ಬೆಳಗಾವಿ- ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದಲ್ಲಿ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು
ಗ್ರಾಮದ ರಸ್ತೆ ನಿರ್ಮಾಣ, ಸೇರಿದಂತೆ ಒಟ್ಟು ಒಂದು ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು
ಸಾಂಬ್ರಾ ಗ್ರಾಮದ ಮಂಗಳವಾರ ಪೇಠ,ಶುಕ್ರವಾರ ಪೇಠದಲ್ಲಿ ರಸ್ತೆ ಡಾಂಬರೀಕರಣ,ಮಾರುತಿ ಗಲ್ಲಿ ಮತ್ತು ಕಲ್ಮೇಶ್ವರ ನಗರದಲ್ಲಿ ಫೆವರ್ಸ ಹಾಕುವ ಕಾಮಗಾರಿ,ಮಹಾದೇವ ನಗರ ಒಂದನೇಯ ಕ್ರಾಸ್,ಗಣೇಶ ನಗರ,ಸ್ಮಶಾನ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು
ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸಾಂಬ್ರಾ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ, ಸೋಲಾರ್ ಎಲ್ ಇ ಡಿ ಲೈಟುಗಳ ಅಳವಡಿಕೆ ಸುಸಜ್ಜಿತವಾದ ಜಿಮ್ ನಿರ್ಮಾಣ ಮಾಡುವದಾಗಿ ಲಕ್ಷ್ಮೀ ಹೆಬ್ಬಾಳಕರ ಗ್ರಾಮಸ್ಥರಿಗೆ ತಿಳಿಸಿದರು
ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ಸಾಂಬ್ರಾ ಗ್ರಾಮ ,ಗ್ರಾಮ ವಿಕಾಸ ಯೋಜನೆಯಲ್ಲಿ ಅಭಿವೃದ್ಧಿ ಆಗಲಿದೆ ಜೊತೆಗೆ ಸಾಂಬ್ರಾ ಗ್ರಾಮದಲ್ಲಿ ಮೂವತ್ತು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಲು ಸ್ಥಳ ಗುರುತಿಸಲಾಗುತ್ತಿದೆ ಸ್ಥಳ ಅಂತಿಮವಾದ ಬಳಿಕ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ,ಕ್ಷೇತ್ರದ ಜನ ಹಲವಾರು ನೀರಿಕ್ಷೆಗಳನ್ನು ಇಟ್ಟುಕೊಂಡಿದ್ದು ಕ್ಷೇತ್ರದ ಜನರ ಕನಸು ನನಸು ಮಾಡಲು ಹಗಲಿರಳು ಶ್ರಮಿಸುತ್ತೇನೆ ಅಭಿವೃದ್ಧಿಯ ಮೂಲಕ ಗ್ರಾಮೀಣ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದು ಹೆಬ್ಬಾಳಕರ ಭರವಸೆ ನೀಡಿದರು
ಗ್ರಾಮ ಪಂಚಾಯತ್ ಅಧ್ಯಕ್ಷ ,ಲಕ್ಷ್ಮಣ ಕೊಲೆಪ್ಪಗೋಳ,ಈರಪ್ಪಾ ಸುಳೆಭಾಂವಿ,ನಾಗೇಶ ದೇಸಾಯಿ ,ಬಸು ದೇಸಾಯಿ ,ಸದಾಶಿವ ಪಾಟೀಲ ಸೇರಿದಂತೆ ಸಾಂಬ್ರಾ ಗ್ರಾಮದ ಹಿರಿಯರು ನೂರಾರು ಜನ ಗ್ರಾಮಸ್ಥರು ಉಪಸ್ಥಿತರಿದ್ದರು