Breaking News

ಎದೆ ಮೇಲೆ ಟ್ಯಾಟು ಕಲೆ…ರಾಜ್ಯಾದ್ಯಂತ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿಗಳ ಅಲೆ….!!!!

ಬೆಳಗಾವಿ – ಮಾತು ಕೊಟ್ಟಂತೆ ನಡೆದು,ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿರುವ.ಫೌಂಡೇಶನ್ ಮೂಲಕ ಅಸಹಾಯಕರಿಗೆ ಸಹಾಯ ಮಾಡಿ ಸಮಾಜ ಸೇವೆಯನ್ನು ವಿಸ್ತರಿಸಿ ಕೊಂಡಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ರಾಜ್ಯದ ಜನರ ಗಮನ ಸೆಳೆಯುತ್ತಿದ್ದಾರೆ

ಸಾಮಾಜಿಕ ಸೇವೆ ಮತ್ತು ಪಕ್ಷದ ಸಂಘಟನೆಯಿಂದ ಬೆಳಗಾವಿ ಜಿಲ್ಲೆಯ ಜನರ ಗಮನ ಸೇಳೆದಿದ್ದ ಲಕ್ಷ್ಮೀ ಹೆಬ್ಬಾಳಕರ ಶಾಸಕಿಯಾಗುತ್ತಿದ್ದಂತೆಯೇ ಈಗ ಇಡೀ ರಾಜ್ಯದ ಗಮನ ಸೆಳೆಯುತ್ತಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ಲಕ್ಷ್ಮೀ ಹೆಬ್ಬಾಳಕರ ರಾಜಕೀಯ ನಡೆ ಮತ್ತು ಸೇವೆಗೆ ಸಖತ್ ರಿಸ್ಪಾನ್ಸ ಸಿಗುತ್ತಿದೆ ‌ವ್ತಾಟ್ಸಪ್ ನಲ್ಲಿ ದಿನಕ್ಕೊಂದು ಅಭಿಮಾನಿ ಬಳಗ ಹುಟ್ಟಿಕೊಳ್ಳುತ್ತಿದೆ.ಬೆಳಗಾವಿ ಲಕ್ಷ್ಮೀ ಹೆಬ್ಬಾಳಕರ ಬಳಗ , ಮಂತ್ರಿಯಾಗದಿದ್ದರೂ ನಮ್ಮ ಮಂತ್ರಿ ಲಕ್ಷ್ಮೀ ಅಕ್ಕಾ ಬಳಗ.ಅಥಣಿ ಅಭಿಮಾನಿ ಬಳಗ ,ವಿಜಯಪೂರ ಲಕ್ಷ್ಮೀ ಅಕ್ಕಾ ಬಳಗ .ಜೈ ಹೋ ಲಕ್ಷ್ಮೀ ಗ್ರೂಪ್ ಹೀಗೆ ಲಕ್ಷ್ಮೀ ಹೆಬ್ಬಾಳಕರ ಅವರ ಹೆಸರಿನಲ್ಲಿ ನೂರಾರು ಅಭಿಮಾನಿ ಬಳಗಗಳು ಹುಟ್ಟಿಕೊಂಡಿವೆ.

ಫೇಸ್ ಬುಕ್ ಮತ್ತು ವ್ಯಾಟ್ಸಪ್ ಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರು ಮಾಡುತ್ತಿರುವ ಸೇವೆಗಳ ಕುರಿತು ಭಾವಚಿತ್ರಗಳನ್ನು ಅಪ್ ಲೋಡ್ ಮಾಡಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ.
ಹುಬ್ಬಳ್ಳಿಯ ಯುವ ಸಂಘಟನೆಯೊಂದು ಲಕ್ಷ್ಮೀ ಹೆಬ್ಬಾಳಕರ ಅವರಿಗೆ ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ
ಲಕ್ಷ್ಮೀ ತಾಯಿ ಫೌಂಡೇಶನ್ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಸಹಾಯದ ಹಸ್ತ ಚಾಚಿರುವ ಲಕ್ಷ್ಮೀ ಹೆಬ್ಬಾಳಕರ ಅಪಘಾತದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಹೆಣ್ಣು ಮಗಳನ್ನು ದತ್ತು ಪಡೆದಿರುವ ಅವರು ಆ ಹೆಣ್ಣು ಮಗುವಿನ ಶಿಕ್ಷಣದ ವೆಚ್ಚ ಭರಿಸುತ್ತಿದ್ದಾರೆ

ಲಕ್ಷ್ಮೀ ಹೆಬ್ಬಾಳಕರ ಅವರು ಮಾಡುತ್ತಿರುವ ಸೇವೆಗೆ ಮೆಚ್ಚಿ ಬೆಳಗಾವಿಯ ಹತ್ತು ಹಲವಾರು ಜನ ಯುವಕರು ಎದೆ ಮೇಲೆ ಹೆಬ್ಬಾಳಕರ ಅವರ ಟ್ಯಾಟು ತೆಗೆದು ತಮ್ಮ ಅಕ್ಕಾ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಸಪೋರ್ಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *