Breaking News

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕ್ರಾಂತಿ ನಗರಕ್ಕೆ ಸ್ವಾತಂತ್ರ್ಯೋತ್ಸವದ. ಗಿಫ್ಟ ….

ಬೆಳಗಾವಿ:14 ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮಪಂಚಾತಿ ವ್ಯಾಪ್ತಿಯ ಕ್ರಾಂತಿ ನಗರದಲ್ಲಿ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಈ ಭಾಗದ ಜನರಿಗೆ ಸ್ವಾತಂತ್ರ್ಯೋತ್ಸವದ ಕೊಡುಗೆಯಾಗಿ ಇಲ್ಲಿನ ರಸ್ತೆಗಳಿಗೆ ಫೇವರ್ ಹಾಕುವ ಕಾಮಗಾರಿಗೆ ಚಾಲನೆ ನೀಡಿದರು.
ಮಂಗಳವಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಹೆಬ್ಬಾಳಕರ್, ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಜೋತಿ ನಗರ, ಗಣೇಶಪುರ ಹಾಗೂ ಕ್ರಾಂತಿ ನಗರವನ್ನು ಕ್ಷೇತ್ರದ ಮಾದರಿ ಬಡಾವಣೆಗಳನ್ನಾಗಿ ಅಭಿವೃದ್ಧಿ ಪಡಿಸುವ ಸಂಕಲ್ಪ ಮಾಡಿದ್ದೇನೆ. ಈ ಮೂರು ಬಡಾವಣೆಯನ್ನು ಅಭಿವೃದ್ದಿ ಪಡೆಸುವುದಕ್ಕಾಗಿ ಸಮಾಜ ಕಲ್ಯಾಣ ಸಚಿವ ಪ್ರೀಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ಪ್ರಗತಿ ಕಾಲೋನಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿಯೇ ಮೊದಲಿಗಳಾಗಿ ಮೂರವರೆ ಕೋಟಿ ರೂ,ಗಳನ್ನು ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಗರಕ್ಕೆ ಹೊಂದಿಕೊಂಡಿರುವ ಈ ಮೂರು ಬಡಾವಣೆಗಳು ತೀರಾ ಹಿಂದುಳಿದಿವೆ. ಅಭಿವೃದ್ಧಿಗೆ ಕೇವಲ ಮೂರುವರೆ ಕೋಟಿ ಸಾಕಾಗುವುದಿಲ್ಲ. ಇನ್ನೊಂದು ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದ್ದೇನೆ. ಈಗ ಚುನಾವಣೆ ಮುಗಿದಿದೆ. ಇಲ್ಲಿಯ ಜನ ಪಕ್ಷ ಪಾತ ಮಾಡದೆ ತಮ್ಮ ಬಡಾವಣೆಯ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು. ಅಭಿವೃದ್ಧಿಯ ವಿಷಯದಲ್ಲಿ ನಾನೆಂದು ರಾಜಕಾರಣ ಮಾಡುವುದಿಲ್ಲ. ಅಧಿಕಾರ ಇರುವವರೆಗೆ ನಿಮ್ಮ ಸೇವೆ ಮಾಡುತ್ತೇನೆ ಎಂದರು.
ನಾನು ನಿಮ್ಮ ಶಾಸಕಿಯಲ್ಲ. ನಿಮ್ಮ ಮನೆಯ ಮಗಳು. ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ನನಗೆ ಹೇಳಿ. ಸರಕಾರಿ ಕಚೇರಿಗಳಿಗೆ ನನ್ನ ಕ್ಷೇತ್ರದ ಜನರು ಎಂದಿಗೂ ಅಲೆದಾಡಬಾರದು. ಸರಕಾರಿ ಕಚೇರಿಗಳನ್ನೇ ನಿಮ್ಮ ಮನೆಯ ಬಾಗಿಲಿಗೆ ತರುತ್ತೇನೆ. ಗ್ರಾಮೀಣ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿಯನ್ನಾಗಿಸುವೆ ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಬೋಸಲೆ ಮಾತನಾಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಅಲ್ಪಾವಧಿಯಲ್ಲಿಯೇ ಈ ಭಾಗದ ಅಭಿವೃದ್ಧಿಗೆ ಚಾಲನೆ ಕೊಟ್ಟಿರುವುದು ನಮಗೆಲ್ಲ ಸಂತಸ ತಂದಿದೆ. ಅವರು ಈ ಭಾಗದ ಭಾಗ್ಯವಿದೇತಿಯಾಗಿ ಕ್ಷೇತ್ರದಲ್ಲಿ ಅವತರಿಸಿದ್ದಾರೆ. ಈ ಭಾಗದಲ್ಲಿ ಕಳೆದ 10 ವರ್ಷಗಳಿಂದ ಯಾರೋಬ್ಬರು ಅಭಿವೃದ್ಧಿ ಮಾಡುವ ಮನಸ್ಸು ಮಾಡಿರಲಿಲ್ಲ. ಅತ್ಯಂತ ಕಡು ಬಡವರು ವಾಸಿಸುವ ಈ ಪ್ರದೇಶದಲ್ಲಿ ಅಭಿವೃದ್ಧಿಯ ಕಾಮಗಾರಿ ಆರಂಭವಾಗಿರುವುದು ನಮಗೆಲ್ಲರಿಗೂ ಹಬ್ಬ ಎಂದು ಹೆಬ್ಬಾಳಕರ್ ಕಾರ್ಯಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವರಾಜ ಕದಂ,ಅರುಣ ಕಟಾಂಬಳೆ, ಮೌನೇಶ್ವರ ಗರಗ, ರಮೇಶ ಹಿರೋಜಿ, ಕೃಷ್ಣಾ ಪಾಟೀಲ, ವಿವೇಕ ಜಾಧವ, ಸುನೀಲ ಸುರ್ವೇ, ಕೃಷ್ಣಾ ಕಟಾಂಬಳೆ ಸೇರಿದಂತೆ ಮೊದಲಾದವರು ಹಾಜರಿದ್ದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *