ಬೆಳಗಾವಿ- ಕೇಂದ್ರದ ಬಿಜೆಪಿ ಸರ್ಕಾರ 500, ಹಾಗು 1ಸಾವಿರ ಮುಖಬೆಲೆಯ ನೋಟುಗಳನ್ನು ಅಮಾನ್ಯ ಗೊಳಿಸಿ ಜನಸಾಮಾನ್ಯರ ಹೊಟ್ಟೆ ಮೇಲೆ ಬರೆ ಎಳೆದು ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಲುಪಿಸಿದೆ ಎಂದು ಆರೋಪಿಸಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಘಟಕದ ನೂರಾರು ಕಾರ್ಯಕರ್ತರು ನೋಟು ಅಮಾನ್ಯ ಗೊಳಿಸಿದ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದರು
ನಗರದ ಕ್ಲಬ್ ರಸ್ತೆಯಲ್ಲಿರುವ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಬೃಹತ್ತ ಪ್ರತಿಭಟನಾ ರ್ಯಾಲಿ ಹೊರಡಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡರು
ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪಿ ವಿ ಮೋಹನ್,ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ,ಅವರು ಗ್ರಾಮೀಣ ಜಿಲ್ಲಾ ಘಟಕದ ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು
ಜಿಲ್ಲೆಯ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಕೇಂದ್ರದ ಮೋದಿ ಸರ್ಕಾರ ದೇಶದ ಜನರಿಗೆ ಅಂಗೈಯಲ್ಲಿ ಅರಮನೆ ತೋರಿಸಿ ಕಪ್ಪು ಹಣ ತಂದು ದೇಶದ ಜನರ ಅಕೌಂಟ್ ಗಳಿಗೆ ತಲಾ ಹದಿನೈದು ಲಕ್ಷ ರೂ ಜಮಾ ಮಾಡುತ್ತೇವೆ ಎಂದು ಹೇಳಿ ದೇಶದ ಜನರಿಗೆ ಮೋಸ ಮಾಡಿದೆ ಕಪ್ಪು ಹಣವನ್ನು ತರದೇ ದೇಶದಲ್ಲಿ ಉದ್ಯೋಗ ಸೃಷ್ಠಿ ಮಾಡದೇ ಜನಸಾಮಾನ್ಯರ ಮೇಲೆ ಜಿಎಸ್ ಟಿ ಎಂಬ ಹೊರೆ ಹೊರಿಸಿ ಭಾರತದಲ್ಲಿ ನಿರುದ್ಯೋಗ ಸೃಷ್ಠಿ ಮಾಡಿದೆ ಎಂದು ಆರೋಪಿಸಿದರು
ನೋಟು ಅಮಾನ್ಯ ದಿಂದ ದೇಶದ ಜನರಿಗೆ ಯಾವುದೇ ರೀತಿಯ ಲಾಭ ಆಗಲಿಲ್ಲ ನೋಟು ಅಮಾನ್ಯದಿಂದ ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿದ್ದು ನೋಟು ರದ್ದತಿ ಮಾಡಿದ ಈ ದಿನ ದೇಶದ ಪಾಲಿಗೆ ಕರಾಳ ದಿನ ಎಂದು ಹೆಬ್ಬಾಳಕರ ಆರೋಪಿಸಿದರು
ನೋಟು ರದ್ದತಿ ಅವೈಜ್ಞಾನಿಕವಾಗಿದ್ದು ಇದರಿಂದ ದೇಶದ ಕೂಲಿ ಕಾರ್ಮಿಕರು ಜನಸಾಮಾನ್ಯರು ಬಡವರು ಇನ್ನುವರೆಗೆ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೆಬ್ಬಾಳಕರ ಆರೋಪಿಸಿದರು
ಪಿವಿ ಮೋಹನ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳಿಗೆ ಸಾಥ್ ನೀಡುವ ಸರ್ಕಾರವಾಗಿದ್ದು ನೋಟು ರದ್ದು ಮಾಡಿ ದೇಶವನ್ನು ಅಧೋಗತಿಗೆ ಕೊಂಡೊಯ್ದ ಸರ್ಕಾರ ಬಡವರ ಬದುಕಿಗೆ ಆಸರೆಯಾಗುವಂತಹ ಯಾವುದೇ ಕಾರ್ಯಕ್ರಮ ಜಾರಿಗೆ ತಂದಿಲ್ಲ ಎಂದು ಆರೋಪಿಸಿದ ಅವರು ಶಾಸಕ ಸಂಜಯ ಪಾಟೀಲರ ವಿರುದ್ಧ ಕಿಡಿಕಾರಿದರು ಸಂಜಯ ಪಾಟೀಲ ಮುಖ್ಯಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡಿ ಅವರ ಸಂಸ್ಕೃತಿ ಏನು ಅನ್ನೋದನ್ನು ತೋರಿಸಿ ಕೊಟ್ಟಿದ್ದಾರೆ ಪೋಲೀಸರು ಸಂಜಯ ಪಾಟೀಲರ ವಿರುದ್ಧ ಸೋ ಮೋಟೋ ಕೇಸು ಹಾಕಿ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು
ನೋಟು ರದ್ದತಿಯ ಬಿಜೆಪಿ ಸರ್ಕಾರದ ನಿರ್ಧಾರವನ್ನು ಖಂಡಿಸಿದರು
ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸಂಜಯ ಪಾಟೀಲ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ನಡೆಸಿದರು ಪೋಲೀಸರು ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು
ಸಿಸಿ ಪಾಟೀಲ,ಯುವರಾಜ ಕದಮ್ ಬಸವರಾಜ ಶೇಗಾವಿ ಮೃನಾಲ ಹೆಬ್ಬಾಳಕರ,ಕಿರಣ ಪಾಟೀಲ ಪಂಚನಗೌಡ್ರು ಮೋಹನ ರೆಡ್ಡಿ ರಾಜಾ ಸಲೀಂ ಕಾಶಿಮನವರ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು