ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಅವರ ವಿಶೇಷ ಪ್ರಯತ್ನದಿಂದಾಗಿ ಮುಖ್ಯಮಂತ್ರಿಗಳ ನೂರು ಕೋಟಿ ವಿಶೇಷ ಅನುದಾನದಲ್ಲಿ ಮಂಜೂರಾಗಿದ್ದ ಒಂಬತ್ತು ಕೋಟಿ ರೂ ಅನುದಾನದ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಿದ್ಧೇಶ್ವರ ನಗರದಲ್ಲಿ ನಾಲಾ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು ಇದಾದ ಬಳಿಕ ಬಂಜಾರಾ ಕಾಲನಿ ಮರಾಠಾ ಕಾಲನಿ ಚಿಕ್ಕು ಭಾಗ ಕಾಲನಿಯ ಆಂತರಿಕ ರಸ್ತೆಗಳ ಸುಧಾರಣೆಗೆ 2.00 ಕೋಟಿ, ಜ್ಯೋತಿ ನಗರದ ಸುಧಾರಣೆಗೆ 2.00 ಕೋಟಿ ರಾಮ ನಗರ ಮಾರ್ಕಂಡೇಯ ನಗರ ಸುಧಾರಣೆಗೆ 1.5 ಕೋಟಿ ಜಯನಗರ ವಿನಾಯಕ ನಗರ ಓಂಕಾರ ನಗರ ಇರಿಗೇಶನ್ ಕಾಲನಿ ಆಂತರಿಕ ರಸ್ತೆ ಹಾಗು ಚರಂಡಿ ನಿರ್ಮಾಣಕ್ಕೆ 2.00 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ರಮೇಸ ಜಾರಕಿಹೊಳಿ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಕ್ಷೇತ್ರದ ಬಡಾವಣೆಗಳ ಅಭಿವೃದ್ಧಿಗೆ 14 ಕೋಟಿ ರೂ ಅನುದಾನ ನೀಡಬೇಕೆನ್ನುವ ಪ್ರಸ್ತಾವಣೆ ನಮಗೆ ಬಂದಿತ್ತು ಆದರೆ 9 ಕೋಟಿ ರೂ ಅನುದಾನ ಈ ಭಾಗದ ಅಭಿವೃದ್ಧಿಗೆ ಕೊಟ್ಟಿದ್ದೇವೆ ಇದು ಯಾವುದೇ ಶಾಸಕರ ನಿಧಿ ಅಲ್ಲ ಇದು ವಿಶೇಷ ಅನುದಾನದ ಕಾಮಗಾರಿ ಇದು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ ಈ ವಿಷಯದಲ್ಲಿ ರಾಜಕೀಯ ಬೇಡ ಎಂದು ಸಚಿವರು ಹೇಳಿದರು
ಕಾಮಗಾರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಸ್ಥಳಿಯ ಶಾಸಕರ ಭಾಗವಹಿಸುವಿಕೆ ಶಿಷ್ಠಾಚಾರ ಹಾಗು ಅವರ ಆದ್ಯ ಕರ್ತವ್ಯ ಆದರೆ ಶಾಸಕರು ಅಹ್ವಾನ ನೀಡಿಲ್ಲ ಎಂಬ ಕಾರಣ ನೀಡಿ ಗೈರಾಗಿ ಪ್ರತಿಭಟನೆ ಮಾಡುವದು ಸರಿಯಲ್ಲ ಒಂದು ವೇಳೆ ಸಮಂಧಪಟ್ಟ ಅಧಿಕಾರಿಗಳು ಶಾಸಕ ಸಂಜಯ ಪಾಟೀಲ ಅವರಿಗೆ ಅಹ್ವಾನ ನೀಡಿಲ್ಲ ಎಂಬುದು ಸಾಭೀತಾದರೆ ಸಮಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡು ಅವರನ್ನು ಅಮಾನತ್ತು ಮಾಡಲಾಗುವದು ಎಂದು ರಮೇಶ ಜಾರಕಿಹೊಳಿ ಶಾಸಕ ಸಂಜಯ ಪಾಟೀಲರಿಗೆ ತಿರಗೇಟು ನೀಡಿದರು
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಸಿದ್ಧೇಶ್ವರ ನಗರ ಜ್ಯೋತಿ ಕಾಲನಿ ಹಾಗು ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಕ್ಷೇತ್ರದ ನಿವಾಸಿಗಳು ಕಳೆದ ಹದಿನೈದು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೇ ಸಂಕಷ್ಟ ಅನುಭವಿಸುತ್ತಿರುವದನ್ನು ಗಮನಿಸಿ ನಮ್ಮ ಸರ್ಕಾರದ ವಿಶೇಷ ಅನುದಾನದಲ್ಲಿ ಕಾಮಗಾರಿ ಆರಂಭಿಸಿದ್ದೇವೆ ಬಿಜೆಪಿ ಶಾಸಕ ಸಣಜಯ ಪಾಟೀಲರು ಕಳೆದ ಒಂಬತ್ತು ವರ್ಷಗಳಿಂದ ನಿದ್ದೆ ಮಾಡ್ತಾ ಇದ್ದವರು ಈಗ ಎದ್ದು ಪ್ರತಿಭಟನೆ ಮಾಡುವದು ಎಷ್ಟು ಸರಿ ಪಾಲಿಕೆಕೆಗೆ ಆರನೇಯ ಕಂತಿನ ನೂರು ಕೋಟಿ ಅನಿದಾನ ಬಿಡುಗಡೆಯಾದರೂ ಸಾಸಕ ಸಂಜಯ ಪಾಟೀಲರು ಒಂದು ಬಾರಿಯೂ ಈ ಭಾಗದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡಿಲ್ಲ ಎಂದು ಹೆಬ್ಬಾಳಕರ ಆರೋಪಿಸಿದರು
ಪಾಲಿಕೆ ಆಯುಕ್ತ ಶಶಿಧರ ಕುರೇg ಶಾಸಕ ಫಿರೋಜ ಸೇಠ ಸೇರಿದಂತೆ ಪಾಲಿಕೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು