ಐದು ಲಕ್ಷ ಸಾಂಕ್ಷನ್ ಮಾಡಲು ಕಷ್ಟ ಕೊಡ್ತೀದ್ದಾರೆ,ಆದ್ರೂ ಪ್ರತಿದಿನ ಒಂದು ಕೋಟಿ ಕೆಲಸ ಮಾಡ್ತೀದ್ದೀನಿ.- ಹೆಬ್ಬಾಳಕರ
ಬೆಳಗಾವಿ- ಐದು ಲಕ್ಷ ರೂ ಸಾಂಕ್ಷನ್ ಮಾಡಿಸಬೇಕಂದ್ರೂ ಬಹಳ ಕಷ್ಟ ಕೊಡುತ್ತಿದ್ದಾರೆ,ಯಾರು ಕಷ್ಟ ಕೊಡುತ್ತಿದ್ದಾರೆ ಅನ್ನೋದು ನಿಮಗೆಲ್ಲ ಗೊತ್ತಿದೆ,ಆದ್ರೆ,ನೀವೆಲ್ಲಾ ಫೇಸ್ ಬುಕ್ ನೋಡಿರಬಹುದು ಪ್ರತಿ ದಿನ ಒಂದು ಕೋಟಿ ರೂ ಕೆಲಸ ಮಾಡುತ್ತಿದ್ದೇನೆ,ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೊನ್ನಿಹಾಳ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,ಒಮ್ಮೆ ಶಾಸಕಿಯಾದ ಮೇಲೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಅಂದುಕೊಂಡಿದ್ದೆ,ಆದ್ರೆ ಪ್ರವಾಹ,ಕೊರೋನಾ,ಸರ್ಕಾರದಲ್ಲಿ ಏರು ಪೇರು ಹೀಗೆ ಎಲ್ಲ ಸಮಸ್ಯೆಗಳು ಒಟ್ಟಿಗೆ ಎದುರಾಗಿವೆ,ಒಬ್ಬ ಹೆಣ್ಣು ಮಗಳಿಗೆ ಎಷ್ಟು ಕಷ್ಟಗಳು ಬರಬೇಕೋ ಅವೆಲ್ಲ ಕಷ್ಟಗಳು ಒಟ್ಟಿಗೆ ಬಂದಿವೆ,ಆದ್ರೂ ಜಗ್ಗದೇ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದ್ರು
ಐದು ಲಕ್ಷ ರೂ ಮಂಜೂರು ಮಾಡಿಸಬೇಕಂದ್ರೂ ಕಷ್ಟ ಕೊಡುತ್ತಿದ್ದಾರೆ,ನಾನು ಅಭಿವೃದ್ಧಿ ಮಾಡಿದ್ರೆ ನನಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಕಷ್ಟ ಕೊಡುತ್ತಿದ್ದಾರೆ,ಇಂತಹ ಸಂಧರ್ಭದಲ್ಲೂ ಅಧಿಕಾರಿಗಳಿಗೆ ಮನವರಿಕೆ ಮಾಡಿ ಪ್ರತಿ ದಿನ ಒಂದು ಕೋಟಿ ರೂ ಕೆಲಸ ಮಾಡುತ್ತಿದ್ದೇನೆ,ಅವರದೇ ಸರ್ಕಾರ ಅವರದ್ದೇ ಮಂತ್ರಿಗಳಿದ್ದರೂ ಸಹ,ನನ್ನ ಕ್ಷೇತ್ರದಲ್ಲಿ ತೊಂದರೆ ಇದೆ ಅಂತಾ ಕನ್ವಿನ್ಸ್ ಮಾಡಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ