Breaking News

ಗ್ರಾಮೀಣದಲ್ಲಿ ಜೈ…..ಸವದತ್ತಿಯಲ್ಲೂ ಸೈ…ನಂತರ ಬಾಗಲಕೋಟೆಗೆ ಫ್ಲಾಯ್ …!!!

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ  ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ವ್ಹಿ ಎಸ್  ಸಾಧುನವರ ಅವರ ಪರವಾಗಿ ಮತಯಾಚಿಸಿದರು,ವಿವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದ ಅವರು ಸಂಸದ ಸುರೇಶ ಅಂಗಡಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು
ಸವದತ್ತಿ ತಾಲ್ಲೂಕಿನ ಹೂಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ ನಡೆಸಿದ ಪಾದ ಯಾತ್ರೆ ಎಲ್ಲರ ಗಮನ ಸೆಳೆಯಿತು.ಸುಡು ಬಿಸಿಲಲ್ಲೂ ಮನೆ ಮನೆಗೆ ತೆರಳಿ ಮತಯಾಚಿಸಿದ ಹೆಬ್ಬಾಳಕರ ಬೆಳಗಾವಿ ಲೋಕಸಭಾ ಕ್ಷೇತ್ರದ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಸಾಧುನವರ ಅವರನ್ನು ಬೆಂಬಲಿಸಿ ಗೆಲ್ಲಿಸುವಂತೆ ಮತದಾರರರಲ್ಲಿ ಹೆಬ್ಬಾಳಕರ ಮನವಿ ಮಾಡಿಕೊಂಡರು
ಸಂಸದ ಸುರೇಶ ಅಂಗಡಿಗೆ ಕ್ಷೇತ್ರದ ಜನ ಮೂರು ಬಾರಿ ಸೇವೆ ಮಾಡುವ ಅವಕಾಶ ನೀಡಿದ್ದೀರಾ ಹದನೈದು ವರ್ಷದಲ್ಲಿ ನಿಮ್ಮೂರಿಗೆ ಇವರು ಎಷ್ಟು ಸಲ ಬಂದಿದ್ದಾರೆ ? ಯಾರ ಸುಖ ದು:ಖಗಳನ್ನು ಆಲಿಸಿದ್ದಾರೆ ? ಸಂಸದ ಸುರೇಶ ಅಂಗಡಿ ನಿಮ್ಮೂರಿಗೆ ಮಾಡಿದ್ದೇನು ? ಇವೆಲ್ಲ ಪ್ರಶ್ನೆಗಳಿಗೆ ನೀವೇ ಉತ್ತರ ಹುಡುಕಿ ಸುರೇಶ ಅಂಗಡಿ ಆಡಳಿತ ಪಕ್ಷದಲ್ಲಿದ್ದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರಲಿಲ್ಲ ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ಸ್ವಂತ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಿಕೊಂಡ ಅಂಗಡಿ ಜನ ಸಾಮಾನ್ಯರಿಗೆ ಏನೂ ಮಾಡಲಿಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ ಅಂಗಡಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು
ಕಳೆದ ಹದಿನೈದು ವರ್ಷದಿಂದ ಬೆಳಗಾವಿ ಕ್ಷೇತ್ರದ ಜನತೆಗೆ ಮೋಸ ಮಾಡಿರುವ ಸುರೇಶ ಅಂಗಡಿ ಈಗ ಮೋದಿ ಹೆಸರಿನಲ್ಲಿ ಮತಕೇಳುತ್ತಿದ್ದಾರೆ ನಮ್ಮೂರಿನ ಸಮಸ್ಯೆ ಆಲಿಸಲು ಸುರೇಶ ಅಂಗಡಿ ಅವರಿಗೆÀ ಬರಲು ಸಾಧ್ಯವಾಗಲಿಲ್ಲ ನಮ್ಮೂರಿನ ಸಮಸ್ಯೆ ಬಗೆ ಹರಿಸಲು ನರೇಂದ್ರ ಮೋದಿ ಬರಲು ಸಾಧ್ಯವೆ ಎಂದು ಪ್ರಶ್ನಿಸಿದ ಹೆಬ್ಬಾಳಕರ ಹಳ್ಳಿಯ ಜನ ಗಲ್ಲಿ ನೋಡಿ ಮತ ಹಾಕಬೇಕು ದಿಲ್ಲಿ ನೋಡಿ ಮತ ಹಾಕುವದು ಬೇಡ ಸಾಧುನವರ ಅವರಿಗೆ ನಿಮ್ಮೆಲ್ಲರ ಸೇವೆ ಮಾಡುವ ಒಂದು ಅವಕಾಶ ಕೊಡಿ ಎಂದು ಮತದಾರರರಲ್ಲಿ ಹೆಬ್ಬಾಳಕರ ಮನವಿ ಮಾಡಿಕೊಂಡರು
ಕಾಂಗ್ರೆಸ್ ಅಭ್ಯರ್ಥಿ ಡಾ ವ್ಹಿ ಎಸ್ ಸಾಧುನವರ ಮಾತನಾಡಿ ಸಂಸದ ಸುರೇಶ ಅಂಗಡಿ ಅವರಿಗೆ ಮತಯಾಚಿಸಲು ಯಾವುದೇ ಬಂಡವಾಳವೇ ಇಲ್ಲ ಹದಿನೈದು ವರ್ಷದಲ್ಲಿ ಕ್ಷೇತ್ರದ ಜನ ಅಂಗಡಿ ಅವರ ಕಾರ್ಯವೈಖರಿ ನೋಡಿ ಸುಸ್ತಾಗಿದ್ದಾರೆ ಕ್ಷೇತ್ರದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ ಈ ಚುನಾವಣೆಯಲ್ಲಿಯೂ ಬಿಜೆಪಿಯ ಸುಳ್ಳು ಭಾಷಣಕ್ಕೆ ಮತದಾರರು ಮರಳಾಗುವದಿಲ್ಲ ಎಂದು ಸಾಧುನವರ ಹೇಳಿದರು  ಈ ಸಂಧರ್ಭದಲ್ಲಿ ಸವದತ್ತಿ ತಾಲ್ಲೂಕಿನ ಎಲ್ಲ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು
ಕಳೆದ ಎರಡು ವಾರದಿಂದಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಬಿರುಸಿನ ಪ್ರಚಾರ ನಡೆಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಬೆಳ್ಳಂ ಬೆಳಿಗ್ಗೆ ಸವದತ್ತಿ ಯಲ್ಲಮ್ಮನ ಕ್ಷೇತ್ರದ ಹಳ್ಳಿಗಳಲ್ಲಿ ಸಾಧುನವರ ಪರವಾಗಿ ಪ್ರಚಾರ ನಡೆಸಿದ ಅವರು ಸಂಜೆ ವೀಣಾ ಕಾಶಪ್ಪನವರ ಅವರ ಪರವಾಗಿ ಮತಯಾಚಿಸಲು ಬಾಗಲಕೋಟೆ ಗೆ ತೆರಳಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *