ಬೆಳಗಾವಿ: ಇಲ್ಲಿನ ಪಿಎಲ್ಡಿ ಬ್ಯಾಂಕ್ ಚುನಾವಣೆಯ ಬಳಿಕಹಾವು-ಮುಂಗೂಸಿಯಂತಿದ್ದ ಸಚಿವ ಸತೀಶ ಜಾರಕಿಹೊಳಿ- ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕವೇ ಕುಳಿತುಕೊಂಡು ಅಚ್ಚರಿ ಮೂಡಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸತೀಶ- ಲಕ್ಷ್ಮಿ ಅಕ್ಕಪಕ್ಕವೇ ಕುಳಿತುಕೊಂಡರು.
ಹ್ಯಾಟ್ರಿಕ್ ಗೆಲುವ ದಾಖಲಿಸಿ, ಇದೀಗ ಬೌಂಡರಿ ಹೊಡೆಯಲು ಸಜ್ಜಾಗಿರುವ ಬಿಜೆಪಿಯ ಸುರೇಶ ಅಂಗಡಿ ಮಣಿಸಲು ಕೈ ನಾಯಕರು ಒಂದಾಗಿದ್ದಾರೆ. ವಿಶೇಷ ಅಂದ್ರೆ ಸತೀಶ ಜಾರಕಿಹೊಳಿ- ಲಕ್ಷ್ಮೀ ಹೆಬ್ಬಾಳಕರ ಮುನಿಸು ಮರೆತು ಒಂದಾಗಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲಾಗುವುದು. ಇದಕ್ಕಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಮಾಸಿಕ ೬ ಸಾವಿರ ರೂ. ನೀಡಲಾಗುವುದು. ಎಂದು ಸತೀಶ್ ಜಾರಕೊಹೊಳಿ ಹೇಳಿದರು
ರಮೇಶ್ ಜಾರಕೊಹೊಳಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪರವಾಗಿ ಕೆಲಸ ಮಾಡ್ತಾರೆ ಎಂದು ಸತೀಶ್ ಹೇಳಿದರು
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವುಕಾಂತ ಸಿಧ್ನಾಳ ಮಾತನಾಡಿ ಟಿಕೆಟ್ ಸಿಕ್ಕಿಲ್ಲ ಅಂತಾ ಅಸಮಾಧಾನ ಇಲ್ಲ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ರು