ಬೆಳಗಾವಿ- ಸಂಸರಾದ ಜಂಜಾಟ ಮರೆತು ಮಹಿಳೆಯರು ಮಕ್ಕಳು ಹೋಳಿ ಸಂಭ್ರಮಿಸಲು ವುಮೇನಿಯಾ ಆಯೋಜನೆ ಮಾಡಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸೋಮವಾರ ನಡೆಯುವ ವುಮೇನಿಯಾ ಹೋಳಿ ಆಚರಣೆಯ ಪೂರ್ವಸಿದ್ದತೆ ಪರಿಶೀಲನೆ ಮಾಡಿ ಮಾತನಾಡಿದ್ರು.
ಹೋಲಿ ಆಚರಣೆಯಲ್ಲಿ ಎಂ ಟಿವಿ ನಾಗ್ಡಾ, ನೈತಿಕ್ ನಾಗ್ಡಾ ಮತ್ತು ತಂಡದ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಕ್ಕಳಿಗೆ ಕೃತಕ ಕಾರಂಜಿ, ಮಹಿಳೆಯರಿಗೆ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಮಹಿಳೆಯರಿಗಾಗಿ ಆಯೋಜಿಸಿ ರುವ ವುಮೇನಿಯಾ ಹೋಲಿಯಲ್ಲಿ ನಗರದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹೆಬ್ಬಾಳಕರ ಕೋರಿದ್ದಾರೆ