಹಲವಾರು ಗ್ರಾಮಗಳ ಜನ ವೃದ್ಧಾಪ್ಯ ವೇತನಕ್ಕಾಗಿ ಕಾಯುತ್ತಿದ್ದು ಅಧಿಕಾರಿಗಳು ಆಂದೋಲನ ರೂಪದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗಾವಿ ಉಪ ವಿಭಾಗಾಧಿಕಾರಿ, ಜಿಲ್ಲಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ, ತಾ. ಪಂ, ಅಧ್ಯಕ್ಷರು ಹಾಗೂ ವಿವಿಧ ಇಲಾಖೆÉಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *