Breaking News

ಲಕ್ಷ್ಮೀ ಹೆಬ್ಬಾಳಕರ ಟಿಕೆಟ್ ಖಾತ್ರಿ ಪಡಿಸಿದ ಸುಳೇಭಾವಿ ಕಾಂಗ್ರೆಸ್ ಸಮಾವೇಶ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಉತ್ಸಾಹ ನೋಡಿ ಈ ಸಾರಿ ಸಂದೇಹ ಉಳಿದಿಲ್ಲ ನೂರಕ್ಕೆ ನೂರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಗೆಲ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸುಳೆಬಾವಿ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ವಿಶ್ವಾಸ ವ್ಯೆಕ್ತಪಡಿಸಿದರು
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರು ಕಡಿಮೆ ಅಂತರದಿಂದ ಸೋತಿದ್ದು ದುರಾದೃಷ್ಟ ಈ ಬಾರಿ ಅವರನ್ನ ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಲೇಬೇಕು ಹೆಬ್ಬಾಳಕರ ಸೋತರೂ ಕ್ಷೇತ್ರವನ್ನು ಬಿಡಲಿಲ್ಲ ಸಮಾಜ ಸೇವೆಯನ್ನು ನಿಲ್ಲಿಸಲಿಲ್ಲ ನಾವೆಲ್ಲರೂ ಸುಳೆಬಾವಿ ಗ್ರಾಮಕ್ಕೆ ಬಂದಿದ್ದು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಆಶಿರ್ವಾದ ಮಾಡಲೆಂದೇ ಎಂದು ಹೇಳಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಬ್ಬಾಳಕರ ಅವರ ಟಿಕೆಟ್ ಖಾತ್ರಿ ಪಡಿಸಿದರು
ಸಿಎಂ ಮಾತನಾಡುವಾಗ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಕ್ಯಾಂಡಿಡೇಟ್ ಯಾರು ಅನ್ನೋದನ್ನು ಘೋಷಿಸಬೇಕು ಎಂದು ಕೆಲವರು ಚಿರಾಟ ಆರಂಭಿಸಿದಾಗ ನಿಮ್ಮ ಅಭಿಪ್ರಾಯಕ್ಕೆ ಪಕ್ಷ ಮನ್ನಣೆ ಕುಡುತ್ತದೇ ಎಂದು ಸಿಎಂ ಹೇಳಿದರು

ಬಿಜೆಪಿ ಮಿಶನ್ ಒನ್ ಫಿಫ್ಟಿ,ಅಂತ ಎಷ್ಟೇ ಶಂಕ ಹೊಡೆಯಲಿ,ದೇವೆಗೌಡರು ನಾನು ಮಣ್ಣಿನ ಮಗ ಅಂತ ಎಷ್ಟೇ ಹೇಳಿಕೊಳ್ಳಲಿ ಮುಂದಿನ ಬಾರಿ ಅಧಿಕಾರಕ್ಕೆ ಬರುವದು ಕಾಂಗ್ರೆಸ್ ಪಕ್ಷ ಎನ್ನುವ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ
ಯಡಿಯೂರಪ್ಪ ಜೇಲಿಗೆ ಹೋಗಿ ಬಂದ ಮುಖ್ಯಮಂತ್ರಿ ಅಮೀತ ಷಾ ಕೊಲೆ ಕೇಸ್ ನಲ್ಲಿ ಸಿಲುಕಿಕೊಂಡವರು ಇವರು ಕಾಂಗ್ರೆಸ್ ಸರ್ಕಾರ ಬ್ರಷ್ಟಾಚಾರ ಮಾಡುತ್ತಿದೆ ಎನ್ನುವ ಆರೋಪ ಮಾಡುತ್ತಿರುವದು ನಾಚಿಕೇಗೇಡು ಸಂಗತಿ
ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ ಆದ್ರೆ ಯಡಿಯೂರಪ್ಪ ಅವರಿಗೆ ದಲಿತರು ನೆನಪಾಗಿದ್ದಾರೆ ಬಿಜೆಪಿ ನಡಿಗೆ ದಲಿತರ ಕಡೆಗೆ ಎನ್ನುವ ಘೋಷಣೆ ಶುರು ಮಾಡಿಕೊಂಡಿದ್ದಾರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ದಲಿತರ ಮನೆಗೆ ಏಕೆ ಹೋಗಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಬಿಜೆಪಿ ನಾಯಕರಿಗೆ ದಲಿತರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ನಿಮ್ಮ ಹೆಣ್ಣು ಮಕ್ಕಳನ್ನು ದಲಿತರ ಮಕ್ಕಳಿಗೆ ಕೊಟ್ಟು ಮದುವೆ ಮಾಡಿಸಿ ದಲಿತರ ಹೆಣ್ಣು ಮಕ್ಕಳನ್ನು ನಿಮ್ಮ ಮಕ್ಕಳ ಜೊತೆ ಮದುವೆ ಮಾಡಿಸಿ ಎಂದು ಸಿಎಂ ಸಿದ್ರಾಮಯ್ಯ ಬಿಜೆಪಿ ನಾಯಕರಿಗೆ ಸವಾಲ್ ಹಾಕಿದರು
ಕಾಂಗ್ರೆಸ್ ಪಕ್ಷದ ನಾಯಕರು ಇರೋದು ದಲಿತರ ಜೊತೆಗೆ ಕಾಂಗ್ರೆಸ್ ಪಕ್ಷ ದಲಿತರ ಪಕ್ಷ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾರ ಪಕ್ಷ ಬಡವರ ಪಕ್ಷ ಎಂದು ಹೇಳಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ್ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಸರ್ವ ಸಮಾಜಗಳ ಉನ್ನತಿಗೆ ಶ್ರಮಿಸಿದೆ ನಮ್ಮ ಕಾರ್ಯಕ್ರಮಗಳನ್ನು ನೋಡಿ ನಮಗೆ ಮತ್ತೊಂದು ಅವಕಾಶ ಕೊಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಮನನೆಗೆ ತೆರಳಿ ಸರ್ಕಾರದ ಯೋಜನೆಗಳ ಕುರಿತು ಪ್ರಚಾರ ಮಾಡಬೇಕು ಎಂದು ಸಿಎಂ ಕಾರ್ಯಕರ್ತ ರಲ್ಲಿ ಮನವಿ ಮಾಡಿಕೊಂಡರು
ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಲು ಸಾಧ್ಯವೇ ಇಲ್ಲ ನಮ್ಮ ಸರ್ಕಾರ ನೋಟ್ ಪ್ರಿಂಟ್ ಮಾಡುವ ಮಶೀನ್ ಇಟ್ಕೊಂಡಿಲ್ಲ ಎಂದು ಹೇಳಿದ್ದ ಯಡಿಯೂರಪ್ಪ ಈಗ ಸಾಲಮನ್ನಾ ಬಗ್ಗೆ ಮಾತನಾಡ್ತಾರೆ ಸಾಲ ಮನ್ನಾ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ ಇಂತಹ ಹೇಡಿಗಳಿಗೆ ಓಟ್ ಹಾಕ್ತೀರಾ ಹಾಕಬಾರದು ಎಂದು ಸಿದ್ಧರಾಮಯ್ಯ ಯಡಿಯೂರಪ್ಪ ವಿರುದ್ಧ ಟೀಕಾ ಪ್ರಹಾರ ಮಾಡಿದ್ರು

ಉತ್ತರ ಕರ್ನಾಟಕದ ಭಾಗದ ಕಾಂಗ್ರೆಸ್ ಉಸ್ತುವಾರಿ ಎಸ್ ಆರ್ ಪಾಟೀಲ ಮಾತನಾಡಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುತ್ತಿರುವ ಭೂತ್ ಮಟ್ಟದ ಕಾಂಗ್ರೆಸ್ ಸಮಾವೇಶ 2018 ರ ವಿಧಾನ ಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಈಗಾಗಲೇ ನಡೆದಿರುವ ಭೂತ್ ಮಟ್ಟದ ಸಮಾವೇಶಗಳಲ್ಲಿ ಸುಳೇಬಾವಿಯ ಸಮಾವೇಶ ನಂಬರ್ ಒನ್ ಸಮಾವೇಶವಾಗಿದೆ ಈ ಸಮಾವೇಶ ಪಕ್ಷದ ಗೆಲುವಿಗೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ಎಸ್ ಆರ್ ಪಾಟೀಲ ಹೇಳಿದರು

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಯೋಜನೆಗಳಿಗೆ ಹೊಸ ಹೆಸರು ಕೊಟ್ಟು ಕಾಂಗ್ರೆಸ್ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ ಅಂದು ಜಿಎಸ್ ಟಿ ವಿರೋಧಿಸಿದ್ದ ಬಿಜೆಪಿ ಇಂದು ಜಿಎಸ್ ಟಿ ಜಾರಿಗೆ ತಂದಿದೆ ಆಧಾರ್ ಕಾರ್ಡ ವ್ಯೆವಸ್ಥೆ ಬಗ್ಗೆ ಟೀಕಿಸಿದ್ದ ಬಿಜೆಪಿಗೆ ಈಗ ಜ್ಞಾನೋದಯ ಆಗಿದೆ ಎಂದು ಟೀಕಿಸಿದ ಪಾಟೀಲ ನರೇಂದ್ರ ಮೋದಿ ದೇಶದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಇವರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಎಸ್ ಆರ್ ಪಾಟೀಲ ಆರೋಪಿಸಿದರು
ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಸಿ ಪಾಟೀಲ ಮಾತನಾಡಿ ಹೆಬ್ಬಾಳಕರ ಕುಟುಂಬ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗಾಗಿ ಹಗಲಿರಳು ಶ್ರಮಿಸುತ್ತದೆ ಆದರೆ ಜಿಲ್ಲೆಯ ಕೆಲವು ನಾಯಕರು ಲಕ್ಷ್ಮೀ ಹೆಬ್ಬಾಳಕರ ಅವರ ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಈ ಶಿಕ್ಷೆ ಯ್ಯಾಕೆ ? ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಅವರ ಪಾಡಿಗೆ ಬಿಡಿ ಎಂದು ಸಿಸಿ ಪಾಟೀಲ ಹೆಸರು ಪ್ರಸ್ತಾಪಿಸದೇ ಸತೀಶ ಜಾರಕಿಹಳಿ ಅವರ ನಡೆ ಕುರಿತು ಕಾಂಗ್ರೆಸ್ ನಾಯಕರ ಗಮನ ಸೆಳೆದರು

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಮಾತನಾಡಿ ಸಿಸಿ ಪಾಟೀಲ ಅವರ ಮಾತುಗಳಿಗೆ ಸಮ್ಮತಿಸಿ ಕಾರ್ಯಕರ್ತರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಕಾರ್ಯಕರ್ತರ ಮುಂದೆ ಯಾವ ನಾಯಕನ ಆಟವೂ ನಡೆಯೋದಿಲ್ಲ ಕೆಲವರು ಗೋಕಾಕಿನಲ್ಲಿ ತಮ್ಮ ಗಂಡಸತನ ತೋರಿಸಲು ಹೋಗಿ ಫೇಲಾಗಿದ್ದಾರೆ ಯಾರು ಎಷ್ಟು ಗಂಡಸರಿದ್ದಾರೆ ಅನ್ನೋದು ನಮಗೆ ಚನ್ನಾಗಿ ಗೊತ್ತದೆ ಎಂದು ಪರೋಕ್ಷವಾಗಿ ಸತೀಶ ವಿರುದ್ಧ ಗುಡುಗಿದ ರಮೇಶ ಜಾರಕಿಹೊಳಿ ಕೆಲವು ವಿಷಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ವೇದಿಕೆಯ ಮೇಲೆ ಎಲ್ಲ ವಿಷಯಗಳನ್ನು ಮಾತನಾಡಲು ಬರೋದಿಲ್ಲ ಡಿಕೆ ಶಿವಕುಮಾರ್ ಜೊತೆ ಸಿಎಂ ಜೊತೆ ಪಕ್ಷದ ನಾಯಕರ ಜೊತೆ ಏನು ಮಾತಾಡಬೇಕೋ ಅದನ್ನು ಮಾತಾಡಿದ್ದೇನೆ ಎಂದು ರಮೇಶ್ ತಮ್ಮ ಮಾತುಗಳಿಗೆ ವಿರಾಮ ಹೇಳಿ ಜೈ ಹಿಂದ ಎಂದು ಹೇಳಿ ಮಾತು ಮುಗಿಸಿದರು
ಸಚಿವ ಆರ್ ವ್ಹಿ ದೇಶಪಾಂಡೆ ಮಾತನಾಡಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಗೆಲ್ಲಲು ನಾವು ಶತಾಯ ಗತಾಯ ಪ್ರಯತ್ನ ಮಾಡುತ್ತೇವೆ ನಾವು ಈ ಕ್ಷೇತ್ರವನ್ನು ಗೆದ್ದೇ ಗೆಲ್ತೀವಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ತದೆ ಇದರಲ್ಲಿ ಸಂದೇಹವೇ ವಿಲ್ಲ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಚನ್ನಾಗಿ ಕೆಲಸ ಮಾಡುತ್ತಿದ್ದಾರೆ ಇಲ್ಲಿ ಕೆಲವರು ಭಿನ್ನಾಮತ ಮಾಡುವದು ಸರಿಯಲ್ಲ ಇಲ್ಲಿ ಭಿನ್ನಾಭಿಪ್ರಾಯ ಮಾಡುವವರಿಗೆ ಪಕ್ಷದಿಂದ ಹೊರಗೆ ಹಾಕಿ ಎಂದು ದೇಶಪಾಂಡೆ ಮಾತು ಮುಗಿಸಿದರು
ಕಾಂಗ್ರೆಸ್ ಪಕ್ಷದ ಪ್ರಚಾರ ಸಮೀತಿಯ ಅಧ್ಯಕ್ಷ ಇಂಧನ ಸಚಿವ ಡಿಕೆ ಶಿವಕುಮಾರ್ ಮಾತನಾಡಿ ಲಕ್ಷ್ಮೀ ಹೆಬ್ಬಾಳಕರ ಎರಡು ಬಾರಿ ಸೋತಿದ್ದಾರೆ ಕಾರಣ ಏನು ಗೊತ್ತಿಲ್ಲ ಆದ್ರೆ ಈ ಬಾರಿ ಅವರ ಗೆಲುವಿನಲ್ಲಿ ಸಂದೇಹವಿಲ್ಲ ಎಂದು ದೇಶಪಾಂಡೆ ಅವರು ಇಲ್ಲಿಯ ಜನತೆಯ ಉತ್ಸಾಹ ನೋಡಿ ಹೇಳಿದ್ದಾರೆ ಕೆಲವರು ನಾವು ಟಿಕೆಟ್ ತಪ್ಪಿಸುತ್ತೇವೆ ಅದನ್ನು ಮಾಡ್ತೇವಿ ಇದನ್ನು ಮಾಡ್ತೀವಿ ಅಂತ ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ ಇವರ ಮಾತಿಗೆ ಕಿವಿಗೊಡಬೇಡಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಈ ಬಾರಿ ಆಶಿರ್ವಾದ ಮಾಡಿ ಎಂದು ಡಿಕೆಶಿ ಸಮಾವೇಶದಲ್ಲಿ ಮನವಿ ಮಾಡಿಕೊಂಡರು
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವದೇ ನಮ್ಮ ಸಂಕಲ್ಪ ಮತ್ತು ಗುರಿಯಾಗಿದೆ ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಸಮಾಜಗಳು ಅಧಿಕಾರಕ್ಕೆ ಬಂದಂತೆ ಬಿಜೆಪಿಗೆ ರಾಜ್ಯದ ಬೆಳವಣಿಗೆಯನ್ನು ಸಹಿಸಲಾಗುತ್ತಿಲ್ಲ ಯಡಿಯೂರಪ್ಪ ಬಿಜೆಪಿ ಬಿಟ್ಟಾಗ ಏನೇನು ಹೇಳಿದರು ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಡಿಕೆಶಿ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು

ಸುಳೇಭಾವಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಶವೇಶದಲ್ಲಿ ಹಲವಾರು ಜನ ಬಿಜೆಪಿ ಮತ್ತು ಎಂಈಎಸ್ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *