ಬೆಳಗಾವಿ- ಹಿರೇಬಾಗೇವಾಡಿ ,ಗಜಪತಿ,ಬೆಂಢಿಗೇರಿ ಮುತ್ನಾಳ ಸೇರಿದಂತೆ ಒಟ್ಟು ಆರು ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಟೆಂಡರ್ ಪ್ರಕ್ರಿಯೆ ಮುಗುದು ದಾವಣಗೇರೆ ಮೂಲದ ಕೆ ವಿ ಆರ್ ಕನ್ಸಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು ಡಿಸೆಂಬರ ಮೊದಲ ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ
ಪಾರಿಶ್ವಾಡ ಗ್ರಾಮದ ಮಲಪ್ರಭಾ ನದಿಯಿಂದ ಹಿರೇಬಾಗೇವಾಡಿ ಗ್ರಾಮದವರೆಗೆ 11.5 ಕೋಟಿ ರೂ ವೆಚ್ಚದಲ್ಲಿ ಹದಿನಾಲ್ಕು ಕಿಲೋ ಮೀಟರ್ ಉದ್ದ ಪೈಪಲೈನ್ ಕಾಮಗಾರಿ ನಡೆಯಲಿದ್ದು ಗೆಜಪತಿ,ಬೆಂಡಿಗೇರಿ,ಮುತ್ನಾಳ ಹಿರೇಬಾಗೇವಾಡಿ ಸೇರಿದಂತೆ ಸುತ್ತಮುತ್ತಲಿನ ಆರು ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದ್ದು ನಿನ್ನೆ ನಡೆದ ನೀರಾವರಿ ನಿಗಮದ ಬೋರ್ಡ್ ಮೀಟಿಂಗ್ ದಲ್ಲಿ ಯೋಜನೆಯ ಟೆಂಡರ್ ಗೆ ಅನುಮೋದನೆ ದೊರಕಿದ್ದು ದಾವಣಗೇರೆ ಮೂಲದ ಕೆ ವಿ ಆರ್ ಕನ್ಸಟ್ರಕ್ಷನ್ ಕಂಪನಿಗೆ ವರ್ಕ ಆರ್ಡರ್ ನೀಡಲಾಗಿದ್ದು ಡಿಸೆಂಬರ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಜಿಲ್ಲೆಯ ಮುಖಂಡರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ
ಹಿರೇಬಾಗೇವಾಡಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಬವಣೆಯನ್ನು ಕಂಡು ಈ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಸರ್ಕಾರದಿಂದ ಮಂಜೂರು ಮಾಡಿಸುವ ಸಂಕಲ್ಪ ಮಾಡಿದ್ದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಎಂ ಬಿ ಪಾಟೀಲ ,ರಮೇಶ ಜಾರಕಿಹೊಳಿ ಅವರ ಸಹಕಾರದಿಂದ ಕೆರೆ ತುಂಬಿಸುವ ಯೋಜನೆಗೆ ವರ್ಕ ಆರ್ಡರ್ ಸಿಕ್ಕಿದ್ದು ಈ ಭಾಗದ ಹಲವಾರು ದಶಕಗಳ ಕನಸು ನನಸಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಹರ್ಷ ವ್ಯೆಕ್ತ ಪಡಿಸಿದ್ದಾರೆ
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜನಪರ ಕಾಳಜಿಯನ್ನು ಮೆಚ್ಚಿ ರಾಜ್ಯದ ಜನ ಸರ್ಕಾರದ ಸಾಧನೆಗಳನ್ನು ಸಿದ್ಧರಾಮಯ್ಯ ನವರ ಬಡವರ ಪರವಾಗಿರುವ ಕಾಳಜಿ ಮೆಚ್ಚಿ ಅಪಾರ ಪ್ರಶಂಸೆ ವ್ಯಕ್ತ ಪಡಿಸುತ್ತಿರುವದನ್ನು ಸಹಿದಲಾಗದ ಬಿಜೆಪಿ ನಾಯಕರು ಹತಾಷರಾಗಿ ಸಿಎಂ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಟೀಕೆಗಳು ಸಾಯುತ್ತವೆ ಸಾಧನೆಗಳು ಉಳಿಯುತ್ತವೆ ಅನ್ನೋದನ್ನ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳದೇ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ ಆರೋಪಿಸಿದ್ದಾರೆ
ಅಧಿಕಾರ ಇಲ್ಲದೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಮಂಜೂರು ಮಾಡಿದಿದ್ದೇನೆ ಈ ಭಾಗದ ಜನ ಒಂದು ಬಾರಿ ಸೇವೆ ಮಾಡುವ ಅವಕಾಶ ನೀಡಿದರೆ ಪ್ರಾಣದ ಹಂಗು ತೊರೆದು ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ದೃಡ ಸಂಕಲ್ಪ ತಮ್ಮ ದಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ