ಬೆಳಗಾವಿ- ಚುನಾವಣೆಯ ಸಂಧರ್ಭದಲ್ಲಿ ಹಳ್ಳಿ ಹಳ್ಳಿಗೆ ರಸ್ತೆ ,ಮನೆ ಮನೆಗೆ ನೀರು ಎಂದು ಭರವಸೆಯ ಘೋಷವಾಕ್ಯ ದೊಂದಿಗೆ ಪ್ರಚಾರ ಮಾಡಿದ್ದ ಲಕ್ಷ್ಮೀ ಹೆಬ್ಬಾಳಕರ ನುಡಿದಂತೆ ನಡೆಯುತ್ತಿದ್ದು ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗಳ ಪರ್ವ ಆರಂಭಿಸಿದ್ದಾರೆ
ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಬಿಕೆ ಮತ್ತು ಕಂಗ್ರಾಳಿ ಕೆಹೆಚ್ ,ಹಾಲಗಿಮರ್ಡಿ ಗ್ರಾಮಗಳ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬೆನ್ನಲ್ಲಿಯೇ ಇಂದು ಹಿರೇಬಾಗೇವಾಡಿಯ ಪ್ರಮುಖ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು
ಹಿರೇಬಾಗಿವಾಡಿಯಲ್ಲಿ ಬೈಲಹೊಂಗಲ ರಸ್ತೆಗೆ ಸಂಪರ್ಕ ನೀಡುವ ರಸ್ತೆಗೆ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು
ಈ ಸಂಧರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಿಸಿ ಪಾಟೀಲ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗಾಗಿ ಅವತರಿಸಿದ್ದಾರೆ ನುಡಿದಂತೆ ನಡೆಯುವ ಜೊತೆಗೆ ಕ್ಷೇತ್ರದ ಜನರ ನರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡಿಸುತ್ತಿದ್ದು ಐದು ವರ್ಷದಲ್ಲಿ ಕ್ಷೇತ್ರದ ಕರಾಳ ಚಿತ್ರಣ ಬದಲಾಗಿ ಅಭಿವೃದ್ಧಿಯ ನೋಟ ಕಾಣುವದರಲ್ಲಿ ಸಂಶಯವೇ ಇಲ್ಲ ಎಂದರು
ಹಿರೇಬಾಗೇವಾಡಿಯ ಕಾಂಗ್ರೆಸ್ ಮುಖಂಡ ಸುರೇಶ ಇಟಗಿ ಮಾತನಾಡಿ ಚುನಾವಣೆಯ ಸಂಧರ್ಭದಲ್ಲಿ ಲಕ್ಷ್ಮೀ ಅಕ್ಕಾ ..ಅಭಿವೃದ್ಧಿ ಪಕ್ಕಾ…ಪ್ರಚಾರ ಕೇಳಿದ್ದೇವು ಆದರೆ ಇಂದು ಅದು ಸಾಕಾರಗೊಳ್ಳುತ್ತಿರುವದನ್ನು ನೋಡಿ ಸಂತೋಷವಾಗುತ್ತಿದೆ ,ಸಿದ್ಧನಭಾಂವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕೆರೆ ತುಂಬಿಸುವ ಯೋಜನೆಯ ಕಾಮಗಾರಿಯೂ ಮುಕ್ತಾಯದ ಹಂತಕ್ಕೆ ಬಂದಿದ್ದು ಲಕ್ಷ್ಮೀ ಹೆಬ್ಬಾಳಕರ ಅವರು ನಮ್ಮ ಕ್ಷೇತ್ರದ ಶಾಸಕರಷ್ಟೇ ಅಲ್ಲ ಅವರು ನಮ್ಮ ಕ್ಷೇತ್ರದ ಭಾಗೀರಥಿ,ಭಾಗ್ಯದ ಹೆಬ್ಬಾಗಿಲು ಎಂದು ಲಕ್ಷ್ಮೀ ಹೆಬ್ಬಾಳಕರ ಅವರ ಸಮಾಜಿಕ ಕಳಕಳಿಯ ಬಗ್ಗೆ ಪ್ರಶಂಸೆ ವ್ಯೆಕ್ತ ಪಡಿಸಿದರು
ಈ ಸಂಧರ್ಭದಲ್ಲಿ ಹಿರೇಬಾಗೇವಾಡಿ ಗ್ರಾಮದ ಹಿರಿಯರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ