ಬೆಳಗಾವಿ- ಯಮಕನಮರಡಿ ಕ್ಷೇತ್ರದಿಂದ ಸಹೋದರ ಸತೀಶ ಜಾರಕಿಹೊಳಿ ವಿರುದ್ಧ ಸ್ಪರ್ದೆ ಮಾಡುವದಾಗಿ ಹೇಳಿದ್ದ ಲಖನ್ ಜಾರಕಿಹೊಳಿ ಈಗ ಸತೀಶ ಜಾರಕಿಹೊಳಿ ಅವರ ಗೆಲುವಿಗೆ ಶ್ರಮಿಸುತ್ತೇನೆ ಯಾವುದೇ ಕಾರಣಕ್ಕೂ ಬಿಜೆಪಿ ಸೇರುವದಿಲ್ಲ ಎಂದು ಗೋಕಾಕಿನಲ್ಲಿ ಘೋಷಿಸಿ ಎಲ್ಲ ವಿವಾದಗಳಿಗೆ ತೆರೆ ಎಳೆದಿದ್ದಾರೆ
ಗೋಕಾಕಿನಲ್ಲಿ ನಡೆದ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲಖನ್ ಜಾರಕಿಹೊಳಿ ಬಿಜೆಪಿಯವರು ನನ್ನನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಿದರೂ ನಾನು ಕಾಂಗ್ರೆಸ್ ಪಕ್ಷ ಬಿಡುವದಿಲ್ಲ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದುಕೊಂಡು ಅಣ್ಣ ರಮೇಶ ಮತ್ತು ಸತೀಶ ಗೆಲುವಿಗೆ ಶ್ರಮಿಸುತ್ತೇನೆ ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ
ಲಖನ್ ಜಾರಕಿಹೊಳಿ ಅವರ ಹೇಳಿಕೆಯಿಂದ ಜಾರಕಿಹೊಳಿ ಸಹೋದರರ ನಡುವಿನ ಕಲಹ ಮುಗಿದಿದೆ ಅನ್ನೋದು ಸ್ಪಷ್ಠವಾಗಿದೆ ಇತ್ತೀಚಿಗೆ ಸಹೋದರರ ನಡುವೆ ಸಂಧಾನ ಮಾಡಿದ್ದರು ಈ ಸಂಧಾನ ಚುನಾವಣಾ ಪೂರ್ವದಲ್ಲಿ ಸಫಲವಾಗಿದ್ದು ವಿಶೇಷ ವಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ