ಬೆಳಗಾವಿ-ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ಪೌರ ಕಾರ್ಮಿಕನೊಬ್ಬ ವಾಹನದಿಂದ ಕೆಳಗೆ ಬಿದ್ದು ಮೃತ ಪಟ್ಟಿದ್ದು ಮೃತ ಪೌರ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಪೌರ ಕಾರ್ಮಿಕರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಪೌರಕಾರ್ಮಿಕರ ಜೊತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಧರಣಿ ಕುಳಿತು ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಜುಲೈ 19ರಂದು ಅಪಘಾತದಲ್ಲಿ ಮೃತಪಟ್ಟಿದ್ದ ಪೌರಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.ಜೊತೆಗೆ,ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪೌರಕಾರ್ಮಿಕರ ಜೊತೆ ನೆಲದ ಮೇಲೆ ಕುಳಿತು ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಭಟನೆಗೆ ಸಾಥ್ ನೀಡಿ ಎಲ್ಲರ ಗಮನ ಸೆಳೆದರು.
ತ್ಯಾಜ್ಯ ವಿಲೇವಾರಿ ವಾಹನಗಳು ತುಕ್ಕು ಹಿಡಿದಿದ್ದು ಇನ್ಸೂರೆನ್ಸ್ ಸಹ ಇಲ್ಲ, ಪೌರಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಬ್ಲ್ಯಾಕ್ ಲಿಸ್ಟ್‌ನಲ್ಲಿದ್ದ ಗುತ್ತಿಗೆದಾರರನ್ನು ಮಹಾನಗರ ಪಾಲಿಕೆಯಿಟ್ಟುಕೊಂಡಿದೆ ಎಂದು ಆಕ್ರೋಶ ವ್ಯೆಕ್ತವಾಯಿತು. ಆರ್‌ಟಿಒ ಸರ್ಟಿಫಿಕೇಟ್ ಇರದ ತ್ಯಾಜ್ಯ ವಿಲೇವಾರಿ ವಾಹನಗಳಿವೆ, ಸರ್ಕಾರ ಇದೆಯೋ ಸತ್ತಿದೆಯೋ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ಆಕ್ರೋಶ ವ್ಯೆಕ್ತಪಡಿಸಿದರು.
ಸ್ಥಳಕ್ಕೆ ಬಂದ ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಅವರನ್ನು ತರಾಟೆಗೆ ತೆಗೆದುಕೊಂಡ ಲಕ್ಷ್ಮೀ ಹೆಬ್ಬಾಳಕರ,ಬ್ಲ್ಯಾಕ್ ಲೀಸ್ಟ್ ನಲ್ಲಿದ್ದ ಗುತ್ತೆಗೆದಾರನಿಗೆ ಗುತ್ತಿಗೆ ಯಾಕೆ ಕೊಟ್ರಿ,ವಾಹನಕ್ಕೆ ಪರ್ಮಿಟ್ ಇತ್ತಾ ? ಲೈಸನ್ಸ್ ಇತ್ತಾ.? ಒಂದು ಕೆಲಸ ಹೇಳಿದ್ರೆ ಕಾನೂನು ಹೇಳ್ತೀರಾ ಈಗ ಎಲ್ಲಿ ಹೋಗಿತ್ತು ನಿಮ್ಮ ಕಾನೂನು? ನಿಮ್ಮ ನಿರ್ಲಕ್ಷ್ಯ ದಿಂದ ಒಬ್ಬ ಬಡವನ ಜೀವ ಹೋಗಿದೆ,ಆತನ ಕುಟುಂಬ ಬೀದಿಗೆ ಬಂದಿದೆ,ಇನ್ನು ಮುಂದೆ ನಾನು ಸುಮ್ಮನೇ ಕೂರುವದಿಲ್ಲ,ಎಂದು ಲಕ್ಷ್ಮೀ ಹೆಬ್ಬಾಳಕರ ಪಾಲಿಕೆ ಆಯುಕ್ತರ ವಿರುದ್ಧ ವಾಗ್ದಾಳಿ ನಡೆಸಿದರು.