ಬೆಳಗಾವಿ- ಗೋವಾ ನೀರಾವರಿ ಮಂತ್ರಿ ವಿನೋದ ಪಾಳೇಕರ್ ಕಳಸಾ ಬಂಡೂರಿ ನಾಲೆಯ ಕಾಮಗಾರಿಯನ್ನು ಕದ್ದು ಮುಚ್ವಿ ಪರಶೀಲನೆ ಮಾಡಿ ಕಿತಾಪತಿ ನಡೆಸಿದ ಹಿನ್ನಲೆಯಲ್ಲಿ ಜಲಸಂಪನ್ನೂಲ ಸಚಿವ ಎಂಬಿ ಪಾಟೀಲ ಸೋಮವಾರ ಬೆಳಿಗ್ಗೆ ಕಣಕುಂಬಿಗೆ ಭೇಟಿ ನೀಡಲಿದ್ದಾರೆ
ಸೋಮವಾರ ಬೆಳಿಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಕಣಕುಂಬಿಗೆ ತೆರಳಿ ಕಣಕುಂಬಿಯಲ್ಲಿ ನಡೆಯುತ್ತಿರುವ ಕಳಸಾ ಬಂಡೂರಿ ನಾಲೆಯ ಕಾಮಗಾರಿ ಪರಶೀಲನೆ ಮಾಡಲಿದ್ದಾರೆ
ಕಳಸಾ ಬಂಡೂರಿ ನಾಲೆಯ ಕಾಮಗಾರಿ ಸ್ಥಳಕ್ಕೆ ಗೋವಾ ನೀರಾವರಿ ಮಂತ್ರಿ ವಿನೋದ್ ಪಾಳೆಕರ್ ಪಾಳೇಗಾರಿಕೆ ನಡಸಿ ಮಹಾದಾಯಿ ನಮ್ಮ ತಾಯಿ ಮಹಾದಾಯಿ ನೀರನ್ನು ಕರ್ನಾಟಕಕ್ಕೆ ಕೊಡೋದಿಲ್ಲ ಎಂದು ಹೇಳಿಕೆ ನೀಡಿ ನಂತರ ಗೋವಾಗೆ ಹೋಗಿ ಕರ್ನಾಟಕದವರು ಹರಾಮಿಗಳು ಎಂದು ನಿಂದಿಸಿರುವ ಬೆನ್ನಲ್ಲೆ ಕರ್ನಾಟಕದ ನೀರಾವರಿ ಮಂತ್ರಿ ಎಂ ಬಿ ಪಾಟೀಲ ಕಣಕುಂಬಿ ಕಡೆಗೆ ಧಾವಿಸುತ್ತಿರುವದು ವಿಶೇಷವಾಗಿದೆ
ಮಹಾದಾಯಿ ಹುಟ್ಟೋದು ಕರ್ಣಾಟಕದಲ್ಲಿ ಹರಿಯೋದು ಕರ್ನಾಟಕದಲ್ಲಿ ಮಹಾದಾಯಿ ನಮ್ಮ ತಾಯಿ ಎಂದು ಗೋವಾ ಮಂತ್ರಿಗೆ ತಿರಗೇಟು ನೀಡಲು ಎಂ ಬಿ ಪಾಟೀಲ ಕಣಕುಂಬಿಗೆ ಬರುತ್ತಿದ್ದಾರೆ ಎಂದು ಹೇಳಲಾಗಿದೆ
ಕಳಸಾ ಬಂಡೂರಿ ಕಾಮಗಾರಿಗೆ ಅಕ್ಷೇಪ ವ್ಯೆಕ್ತ ಪಡಿಸಿರುವ ಗೋವಾ ಮಂತ್ರಿ ವಿನೋದ ಪಾಳೇಕರ್ ಮಹಾದಾಯಿ ಅವರಪ್ಪನ ಮನೆ ಆಸ್ತಿ ಅಂತ ತಿಳ್ಕೊಂಡು ನೀರು ಕೊಡೋದಿಲ್ಲ ಅಂತ ಹೇಳಿಕೆ ನೀಡಿ ಭಾರತದದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದು ಕರ್ನಾಟಕದ ಜಕಸಂಪನ್ಮೂಲ ಸಚಿವ ಎಂ ಬಿ ಪಾಟೀಲ ಅದಕ್ಕೆ ತಕ್ಕ ಉತ್ತರ ನೀಡಲಿ ಎನ್ನುವದು ಕನ್ನಡಿಗರ ಆಶಯ..