ಬೆಳಗಾವಿ: ವಿಶ್ವಗುರು ಬಸವಣ್ಣ ತಮ್ಮ ವಚನಗಳ ಮೂಲಕ ಸಮಾನತೆ ಸಂದೇಶ ಸಾರಿದ್ದಾರೆ. ಆದರೆ ಬಸವಣ್ಣ ಹೆಸರಿನಲ್ಲಿ ಕೆಲ ಮಠಾಧೀಶರು ವೀರಶೈವ- ಲಿಂಗಾಯತ ಧರ್ಮ ಒಡೆಯುತ್ತಿದ್ದಾರೆ ಎಂದು ರಂಭಾಪುರಿ ಪೀಠದ
ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆರೋಪಿಸಿದರು. ಬೆಳಗಾವಿಯ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದಲ್ಲಿಂದು ಹಮ್ಮಿಕೊಂಡಿದ್ದ ಮಾಸಿಕ ಸುವಿಚಾರ ಚಿಂತನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವೀರಶೈವ – ಲಿಂಗಾಯತ ಎರಡೂ ಒಂದೇ ಆಗಿದೆ. ಆದರೆ, ಇವು ಬೇರೆ ಬೇರೆ ಎಂದು ಧರ್ಮವನ್ನು ಒಡೆಯುತ್ತಿದ್ದಾರೆ. ಅಂತಹವರಿಗೆ ವಿಧಾನ ಸಭೆಯಲ್ಲಿ ಸಮಾಜ ತಕ್ಕ ಪಾಠ ಕಲಿಸಿದೆ ಎಂದರು. ಪಂಚಪೀಠಗಳು ನಾಡು ನುಡಿಗೆ ಅಮೂಲ್ಯ ಕೊಡುಗೆ ನೀಡಿವೆ. ಪಂಚಪೀಠಗಳು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತ ಬಂದಿವೆ. ವೀರಶೈವ ಧರ್ಮ ಅಷ್ಟಾವರಣ ಧರ್ಮ. ಸಹಸ್ರ ಸಹಸ್ರ ವರ್ಷಗಳ ಇತಿಹಾಸ ಹೊಂದಿರುವ ಧರ್ಮವಾಗಿದೆ ಎಂದರು. ನಗರದಲ್ಲಿ ಪ್ರದೇಶದಲ್ಲಿ ಭಕ್ತರನ್ನು ಸೆಳೆಯುವುದು ಸುಲಭದ ಕೆಲಸವಲ್ಲ. ಹುಕ್ಕೇರಿ ಹಿರೇಮಠದ ಶ್ರೀಗಳು ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿರುವುದು ಶ್ಲಾಘನೀಯ. ಮಕ್ಕಳಲ್ಲಿ ಸೂಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಜವಾಬ್ದಾರಿ ಪಾಲಕರರಷ್ಟೇ ಮಠಾಧೀಶರ ಮೇಲೆಯೂ ಇದೆ ಎಂದರು. ಪವಿತ್ರ ವೀರಶೈವ ಧರ್ಮವನ್ನು ಕುಲಗೇಡಿಸುವ ಕೆಲಸ ನಡೆಯುತ್ತಿದೆ. ಗುರುವಿನ ಋಣ ಎಂದಿಗೂ ಮರೆಯಬಾರದು. ನಮಗೆ ಉಪಕಾರ ಮಾಡಿದವರನ್ನು ಮರೆಯಬಾರದು. ಆದರೆ ಜನರು ಜಾಗೃತಿಯಾಗದಿರುವುದು ವಿಷಾದನೀಯ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಲಾಯಿತು . ಇಂದಿರಾಗಾಂಧಿ, ರಾಜೀವ ಗಾಂಧಿ ಅವರನ್ನು ಗುಂಡಿಗೆ ಆಹತಿ ಮಾಡಲಾಯಿತು. ಮಾನವೀಯತೆ ಸಂದೇಶವನ್ನು ಪಂಚಪೀಠಗಳು ಮಾಡುತ್ತ ಬಂದಿವೆ. ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಮಾತನೆ ಸಂದೇಶ ಸಾರಿವೆ ಎಂದು ಹೇಳಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ. ರವಿ ಪಾಟೀಲ, ಸರಿಗಮಪ ಲಿಟಲ್ ಚಾಂಪ ವಿಜೇತ ವಿಶ್ವಪ್ರಸಾದ ಅವರನ್ನು ಸನ್ಮಾನಿಸಲಾಯಿತು.
Check Also
ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??
ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …