Breaking News

ಮರಬಿದ್ದು ಮೃತಪಟ್ಟ ಯುವಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮರ ಬಿದ್ದು ಮೃತಪಟ್ಟಿದ್ದ ಕರ್ಲೆ ಗ್ರಾಮದ ಇಬ್ಬರು ಯುವಕರ ಕುಟುಂಬಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ತಲಾ 5 ಲಕ್ಷ ರೂ. ಪರಿಹಾರ ವಿತರಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರ್ಲೆ ಗ್ರಾಮದ 20 ವರ್ಷದ ಸೋಮನಾಥ ರಾ. ಮುಚ್ಚಂಡಿಕರ ಎಂಬ‌ ಯುವಕ ದ್ವಿಚಕ್ರ ವಾಹನ ಮೇಲೆ ತೆರಳುವ ಸಮಯದಲ್ಲಿ ಆಕಸ್ಮಿಕವಾಗಿ ಮರ ಬಿದ್ದ ಪರಿಣಾಮ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಇಂದು ಯುವಕನ ತಾಯಿ ಮತ್ತು ಕುಟುಂಬದ ಇತರ ಸದಸ್ಯರನ್ನು ಭೇಟಿ ಮಾಡಿ ಸಾಂತ್ವ‌ನ ಹೇಳಿದ ಸಚಿವರು, ಸರ್ಕಾರದಿಂದ 5 ಲಕ್ಷ ರೂ,ಗಳನ್ನು ಬಿಡುಗಡೆಗೊಳಿಸಿರುವ ಆದೇಶ ಪತ್ರವನ್ನು ಮೃತನ ವಾರಸುದಾರರಿಗೆ ಹಸ್ತಾಂತರಿಸಿದರು.

ಕರ್ಲೆ ಗ್ರಾಮದ ಇನ್ನೋರ್ವ ಯುವಕ 16 ವರ್ಷದ ವಿಠ್ಠಲ ಕೃಷ್ಣ ತಳವಾರ ಸಹ ದ್ವಿಚಕ್ರ ವಾಹನ ಮೇಲೆ ತೆರಳುವ ಸಮಯದಲ್ಲಿ ಆಕಸ್ಮಿಕವಾಗಿ ಮರ ಬಿದ್ದ ಪರಿಣಾಮ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಯುವಕನ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವ‌ನ ಹೇಳಿ, ಸರ್ಕಾರದಿಂದ 5 ಲಕ್ಷ ರೂ. ಗಳನ್ನು ಬಿಡುಗಡೆಗೊಳಿಸಿರುವ ಆದೇಶ ಪತ್ರವನ್ನು ಮೃತನ ವಾರಸುದಾರರಿಗೆ ಸಚಿವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ ಬಸವರಾಜ ನಾಗರಾಳ, ಕಂದಾಯ ನಿರೀಕ್ಷ ರಾಜು ಗಲಗಲಿ, ಗ್ರಾಮದ ಆಡಳಿತ ಅಧಿಕಾರಿ ಎಂ.ಎಚ್.ಬೂದಿಹಾಳ, ಯುವರಾಜ ಕದಂ ವಿನಾಯಕ ಪಾಟೀಲ, ವಸಂತ ಸಾಂಬ್ರೇಕರ್, ಗ್ರಾಮದ ಅನೇಕರು ಇದ್ದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *