ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಝಲಕ್ ಆರಂಭವಾಗಿದೆ ದಸರಾ ದಿನದಂದು ಈ ಕ್ಷೇತ್ರದಲ್ಲಿ ಅಭಿವೃದ್ಧಿಯ ಹಬ್ಬ ಮನೆ ಮಾಡಿದೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮಾವಿನಕಟ್ಟಿ ಹೊನ್ನಿಹಾಳ ಕೂಡು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ದಸರಾ ಹಬ್ಬದ ಉತ್ಸಾಹವನ್ನು ಇಮ್ಮಡಿ ಗೊಳಿಸಿದರು
ಶಾಸಕರ ಅಭಿವೃದ್ಧಿಗೆ ಮೆಚ್ವಿ ಮಾವಿನಕಟ್ಟಿ ಮತ್ತು ಹೊನ್ನಿಹಾಳ ಗ್ರಾಮದ ಹಿರಿಯರು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸತ್ಕರಿಸಿ ಗೌರವಿಸಿದರು
ಗ್ರಾಮದ ಹಿರಿಯರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹಿರಿಯರ ಆಶಿರ್ವಾದದಿಂದ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಹಬ್ಬ ಆರಂಭವಾಗಿದೆ ಸರ್ಕಾರ ತಮ್ಮ ಬೇಡಿಕೆಗಳಿಗೆ ತ್ವರಿತಗತಿಯ ಸ್ಪಂದನೆ ನೀಡುತ್ತಿದೆ ಎಂದು ಹೆಬ್ಬಾಳಕರ ಸಮಾಧಾನ ವ್ಯೆಕ್ತ ಪಡಿಸಿದರು
ರಾಜ್ಯದ ರೈತರ ಸಾಲ ಮನ್ನಾ ಮಾಡಿರುವ ರಾಜ್ಯದ ಸಮ್ಮಿಶ್ರ ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ಕೊಡುತ್ತಿದೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದು ಹೆಬ್ಬಾಳಕರ ಹೇಳಿದರು
ಕ್ರಾಂತಿಯ ನೆಲ ಕಿತ್ತೂರಿಗೆ ವಿಶೇಷ ಗೌರವ
ಬ್ರಿಟೀಷರ ವಿರುದ್ಧ ಸೆಡ್ಡು ಹೊಡೆದು ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕೆ ಎನಿಸಿ ಕೊಂಡಿರುವ ಕ್ರಾಂತಿ ನೆಲ ಕಿತ್ತೂರಿನ ಉತ್ಸವಕ್ಕೆ ರಾಜ್ಯ ಸರ್ಕಾರ 30 ಲಕ್ಷ ರೂ ಅನುದಾನ ಕೊಡುವದರ ಜೊತೆಗೆ ಹೆಚ್ವುವರಿಯಾಗಿ 50 ಲಕ್ಷ ರೂ ಅನುದಾನ ನೀಡುವ ಮೂಲಕ ರಾಜ್ಯ ಸರ್ಕಾರ ಕ್ರಾಂತಿಯ ನೆಲಕ್ಕೆ ವಿಶೇಷ ಗೌರವ ನೀಡಿದೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮೆಚ್ವುಗೆ ವ್ಯೆಕ್ತ ಪಡಿಸಿ ಮುಖ್ಯಮಂತ್ರಿಗಳಿಗೆ ಅಭಿನಂಧಿಸಿದ್ದಾರೆ