ಬೆಳಗಾವಿ-ಹಿರಿಯರು ಮಂತ್ರಿ ಮಾಡ್ತೀವಿ ಅಂತ ಹೇಳಿದ್ರು ಯಾಕೋ..? ಏನೋ ..? ಕೊನೆ ಘಳಿಗೆಯಲ್ಲಿ ಮಂತ್ರಿ ಸ್ಥಾನ ತಪ್ಪಿತು ಆದ್ರೆ ಮಂತ್ರಿ ಸ್ಥಾನ ತಪ್ಪಿದೆಯಂತ ಸುಮ್ಮನೇ ಕೂರುವ ಜಾಯಮಾನ ನನ್ನದಲ್ಲ ಕ್ಷೇತ್ರದ ಜನರಿಗೆ ಬಹಳಷ್ಟು ಭರವಸೆ ಕೊಟ್ಟಿದ್ದೀನಿ ಮಂತ್ರಿ ಆಗಿದ್ದರೆ ಅದನ್ನು ಈಡೇರಿಸಲು ಸಾದ್ಯ ಆಗುತ್ತಿರಲಿಲ್ಲ ಕೊಟ್ಟ ಭರವಸೆಗಿಂತಲೂ ದುಪ್ಪಟ್ಟು ಕೆಲಸ ಮಾಡಿ ತೋರೀಸ್ತೀನಿ ಅಂತಾ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಮ್ಮ ಅಸಮಾಧಾನ ಹೊರ ಹಾಕುವದರ ಜೊತೆಗೆ ಪಕ್ಷದ ತೀರ್ಮಾಣಕ್ಕೆ ಭದ್ದವಾಗಿರುವದಾಗಿ ಘೋಷಿಸಿದ್ದಾರೆ
ಮಂತ್ರಿಗಿರಿಯ ಕಸರತ್ತು ನಡೆಸಿ ತವರು ಕ್ಷೇತ್ರಕ್ಕೆ ಮರಳಿದ ಅವರನ್ನು ಭೇಟಿಯಾದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪಕ್ಷ ಮೂರು ಬಾರಿ ಟಿಕೆಟ್ ನೀಡಿದೆ ನಾನು ಬೆಳೆಯಲು ಪಕ್ಷ ಕಾರಣವಾಗಿದೆ ಮಂತ್ರಿ ಆಗಿಲ್ಲ ಅಂತ ಸುಮ್ಮನೇ ಕೂರುವದಿಲ್ಲ ಕೆಲಸ ಮಾಡ್ತೀನಿ ಮಂತ್ರಿ ಆಗಲು ಮಾನದಂಡ ಏನು ಅಂತ ತಿಳ್ಕೊತೀನಿ ಕಳೆದ ಬಾರಿ ಎಂಎಲ್ ಸಿ ಗಳಿಗೆ ಸಚಿವ ಸ್ಥಾನ ಇಲ್ಲ ಅಂತ ಹೇಳಿದ್ರು ಕರ್ನಾಟಕದಲ್ಲಿ ಸ್ತೀ ಶಕ್ತಿ ಸಂಘಟನೆ ಮಾಡಿದ ಮೊಟಮ್ಮ ಸಚಿವ ಸ್ಥಾನದಿಂದ ವಂಚಿತರಾಗಿದ್ದರು ಆದ್ರೆ ಈ ಬಾರಿ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಅಂದು ಹಾಗೆ ಹೇಳಿದ ಹಿರಿಯರು ಇಂದು ಹೀಗೆ ಮಾಡಿದ್ದು ಯಾಕೆ ? ಎನ್ನುವ ಪ್ರಶ್ನೆ ನನಗೆ ಕಾಡ್ತಾ ಇದೆ ಪ್ರಶ್ನೆಗೆ ಉತ್ತರ ಹುಡುಕುತ್ತೇನೆ ಜಯಮಾಲಾ ಅವರ ಜೊತೆ ನಾನು ಒಳ್ಳೆಯ ಸಮಂಧ ಇಟ್ಟುಕೊಂಡಿದ್ದೇನೆ ಅವರಿಗೆ ಶುಭವಾಗಲಿ ಎಂದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ