ಬೆಳಗಾವಿ- ಜುಲೈ 2 ರಂದು ಬೆಂಗಳೂರಿನಲ್ಲಿ ನಡೆಯುವ,ಕೆಪಿಸಿಸಿ ಅದ್ಯಕ್ಷರು ಮತ್ತು,ಕಾರ್ಯಾದ್ಯಕ್ಷರುಗಳ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಹತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡುವದರ ಜೊತೆಗೆ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ,ಡಿಜಿಟಲ್ ಮಿಡಿಯಾ ಮೂಲಕ ಪ್ರಸಾರವಾಗುವ ಈ ಕಾರ್ಯಕ್ರಮ ದೇಶದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ನಾನು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷೆಯಾಗಿರುವಾಗ,ಬಹಳಷ್ಟು ಹೋರಾಟ ಮಾಡಿ,ಜಾಗೆಯನ್ನು ಖರೀಧಿಸಿ,ಬಹಳಷ್ಟು ಸ್ಟ್ರಗಲ್ ಮಾಡಿ ಕಾಂಗ್ರೆಸ್ ಪಕ್ಷದ ದೇವಸ್ಥಾನ ಕಟ್ಟಿದೆ ಈ ದೇವಸ್ಥಾನದಲ್ಲಿ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸುವದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದು ಹೆಬ್ಬಾಳಕರ ಹೇಳಿದರು.
ರಾಜ್ಯದ ಜನ ಜುಲೈ 2 ಕಾರ್ಯಕ್ರಮ ನೋಡಲು ನಗರ ಮತ್ತು ಹಳ್ಳಿಗಳಲ್ಲಿ,ಒಟ್ಟು 7500 ಕಡೆ ಸ್ಕ್ರೀನ್ ಮತ್ತು ಟಿವ್ಹಿ ವ್ಯೆವಸ್ಥೆ ಮಾಡಿದ್ದೇವೆ,ಜೊತೆಗೆ ಎಲ್ಲ ಟಿವ್ಹಿ ಚಾನೆಲ್ ಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರವೂ ಇರುತ್ತದೆ.ವಿಶೇಷವಾಗಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ನುಡಿಯುವಾಗ ಹತ್ತು ಲಕ್ಷ ಜನ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ನೀಡುವ ಮೂಲಕ ಹೊಸ ಇತಿಹಾಸ ಸೃಷ್ಠಿಸಲಿದ್ದಾರೆ ಎಂದು ಹೆಬ್ಬಾಳಕರ ಹೇಳಿದರು.
ಪಕ್ಷವನ್ನು ಬೇರುಮಟ್ಟದಿಂದ ಸಂಘಟಸಲು ಪಕ್ಷದ ನಾಯಕರು ಶ್ರಮಿಸುತ್ತಿದ್ದು ಇದರ ಫಲ ಒಂದು ದಿನ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯೆಕ್ತಪಡಿಸಿದ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಯಾಯ ಇಲ್ಲ ಸತೀಶ್ ಜಾರಕಿಹೊಳಿ ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರರು ಎಂದು ಹೆಬ್ಬಾಳಕರ ಹೇಳಿದರು.
ಪ್ರತಿಜ್ಞಾವಿಧಿ ಕಾರ್ಯಕ್ರಮ ವೀಕ್ಷಣೆ ಮಾಡಲು ಬೆಳಗಾವಿ ಜಿಲ್ಲೆಯಲ್ಲಿ 550 ಕಡೆ ವ್ಯೆವಸ್ಥೆ ಮಾಡಲಾಗಿದೆ.ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೂ ನಾಲ್ಕು ದೊಡ್ಡ ಸ್ಕ್ರೀನ್ ಹಾಕಿದ್ದೇವೆ.ಎಂದರು
ಹಲಗಾ ಬಳಿ ಕೊಳಚೆ ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತಿದೆ,ರೈತರಿಗೆ ಒಂದು ಪೈಸೆ ಬಿಡಿಗಾಸು ಕೊಡದೇ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ,ರೈತರ ಪರಾಗಿ ಈ ವಿಷಯದಲ್ಲಿ ಹಿಂದೇಯೂ ಹೋರಾಟ ಮಾಡಿದ್ದೆ,ಮುಂದೆಯೂ ಹೋರಾಟ ಮಾಡ್ತೇನಿ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.