ಬೆಳಗಾವಿ-
ಮುಂಬರುವ ಲೋಕಸಭೆ ಚುನಾವಣೆ ಅಭ್ಯ ರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭವಿದೆ ಹೈಕಮಾಂಡ್ ಪಕ್ಷದ ಅಭ್ಯರ್ಥಿಯ ಆಯ್ಕೆ ಸ್ವಾತಂತ್ರ್ಯ ನೀಡಿದೆ ಸ್ಥಳೀಯ ಮುಖಂಡರ ಜತೆಗೆ ಇರೋ ಭಿನ್ನಾಭಿಪ್ರಾಯ ಇಲ್ಲಿಗೆ ಸಿಮೀತ
ಈ ಜಗಳ ಲೋಕಸಭೆ ಚುನಾವಣೆ, ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುವದಿಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ
ಪಕ್ಷದ ಒಳಿತಿಗಾಗಿ ತಗ್ಗಿ, ಬಗ್ಗಿ ನಡೆಯಲು ನಾನು ಸಿದ್ಧ ಆದರ ನನ್ನ ಕ್ಷೇತ್ರದ ವಿಚಾರ ಬಂದಾಗ ನಾನು ನ್ಯಾಯ ಒದಗಿಸಲು ಹೋರಾಟ ಮಾಡುತ್ತೇನೆ
ಕಾಂಗ್ರೆಸ್ ಸಭೆಯಲ್ಲಿ ರಮೇಶ ಜಾರಕಿಹೊಳಿ, ಡಿಕೆಶಿ ಜಟಾಪಟಿ ವಿಚಾರ ಜಾರಕಿಹೊಳಿ ದೊಡ್ಡವರು, ಅವರು ಸಮರ್ಥರಿದ್ದಾರೆ ಅವರ ಬಗ್ಗೆ ನಾನೇನು ಹೇಳಲ್ಲ ಕಾಂಗ್ರೆಸ್ ಸಭೆಯಲ್ಲಿ ನಡೆದಿರೋದು ಬೇರೆ, ಮಾದ್ಯಮದಲ್ಲಿ ಬಂದಿರೋದು ಬೇರೆ ನನ್ನ ವಿಚಾರದಲ್ಲಿ ರಮೇಶ ಜಾರಕಿಹೊಳಿ, ಡಿಕೆಶಿ ನಡುವೆ ವಾಗ್ದಾದ ನಡೆದಿಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ ಸ್ಪಷ್ಡಪಡಿಸಿದ್ದಾರೆ
ಲೋಕಸಭೆ ಚುನಾವಣೆಯ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ವಾಗ್ವಾದ ನಡೆದಿರುವದು ಸತ್ಯ ಆದರೆ ನನ್ನ ವಿಚಾರದಲ್ಲಿ ವಾಗ್ವಾದ ನಡೆದಿದೆ ಎಂದು ಮಾದ್ಯಮಗಳಲ್ಲಿ ವರದಿ ಬಂದಿದೆ ಎಂದು
ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾದ ಮಾದ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ
ಲೋಕಸಭಾ ಚುನಾವಣೆಯಲ್ಲಿ ಜಾರಕಿಹೋಳಿ ಹೇಳಿದ ಅಭ್ಯರ್ಥಿಗೆ ನಾನು ಬೆಂಬಲ ನೀಡುತ್ತೇನೆ
53 ಸಾವಿರ ಲೀಡ್ ನನ್ನ ಕ್ಷೇತ್ರದಲ್ಲಿ ಅವರಿಗೆ ಕೊಡಿಸುತ್ತೇನೆ