ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಲಕ್ಷ್ಮೀ ಹೆಬ್ಬಾಳಕರ ಅಪ್ರತಿಮ ಸಮಾಜ ಸೇವೆಯ ಜೊತೆಗೆ ಈಗ ಧರ್ಮ ಕಾರ್ಯದಲ್ಲೂ ಕೈಜೋಡಿಸಿ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಶ್ರವಣಬೆಳಗೊಳದಲ್ಲಿ ಭಗವಾನ ಬಾಹುಬಲಿಯ ಮಹಾಮಸ್ತಾಭಿಷೇಕ ನಡೆಯುತ್ತಿದೆ ಜಗತ್ತಿನ ಭಕ್ತರು ಈ ಪುಣ್ಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಈ ಧರ್ಮದ ಕಾರ್ಯದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಭಕ್ತರೂ ಪಾಲ್ಗೊಳ್ಳಬೇಕು ಎಂಬ ಮಹಾದಾಸೆಯಿಂದ ಲಕ್ಷ್ಮೀ ಹೆಬ್ಬಾಳಕರ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಭಕ್ತರಿಗೆ ಉಚಿತವಾಗಿ ಬಸ್ಸಿನ ಅನಕೂಲತೆ ಮಾಡಿಕೊಟ್ಟು ಲಕ್ಷ್ಮೀ ಹೆಬ್ಬಾಳಕರ ಎಲ್ಲರ ಗಮನ ಸೆಳೆದಿದ್ದಾರೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳ ಭಕ್ತರಿಗಾಗಿ ಉಚಿತವಾಗಿ ಹದಿನಾಲ್ಕು ಬಸ್ ಗಳ ವ್ಯೆವಸ್ಥೆ ಮಾಡಿದ ಹೆಬ್ಬಾಳಕರ ಇಂದು ಸಂಜೆ ಸುವರ್ಣ ಸೌಧದ ಬಳಿ ಭಕ್ತರಿಂದ ತುಂಬಿದ ಬಸ್ ಗಳನ್ನು ಶ್ರವಣಬೆಳಗೊಳಕ್ಕೆ ಬೀಳ್ಕೊಟ್ಟರು
ಈ ಸಂಧರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಭಗವಾನ ಬಾಹುಬಲಿಯ ಮಹಾಮಸ್ತಾಭಿಷೇಕ ಕಾರ್ಯಕ್ರಮ ನಡೆಯುತ್ತದೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಹೋಗಬೇಕು ಎಂಬ ಅಭಿಲಾಷೆ ಇರುತ್ತದೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಭಕ್ತರೂ ಇದರಲ್ಲಿ ಭಾಗವಹಿಸಿ ಪುಣೀತರಾಗಬೇಕು ಎಂಬ ಉದ್ದೇಶದಿಂದ ಮೊದಲ ಕಂತಿನಲ್ಲಿ ಹದಿನಾಲ್ಕು ಬಸ್ ಗಳ ವ್ಯೆವಸ್ಥೆ ಮಾಡಿಸಿದ್ದೇನೆ ಎರಡು ಮೂರು ಕಂತುಗಳಲ್ಲಿ 30 ಕ್ಕೂ ಹೆಚ್ಚು ಬಸ್ ಗಳು ಲಕ್ಷ್ಮೀ ತಾಯಿ ಫೌಂಡೇಶನ್ ವತಿಂತ ಶ್ರವಣಬೆಳಗೊಳಕ್ಕೆ ಧರ್ಮ ಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಹೆಬ್ಬಾಳಕರ ತಿಳಿಸಿದರು