ಬೆಳಗಾವಿ- ಮಂಗಳವಾರ ಕುಂದಾನಗರಿ ಬೆಳಗಾವಿ ಸಂಪೂರ್ಣವಾಗಿ ಬಸವ ಮಯವಾಗಿತ್ತು ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ನಡೆದ ರ್ಯಾಲಿಯಲ್ಲಿ ಬಸವ ಭಕ್ತರ ಮಹಾಪೂರವೇ ಹರಿದು ಬಂದಿತ್ತು
ಐವತ್ತಕ್ಕೂ ಹೆಚ್ಚು ಮಠಾಧೀಶರು ಲಕ್ಷಾಂತರ ಜನ ಬಸವ ಭಕ್ತರು ರ್ಯಾಲಿಯಲ್ಲಿ ಭಾಗವಹಿಸುವ ಮೂಲಕ ಇತಿಹಾಸ ನಿರ್ಮಿಸಿದರು
ರ್ಯಾಲಿಯಲ್ಲಿ ಪಾಲ್ಗೊಂಡ ಮಠಾಧೀಶರು ವಿರಶೈವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು ವೀರಶೈವ ಮಹಾಸಭೆಗೆ ಪರ್ಯಾಯವಾಗಿ ಅಖಿಲ ಭಾರತ ಲಿಂಗಾಯತ ಮಹಾಸಭೆಯನ್ನು ಅಸ್ತಿತ್ವಕ್ಕೆ ತರುವ ಘೋಷಣೆಯನ್ನು ಮಾಡಲಾಯಿತು
ರ್ಯಾಲಿಯಲ್ಲಿ ಮಂತ್ರಿ ವಿನಯ ಕುಲಕರ್ಣಿ,ಪ್ರಕಾಶ ಹುಕ್ಕೇರಿ ಅಶೋಕ ಪಟ್ಟಣ ಬಸವರಾಜ ಹೊರಟ್ಟಿ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಕಾಂಗ್ರೆಸ್ ಮುಖಂಡರೇ ಇಲ್ಲಿ ಮಿಂಚಿದರೆ ಬಿಜೆಪಿ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು
ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ ಅನೇಕ ಟೀಕೆ ಟಿಪ್ಪಣಿ ಬರುತ್ತವೇ.
ಯಾವುದನ್ನು ತಲೆಕೆಸಿಕೊಳ್ಳುವುದು ಬ್ಯಾಡ.
ಲಿಂಗಾಯತ ಧರ್ಮ ಸ್ವತಂತ್ರವಾಗಿದೇ.
ಲಿಂಗಾಯತರು ಮತ್ತು ವೀರಶೈವ ಲಿಂಗಾಯತರು ಒಂದೇ ಅಲ್ಲ.
ಇದನ್ನ ಮಾತೆ ಮಹಾದೇವಿ ಮತ್ತು ತೋಟದಾರ್ಯ ಶ್ರೀಗಳು ಉತ್ತರಿಸಿದ್ದಾರೆ.
ಸ್ವತಂತ್ರ ಲಿಂಗಾಯತ ಧರ್ಮ ಘೋಷಿಸದಿದ್ದರೇ ಸರ್ಕಾರಗಳಿಗೆ ವಜ್ಜೆ ಆಗಲಿದೇ.
ರಾಜ್ಯ ಸರ್ಕಾರ ಮೊದಲು ಲಿಂಗಾಯತ ಧರ್ಮ ಸ್ವತಂತ್ರವೆಂದು ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕು.
ಇಲ್ಲವಾದರೇ ರಾಜ್ಯ ಸರ್ಕಾರಕ್ಕೆ ಲಿಂಗಾಯತರು ಪಾಠಕಲಿಸಲಿದ್ದಾರೆ
ಆರ.ಎಸ.ಎಸನ ಮೋಹನ ಭಾಗವಾತ ವಿರುದ್ಧ ಬಸವರಾಜ್ ಹೊರಟ್ಟಿ ಕಿಡಿ ಕಾರಿ ಮೋಹನ್ ಭಾಗವತ ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಬೇರೆ ಆಗದಂತೆ ನೋಡಿಕೊಳ್ಳವಂತೆ ಹೇಳಿದ್ದಾರೆ. ಮೋಹನ ಭಾಗವತ ಈ ವಿಚಾರದಲ್ಲಿ ತಲೆ ಹಾಕಬಾರದು ಎಂದು ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದರು
ಊರ ಸಾಬರಿ ಮಾಡದಂತೆ ಲಿಂಗಾಯತ ಧರ್ಮಕ್ಕೆ ವಿರೋಧಿಸುವವರಿಗೆ ಎಚ್ಚರಿಕೆ ನೀಡಿದ ಅವರು ಒಡೆದಾಳುವ ನೀತಿ ನಿಲ್ಲಬೇಕೂ..
ಎಲ್ಲಿಯ ವರೆಗೂ ಲಿಂಗಾಯತ ಧರ್ಮ ಸ್ವತಂತ್ರ ಎಂದು ಘೋಷಿಸುವವರೆಗೂ ಹೋರಾಟ ನಿಲ್ಲುವುದಿಲ್ಲ. ಹರಿಬ್ರಹ್ಮ ಬಂದರೂ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ನಿಲ್ಲುವುದಿಲ್ಲ ಎಂದ ಹೊರಟ್ಟಿ ಎಚ್ಚರಿಕೆ ನೀಡಿದರು
ಸಚಿವ ವಿನಯ ಕುಲಕರ್ಣಿ ಮಾತನಾಡಿ
೧೨ನೇ ಶತಮಾನದ ಬಸವಣ್ಣನವರ ಕ್ರಾಂತಿ.. ಇಂದು ೨೧ ನೇ ಶತಮಾನದಲ್ಲಿ ಮತ್ತೆ ಕ್ರಾಂತಿ ಆರಂಭವಾಗಿದೆ.
ಸಮಾವೇಶದಲ್ಲಿ ಲಿಂಗಾಯತ ಧರ್ಮಕ್ಕೆ ವಿರೋಧಿಸುತ್ತಿರುವ ರಾಜಕೀಯ ನಾಯಕರ ವಿರುದ್ಧ ಗುಡುಗಿದ ವಿನಯ
ಲಿಂಗಾಯತ ಸಮಾಜದ ಬೆಂಬಲ ಪಡೆದು ರಾಜಕೀಯ ನಾಯಕರು ವಿರೋಧಿಸುವವರ ವಿರುದ್ಧ ಆಕ್ರೋಶ ವ್ಯೆಕ್ತಪಡಿಸಿದರು
ಇವತ್ತು ಬೆಳಗಾವಿ ಚಲೋ ನಾಳೆ ಬೆಂಗಳೂರು ಚಲೋ ಸಮಾವೇಶ ಮಾಡೋಣ.
ಈ ಮೂಲಕ ಲಿಂಗಾಯತ ಸಮುದಾಯದ ಶಕ್ತಿಪ್ರದರ್ಶನ ಮಾಡೋಣ. ಇಲ್ಲಿರುವ ಯಾವೊಬ್ಬ ಮಠಾಧೀಶರು ವೀರಶೈವರಲ್ಲ. ಎಲ್ಲರೂ ಲಿಂಗಾಯತ ಮಠಾಧೀಶರೂ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಯಾವ ತ್ಯಾಗಕ್ಕೂ ಸಿದ್ಧ ಎಂದ ಸಚಿವ ವಿನಯ ಕುಲಕರ್ಣಿ ಹೇಳಿದರು
ಇಡೀ ರಾಜ್ಯದಲ್ಲಿ ಬಸವ ಸೇನೆ ಆರಂಭಿಸುವಂತೆ ಸಚಿವ ಕುಲಕರ್ಣಿ ಸಲಹೆ ನೀಡಿದರು
ಸಮಾವೇಶದಲ್ಲಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಲಿಂಗಾಯತ ಸ್ವತಂತ್ರ ಕ್ಕೆ ಆಗ್ರಹಿಸಿ ಹೋರಾಟಕ್ಕೆ ನನ್ನ ಬೆಂಬಲವಿದೇ. ಲಿಂಗಾಯತ ಸ್ವತಂತ್ರ ಧರ್ಮ ಘೋಷಿಸುವಂತೆ ಮುಖ್ಯಮಂತ್ರಿ ಕಣ್ಣು ತೆರಸೋಣಾ. ಕೇಂದ್ರ ಸರ್ಕಾರದ ಕಣ್ಣನ್ನು ತೆರೆಸುವ ಕೆಲಸ ಲಿಂಗಾಯತ ಸಮುದಾಯದ ಮಾಡಬೇಕಿದೆ. ಕ್ರಾಂತಿಯ ನೆಲದಲ್ಲಿ ಕಿಡಿ ಸಿಡಿದಿದೆ ಗುರಿ ಮುಟ್ಟುವವರೆಗೂ ಹೋರಾಟ ನಿಲ್ಲುವ ದಿಲ್ಲ ಎಂದು ಹೆಬ್ಬಾಳಕರ ಹೇಳಿದರು
ಮಾತೆ ಮಹಾದೇವಿ ಅವರು ಮಾತನಾಡಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಬೇಕಿದೆ. ನಾವು ಹಿಂದೂಗಳ ವಿರೋಧಿಯಲ್ಲ.
ಮೋಹನ ಭಾಗವತರು ಲಿಂಗಾಯತ ಧರ್ಮ ಪ್ರತ್ಯೇಕ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಲಿಂಗಾಯತ ಧರ್ಮದ ಸ್ವತಂತ್ರ ಘೋಷಿಸಿದ್ರು ನಾವು ಹಿಂಧೂ ಧರ್ಮ ವಿರೋಧಿಸುವುದಿಲ್ಲಲಿಂಗಾಯತ ಧರ್ಮ ವಿಚಾರದಿಂದ ಬಿಜೆಪಿ ಮುಖಂಡರ ವಿರುದ್ಧ ಮಾತೆ ಮಾಹದೇವಿ ವಾಗ್ದಾಳಿ ನಡೆಸಿದರು
ಬಿಜೆಪಿ ಲಿಂಗಾಯತ ಮುಂಖಡರು ಲಿಂಗಾಯತ ಧರ್ಮದಿಂದ ಲಿಂಗಧಾರಣೆ ಮಾಡಿದ್ದಾರೆ..
ಬಿಜೆಪಿ ಪಾರ್ಟಿ ಯಿಂದ ಮಾಡಿಲ್ಲ.
ನೀವು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಕೈಜೋಡಿಸಬೇಕು ಎಂದು ಮಾತೆ ಮಹಾದೇವಿ ಆಗ್ರಹಪಡಿಸಿದರು
ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ್ರೆ.
ಬಿಜೆಪಿ ಲಿಂಗಾಯತ ಮುಖಂಡರು ಕೇಂದ್ರದ ಮೇಲೆ ಒತ್ತಡ ಹಾಕಿ ಮಾನ್ಯತೆ ಒದಗಿಸಬೇಕು ಎಂದ ಮಾತೆಮಾಹಾದೇವಿ ಒತ್ತಾಯ ಮಾಡಿದರು ಇದೊಂದು ಐತಿಹಾಸಿಕ ಸಮಾರಂಭ.ಜಗವ ಬದುಕಲು ನಮ್ಮ ಆದಿ ಬಸವಾದಿ ಶರಣರು ವಚನ ಸಾಹಿತ್ಯ ನೀಡಿದರು. ಆದ್ರೆ ಜಾತಿ ವಾದಿಗಳಿಂದ ಅದಕ್ಕೆ ಆಪತ್ತು ಬಂದು ಎರಗಿತು ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು ಮೋಹನ ಭಾಗವತರು ಪ್ರಭಾವಿಗಳಿದ್ದಾರೆ, ಒಳ್ಳೆ ಸ್ಥಾನದಲ್ಲಿದ್ದಾರೆ ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಹೇಳಿ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ಕೊಡಿಸಲು ವತ್ತಾಯ ಮಾಡಬೇಕು ವೀರಶೈವ ಅನ್ನುವಂತೆ ಪದ ದಬ್ಬಾಳಿಗೆ ಮಾಡಿ ಉಪಚಾರ ಮಾಡಿಕೊಂಡಿದ್ದಾರೆ..
ಅದಕ್ಕೆ ಬಿಜೆಪಿ ವಿರುದ್ದ ಮಾತೆ ಮಹಾದೇವಿ ವಾಗ್ದಾಳಿ ನಡೆಸಿ
ನೀವು ಟಿಕೇಟ್ ಪಡೆದುಕೊಳ್ಳುವಾಗ ಲಿಂಗಾಯತ ಕೋಟಾ ಅಡಿ ಟಿಕೇಟ್ ಪಡೆದುಕೊಳ್ಳುತ್ತಿರಿ. ನೀವು ಹುಟ್ಟುವಾಗ ಲಿಂಗಾಯತರು ನೀವು ಸತ್ತಾಗ ಬಿಜೆಪಿ ಸಂಸ್ಕ್ರತ ಮಣ್ಣು ಮಾಡಲ್ಲ ಬದಲಾಗಿ ಲಿಂಗಾಯತ ಸಂಸ್ಕೃತ ದಿಂದ ಮಣ್ಣು ಮಾಡುತ್ತಾರೆ. ಎಂದು ಮಾತೆ ಮಹಾದೇವಿ ಅವರು ಬಿಜೆಪಿ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದರು
ಸೆಪ್ಟೆಂಬರ್ ೧೦ ರಂದು ಗುಲ್ಬರ್ಗದಲ್ಲಿ ಮತ್ತು ೩೦ ರಂದು ಲಾತೋರನಲ್ಲಿ ಹೀಗೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ಸರ್ಕಾರಿ ಜಾತಿ ಪ್ರಮಾಣ ಪತ್ರ ದಲ್ಲಿ ವೀರಶೈವ ಲಂಗಾಯತ ಎಂದು ನಮೂದ ಮಾಡಲಾಗುತ್ತಿದೆ , ಅದನ್ನ ತೆಗೆದು ಹಾಕಲು ಮುಂದಿನ ದಿನಗಳಲ್ಲಿ ಅದರ ವಿರುದ್ದ ಹೋರಾಟ ಮಾಡಲಾಗುತ್ತದೆ. ಎಂದು ಮಾತೆ ಮಾಹಾದೇವಿ ಅವರು ಸಮಾವೇಶದಲ್ಲಿ ಮಾಹಿತಿ ನೀಡಿದರು
ಚಿತ್ರದುರ್ಗ ಮುರಘಾಮಠದ ಶಿವಮೂರ್ತಿ ಸ್ವಾಮೀಜಿ ಮಾತನಾಡಿ ಲಿಂಗಾಯತ ಸಮಾವೇಶದ ಮೂಲಕ ಬೆಳಗಾವಿ ಮತ್ತೊಮ್ಮೆ ಹೊಸ ಬೆಳಕು ಜಗತ್ತಿಗೆ ನೀಡುತ್ತಿದೇ ಬಸವತತ್ವ ಲಿಂಗಾಯತ ತತ್ವ. ಬಸವ ತತ್ವ ಪರಿವರ್ತನೆ ತತ್ವವಾಗಿದೇ.
ಲಿಂಗಾಯತಕ್ಕೆ ಸ್ಪಷ್ಟವಾದ ಪರಿವರ್ತನೆ ಪರಂಪರೆಯಿದೇ. ಸಾವಿರಾರು ವೀರಕ್ತಮಠದ ಮಠಾಧೀಶರು ಈ ಸಮಾವೇಶಕ್ಕೆ ಬರಬೇಕಿದೆ. ಬರದೇ ಇರುವ ಮಠಾಧೀಶರ ಹೃದಯ ಪರಿವರ್ತನೆ ಮಾಡಬೇಕಿದೆ. ಎಂದು ಹೇಳಿದ ಶ್ರೀಗಳು ವೀರಶೈವರು ಮತ್ತು ಲಿಂಗಾಯತರು ಒಂದೇ ಲಿಂಗಾಯತರು ಆಗಬೇಕಿದೇ.
ಮುಂದಿನ ದಿನಗಳಲ್ಲಿ ಲಿಂಗಾಯತ ಸಂಸ್ಕಾರಗಳನ್ನ ಕಲಿಸಬೇಕಿದೆ. ಲಿಂಗಾಯತ ಸಂಸ್ಕಾರ ಕಲಿಸುವ ಕಾರ್ಯಾಗಾರ ಮಾಡಬೇಕಿದೆ. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಧ್ವನಿ ಹಳ್ಳಿಯಿಂದ ದೆಹಲಿ ವರೆಗೂ ಮಾರ್ದನೀಸಬೇಕಿದೆ ಎಂದು ಮುರುಘಾಮಠದ ಶ್ರೀಗಳು. ಹೇಳಿದರು
ಬೃಹತ್ ಸಮಾವೇಶ ನಂತರ ಸಮಾವೇಶ ಭಾಗವಹಿಸಿದ ನಾಡಿನ ಮಠಾಧಿಶರು , ಲಿಂಗಾಯತ ಸಮುದಾಯದ ಮುಖಂಡರು ಮಹಾ ರ಼್ಯಾಲಿ ಭಾಗಿಯಾದರು ಕಾರ್ಯಕ್ರಮದ ವೇದಿಕೆಯಿಂದ ಪ್ರಾರಂಭವಾದ ಮಹಾ ರ಼್ಯಾಲಿ ಬೋಗಾರವೆಸ್ ವೃತ್ತ ಹುತಾತ್ಮ ವೃತ್ತ, ಗಣಪತಿ ಗಲ್ಲಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚನ್ನಮ್ಮ ವೃತ್ತ ದಲ್ಲಿ ಮುಕ್ತಾಯ ಗೊಂಡಿತು