Breaking News

ಕೌಂಟರ್ ಮೇಲೆ ಕುಳಿತಿದ್ದು ಗ್ರಾಮೀಣ ಕ್ಷೇತ್ರದ ಬಾಸು….ಅಹವಾಲು ಕೇಳಿದ್ದು ಆರು ತಾಸು…..!!!!!!

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಆಯೋಜಿಸುತ್ತಿರುವ ಜನತಾ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಶನಿವಾರ ಸಾಂಬ್ರಾದಲ್ಲಿ ನಡೆದ ಜನತಾ ದರ್ಶನದಲ್ಲಿ ಹಲವಾರು ಜನ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಆದೇಶದ ಪತ್ರಗಳನ್ನು ದೊರಕಿಸಿಕೊಟ್ಟ ಪ್ರಸಂಗವು ನಡೆಯಿತು.

ಬೆಳಗ್ಗೆ ಸಾಂಬ್ರಾ ಗ್ರಾಮದ ದುರ್ಗಾಮಾತಾ ದೇವಸ್ಥಾನದಲ್ಲಿ ನಡೆದ ಜನತಾ ದರ್ಶನದಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗ್ಗೆ 10:30ರಿಂದ ಸಂಜೆ 4 ಗಂಟೆಯ ವರೆಗೆ ಕೌಂಟರ್ ಮೇಲೆ ಕುಳಿತ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದ ಜನರಿಂದ ಸ್ವತಃ ಅರ್ಜಿ ಸ್ವೀಕರಿಸಿ ಸಾರ್ವಜನಿಕರ ಅಹವಾಲು ಕೇಳಿದ್ದು ಎಲ್ಲರ ಗಮನ ಸೆಳೆಯುವುದಲ್ಲದೆ ಈ ವಿಷಯ ಜನಮೆಚ್ಚುಗೆಗೆ ಪಾತ್ರವಾಯಿತು.

ಸಾಂಬ್ರಾ ಜನತಾ ದರ್ಶನದಲ್ಲಿ ಹಲವಾರು ಅಂಗವಿಕಲರು, ಅಂಗವಿಕಲ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಬಂದಿರುವುದನ್ನು ಕಂಡು ಭಾವುಕರಾದ ಲಕ್ಷ್ಮೀ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಇಂಥ ಅಂಗವಿಕಲರಿಗೆ ವೇತನ ಕೊಡದಿದ್ದರೇ ಮತ್ಯಾರಿಗೆ ನೀವು ವೇತನ ಕೊಡುತ್ತೀರಾ ಸ್ವಾಮಿ. ಮೊದಲೇ ಇವರು ವಿಕಲಾಂಗರು. ವೇತನಕ್ಕಾಗಿ ಇವರು ನಿಮ್ಮ ಕಚೇರಿಗೆ ಸುತ್ತಾಡಬೇಕಾ. ಮಾನವೀಯತೆ ಎನ್ನುವುದು ನಿಮಗೆ ಇಲ್ಲವೆ ಎಂದು ಲಕ್ಷ್ಮೀ ಹೆಬ್ಬಾಳಕರ ಹಲವಾರು ಜನರಿಗೆ ಸ್ಥಳದಲ್ಲಿಯೇ ಅಂಗವಿಕಲ ವೇತನದ ಆದೇಶ ಪತ್ರವನ್ನು ದೊರಕಿಸಿ ಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ, ಕ್ಷೇತ್ರದ ಎಲ್ಲ ಹಳ್ಳಿಗಳ ಮನೆಮನೆಗೂ ಹೋಗಲು ನಾನು ಸಿದ್ದನಿದ್ದೇನೆ. ಹಗಲು ರಾತ್ರಿ ಕುಳಿತುಕೊಂಡು ಜನರ ಕಷ್ಟ ಸುಖಗಳನ್ನು ಕೇಳಲು ನಾನು ಸಿದ್ದಳಾಗಿದ್ದೇನೆ. ಅಧಿಕಾರಿಗಳು ನನ್ನ ವೇಗಗಕ್ಕೆ ತಕ್ಕಂತೆ ಜನರ ಸೇವೆ ಮಾಡಬೇಕು. ಈ ವಿಷಯದಲ್ಲಿ ವಿಳಂಭ ಮಾಡಿದರೆ ನಾನು ಕ್ಷಮಿಸಲಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಂದೋಲನದ ರೂಪದಲ್ಲಿ ಅಭಿಯಾನ ನಡೆಸಿ ಕ್ಷೇತ್ರದ ಜನರಿಗೆ ಸರಕಾರದ ಸವಲತ್ತುಗಳನ್ನು ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಹೆಬ್ಬಾಳಕರ ತಾಕೀತು ಮಾಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಜನತಾ ದರ್ಶನ ನಿರಂತರವಾಗಿ ನಡೆಯಬೇಕು. ಎಲ್ಲ ಹಳ್ಳಿಗಳಿಗೆ ಅಧಿಕಾರಿಗಳ ದರ್ಶನವಾಗಬೇಕು. ಅಲ್ಲಿಯ ಸಮಸ್ಯೆಗಳನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕು. ಈ ಸೇವೆಯೇ ಅಧಿಕಾರಿಗಳ ದಿನಚರಿಯಾಗಬೇಕು ಎಂದು ಶಾಸಕಿ ಹೆಬ್ಬಾಳಕರ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಜನತಾ ದರ್ಶನದಲ್ಲಿ ಸಲ್ಲಿಸುತ್ತಿರುವ ಅರ್ಜಿಗಳ ಜೋತೆಗೆ ಅರ್ಜಿ ಸಲ್ಲಿಸುವವರ ದೂರವಾಣಿ ಸಂಕ್ಯೆಯನ್ನು ಪಡೆಯುತ್ತಿದ್ದೇನೆ. ಅವರು ಯಾವ ಸವಲತ್ತಿಗಾಗಿ ಅರ್ಜಿ ಸಲ್ಲಿಸಿದರೋ ? ಅದು ಎಲ್ಲಿಗೆ ಬಂತು ? ಎನ್ನುವುದನ್ನು ಫಾಲೋಅಪ್ ಮಾಡಲು ನನ್ನ ಸ್ವಂತ ಕಚೇರಿಯಲ್ಲಿ ಕಾಲ್ ಸೆಂಟರ್ ಆರಂಭಿಸುತ್ತೇನೆ. ನನ್ನ ಕ್ಷೇತ್ರದ ಜನರಿಗೆ ನ್ಯಾಯ ಸಿಗುವವರೆಗೆ ಹೋರಾಡುತ್ತೇನೆ ಎಂದು
ಲಕ್ಷ್ಮೀ ಹೆಬ್ಬಾಳಕರ, ಭರವಸೆ ನೀಡಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *