ಬೆಳಗಾವಿ-ಬೆಳಗಾವಿ ತಾಲುಕಿನ ಮಾಸ್ತಮರ್ಡಿ ಗ್ರಾಮದಲ್ಲಿ ಪತಿಯ ಕಿರುಕಳದಿಂದ ಬೆಸತ್ತ ಮಹಿಳೆಯೊಬ್ಬಳು ತನ್ನ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟಣೆ ನಡೆದಿದೆ
ಶುಕ್ರವಾರ ತನ್ನ ಮಗನ ಜೊತೆ ಮನೆ ಬಿಟ್ಟ ಮಾಸ್ತಮರ್ಡಿ ಗ್ರಾಮದ ರೇಖಾ ಬಸವರಾಜ ಕುರಂಗಿ ಗ್ರಾಮದ ಹೊರವಲಯದಲ್ಲಿರುವ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ವಿಷಯ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ
ಮಾಸ್ತಮರ್ಡಿ ಗ್ರಾಮದ ಬಸವರಾಜ ಕುರಂಗಿ ಮತ್ತು ರೇಖಾ ಜೊತೆ ನಾಲ್ಕು ವರ್ಷದ ಹಿಂದೆ ಪ್ರೇಮ ವಿವಾಹವಾಗಿತ್ತು,ಮೂರು ವರ್ಷ ಬದುಕಿನ ಬಂಡಿ ಸರಳವಾಗಿಯೇ ನಡೆದಿತ್ತು ಇವರ ಮೇಲೆ ಯಾರ ದೃಷ್ಠಿ ಬಿತ್ತೋ ಗೊತ್ತಿಲ್ಲ ಪತಿರಾಯ ಕಳೆದ ಒಂದು ವರ್ಷದಿಂದ ರೇಖಾಗೆ ಕಿರುಕಳ ನೀಡಲು ಆರಂಭಿಸಿದ ಕಾರಣ ಇದರಿಂದ ಮನನೊಂದ ರೇಖಾ ತನ್ನ ಮೂರು ವರ್ಷದ ಮಗನ ಜೊತೆ ಇಹಲೋಕ ತ್ಯೆಜಿಸಿದ್ದಾಳೆ
ಪತಿ ಬಸವರಾಜ ನಾಗಪ್ಪಾ ಕುರಂಗಿ ಹಾಗು ಮೈದುನ ಮಹಾದೇವ ಕುರಂಗಿ ವಿರುದ್ಧ ಮಾರಿಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …