ಬೆಳಗಾವಿ-ಥರ್ಡ ಪಾರ್ಟಿ ಪ್ರಿಮೀಯಂ ಇಳಿಕೆ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುತ್ತಿರುವದನ್ನು ವಿರೋಧಿಸಿ ದೇಶಾದ್ಯಂತ ಅನಿರ್ಧಿಷ್ಠ ಕಾಲದವರೆಗೆ ಲಾರಿ ಮುಷ್ಕರ ನಡೆಯುತ್ತಿದೆ ಶುಕ್ರವಾರ ವಿಮಾ ಪ್ರಾಧಿಕಾರದ ಅಧಿಕಾರಿಗಳು ನಡೆಸಿದ ಸಭೆ ವಿಫಲವಾಗಿದ್ದು ಮುಷ್ಕರಕ್ಕೆ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ ಬೆಂಬಲ ಸೂಚಿಸಿದೆ
ದೇಶವ್ಯಾಪಿ ನಡೆಯುತ್ತಿರುವ ಲಾರಿ ಮುಷ್ಕರಕ್ಕೆ ಸಮಂಧಿಸಿದಂತೆ ಕೇಂದ್ರ ಹಣಕಾಸು ಇಲಾಖೆಯ ಅಧಿಕಾರಿಗಳು ನಡೆಸಿದ ಸಂಧಾನ ವಿಫಲವಾಗಿದ್ದು ಸೋಮವಾರದಿಂದ ಪೆಟ್ರೋಲ್ ಡಿಸೈಲ್ ವಾಹನಗಳ ಮಾಲೀಕರೂ ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದು ದೇಶಾದ್ಯಂತ ಪೆಟ್ರೋಲ್ ಡಿಸೈಲ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ
ಬೆಳಗಾವಿಯಲ್ಲಿ ವಿವಿಧ ತೈಲ ಕಂಪನಿಗಳ ಡಿಪೋಗಳು ಇವೆ ದೇಸೂರು ಡಿಪೋಗಳಿಂದ ಪ್ರತಿ ದಿನ ನೂರಾರು ಟ್ಯಾಂಕರ್ ಗಳು ಪೆಟ್ರೋಲ್ ಡಿಸೈಲ್ ಪೂರೈಕೆ ಮಾಡುತ್ತಿವೆ ಸೋಮವಾರದಿಂದ ಇವರೂ ಮುಷ್ಕರದಲ್ಲಿ ಪಾಲ್ಗೊಂಡರೆ ಮುಷ್ಕರ ಇನ್ನಷ್ಟು ಪರಿಣಾಮಕಾರಿಯಾಗಲಿದೆ
ದಕ್ಷಿಣ ವಲಯ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ನೀಡಿರುವ ಲಾರಿ ಬಂದ್ ಕರೆಯಲ್ಲಿ ಎಲ್ಲ ಲಾರಿ ಮಾಲೀಕರು ಪಾಲ್ಗೊಂಡು ಮುಷ್ಕರ ಯಶಸ್ವಿಗೊಳಿಸುವಂತೆ ಕಟ್ಟು ನಿಟ್ಟಿನ ಕರೆ ನೀಡಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಬಂದ್ ಕರೆಯ ಬಿಸಿ ತಟ್ಟಲಿದೆ
ಬೆಳಗಾವಿ ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಈಗಾಗಲೇ ಲಾರಿ ಮಾಲೀಕರ ಸಭೆ ಕರೆದು ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿ ಪಡಿಸದಂತೆ ತಾಕೀತು ಮಾಡಿದ್ದು ಹಣ್ಣು,ತರಕಾರಿ,ಔಷದಿ ಮತ್ತು ಹಾಲು ಪೂರೈಸುವ ವಾಹನಗಳಿಗೆ ಯಾರೊಬ್ಬರೂ ಅಡ್ಡಿ ಪಡಿಸದಂತೆ ಪೋಲೀಸರು ನಿಗಾ ವಹಿಸಲಿದ್ದಾರೆ