ಬೆಳಗಾವಿ -ವರ್ಷವಿಡಿ ಅನ್ನದಾತ ಹೊಲದಲ್ಲಿ ಶ್ರಮಿಸುತ್ತಾನೆ ಶ್ರಮಿಕನಿಗೆ ವಿಶ್ರಾಂತಿ ಇಲ್ಲ. ಹಿರಿಯರು ಶ್ರಮಿಕನಾಗಿರುವ ಅನದನದಾತನ ಮನರಂಜನೆಗಾಗಿ ಜೋಡೆತ್ತಿನ ಶರತ್ತು ಟಗರಿನ ಕಾಳಗ ಸೇರಿದಂತೆಅನೇಕ ಗ್ರಾಮೀಣ ಕ್ರಿಡೆಗಳನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ ಕ್ರಿಡೆಗಳಿಗೆ ಪ್ರೋತ್ಸಾಹ ಸಿಗಬೇಕು ದೇಸಿ ಕ್ರಿಡೆಗಳು ಆರೊಗ್ಯವನ್ನು ಸದೃಡಗೊಳಿಸುವ ಜೊತೆಗೆ ಮಾನಸಿಕ ನೆಮ್ಮದಿ ನೀಡುತ್ತವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅದ್ಯಕ್ಷೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯ ಪಟ್ಟಿದ್ದಾರೆ
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಡಸ ಕೆಎಚ್ ಗ್ರಾಮದಲ್ಲಿ ಮಹóರ್ಷಿ ವಾಲ್ಮೀಕಿ ಯುವಕ ಮಂಡಳ ಆಯೋಜಿಸಿದ ಜೋಡೆತ್ತಿನ ಭಾರೀ ಜಂಗೀ ಷರತ್ತು ಸ್ಪರ್ದೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ದೇಶಿ ಕ್ರಿಡೆಗಳ ಸಂರಕ್ಷಣೆಗಾಗಿ ದೇಶಿ ಕ್ರೀಡಾ ಪ್ರಾಧಿಕಾರ ರಚಿಸಿ ದೇಶಿ ಕ್ರಿಡೆಗಳ ಸಂರಕ್ಷಣೆ ಮಾಡಬೇಕು ಸರ್ಕಾರಗಳು ಪ್ರತಿ ವರ್ಷ ಶ್ರಾವಣ ತಿಂಗಳಲ್ಲಿ ತಾಲೂಕಾ ಮಟ್ಟದಲ್ಲಿ ದೇಶಿ ಕ್ರಿಡೆಗಳ ಸ್ಪರ್ದೆಗಳನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದರು
ಬಡಸ ಗ್ರಾಮದಲ್ಲಿ ನಡೆದ ಜೋಡೆತ್ತಿನ ಸ್ಪರ್ದೆಯಲ್ಲಿ ಸುತ್ತ ಮುತ್ತಲಿನ ಗ್ರಾಮಗಳಿಂದ ನೂರಾರು ಜೋಡಿಗಳು ಭಾಗವಹಿಸಿದ್ದವು ಜೋಡೆತ್ತಿನ ಷರತ್ತು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು
ಬಡಸ ಗ್ರಾಮದ ಶಿವಪುತ್ರಪ್ಪ ಸ್ವಾಮಿಗಳು ಸಾನಿದ್ಯ ವಹಿಸಿದ್ದರು ನಿಂಗನಗೌಡ್ರ ಪಾಟೀಲ ಶಂಕರಗೌಡಾ ಪಾಟೀಲ, ಎಂ ಎಂ ಅತ್ತಾರ,ಗೌಡಪ್ಪ ಗಿಡಬಸನ್ನವರ ಮಹಾಂತೇಶ ಅಲಾಬಾದಿ,ಪ್ರಕಾಶ ಪಾಟೀಲ ಅಡಿವೇಶ ಇಟಗಿ,ಸಮೀನಾ ನದಾಫ,ಶ್ರೀಕಾಂತ ಗಿಡಬಸನ್ನವರ, ರವಿ ಮೇಳೆದ ಗೌಸ ಮೋದಿನ ಜಾಲಿಕೊಪ್ಪ ಕೆಳಗೇರಿ ಸೇರಿದಂತೆ ಹಲವಾರು ಜನ ಗಣ್ಯರು ಉಪಸ್ಥಿತರಿದ್ದರು
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …