Breaking News

ಬೆಳಿಗ್ಗೆ ಆರಂಭವಾದ ಹೋರಾಟ ಸಂಜೆ ಯಶಸ್ಸು

ಬೆಳಗಾವಿ:

ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಎನ್‍ಸಿಸಿ ತರಬೇತಿ ಶಾಲೆಗೆ ಜಿಲ್ಲಾಡಳಿತ ಗೈರಾನು ಜಮೀನು ಸ್ವಾದೀನು ಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನೂರಾರು ಗ್ರಾಮಸ್ಥರೊಂದಿಗೆ ಬೆಳಿಗ್ಗೆ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದ ಹಬ್ಬಾಳಕರ ಮಧ್ಯಾಹ್ನ ಮೂರು ಗಂಟೆಗೆ ನೂರಾರು ಗ್ರಾಮಸ್ಥರೊಂದಿಗೆ ಮತ್ತೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಈ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಣ್ಣೂರು ಗ್ರಾಮದ ಗೈರಾನು ಜಮೀನನ್ನು ಸ್ವಾದೀನ ಪಡಿಸಿಕೊಳ್ಳಬಾರದು ಎಂದು ಹೆಬ್ಬಾಳಕರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೆಬ್ಬಾಳಕರ, ಮಣ್ಣೂರು ಗ್ರಾಮದಲ್ಲಿ ಡೈಟ್ ಕಾಲೇಜು ಸೇರಿದಂತೆ ಇನ್ನಿತರ ಸರ್ಕಾರಿ ಕಟ್ಟಡ ಕಟ್ಟಲು ಗೈರಾನು ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಉಳಿದಿರುವ ಅರ್ಧದಷ್ಟು ಗೈರಾನು ಗ್ರಾಮದ ಜಾಣುವಾರುಗಳಿಗೆ ಆಸರೆಯಾಗಿದೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ಮಣ್ಣೂರಿನ ಗೈರಾನು ಜಮೀನು ಸ್ವಾದೀನ ಪಡಿಸಿಕೊಳ್ಳಬಾರದು. ಪರ್ಯಾಯ ಜಮೀನು ಗುರುತಿಸುವವರೆಗೂ ತಾವು ಕಚೇರಿ ಬಿಟ್ಟು ಹೋಗುವುದಿಲ್ಲ ಎಂದು ಹೆಬ್ಬಾಳಕರ ಪಟ್ಟು ಹಿಡಿದರು.

ಹಬ್ಬಾಳಕರ ಅವರ ಮನವಿ ಹಾಗೂ ಗ್ರಾಮಸ್ಥರ ಅಳಲು ಗಮನಿಸಿದ ಜಿಲ್ಲಾಧಿಕಾರಿಗಳು ಬೆಳಗಾವಿ ತಹಸೀಲ್ದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಟಿಯು ಬಳಿ ಹಾಗೂ ಭೂತರಾಮನಟ್ಟಿ ಬಳಿ ಸರ್ಕಾರಿ ಜಮೀನು ಇದ್ದು ಈ ಕುರಿತು ಶುಕ್ರವಾರ ವರದಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿಗಳು ದಊರವಾಣಿ ಮೂಲಕ ಪರ್ಯಾಯ ಜಮೀನು ಗುರುತಿಸಲು ಆದೇಶಿಸುತ್ತಿದ್ದಂತೆಯೇ ಮಣ್ಣೂರು ಗ್ರಾಮದ ಜನರಲ್ಲಿ ಸಂತಸ ಮನೆ ಮಾಡಿತ್ತು. ಎಲ್ಲ ಗ್ರಾಮಸ್ಥರು ಹೆಬ್ಬಾಳಕರ ಹಾಗೂ ಜಿಲ್ಲಾಧಿಕಾರಿಗಳಿಗೆ ಅಭಿನಂದಿಸಿ ಹರ್ಷವ್ಯಕ್ತಪಡಿಸಿದರು. ಗೈರಾನು ಜಮೀನು ರಕ್ಷಣೆಗಾಗಿ ಬೆಳಿಗ್ಗೆ ಆರಂಭವಾದ ಹೋರಾಟ ಸಂಜೆ ಹೊತ್ತಿಗೆ ಯಸಸ್ಸು ಕಂಡಿದ್ದು, ವಿಶೇಷವಾಗಿದೆ.

Check Also

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …

Leave a Reply

Your email address will not be published. Required fields are marked *