ಬೆಳಗಾವಿ: ಬಿಜೆಪಿ ಬೈಕ್ ರ‌್ಯಾಲಿ ವೇಳೆ ಬಿಜೆಪಿ ಶಾಸಕ ಸಂಜಯ್ ಪಾಟೀಲರಿಂದ ಪೊಲೀಸರಿಗೆ ಆವಾಜ್.ಹಾಕಿದ ಘಟನೆ ನಡೆದಿದೆ
ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳೂರು ಚಲೋ ಬೈಕ್ ರ್ಯಾಲಿ ನಡೆಸಲು ಶಾಸಕ ಸಂಜಯ ಪಾಟೀಲ ಬಿಜೆಪಿ ಕಾರ್ಯಕರ್ತರ ಜೊತೆ ಚನ್ನಮ್ಮ ವೃತ್ತಕ್ಕೆ ಬಂದಾಗ ಶಾಸಕ ಸಂಜಯ ಮತ್ತು ಪೋಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು
ಖಡೆಬಜಾರ್ ಎಸಿಪಿ ಜಯಕುಮಾರ್ ಅವರಿಗೆ ಏರು ಧ್ವನಿಯಲ್ಲಿ ಚಿರಾಡಿದ ಶಾಸಕ ಸಂಜಯ ಪಾಟೀಲ ಏನೇ ಇದ್ರು ನಿಮ್ಮದು ಆರು ತಿಂಗಳು ಮಾತ್ರ.. ನಂತರ ನಿಮ್ಮನ್ನು ನೋಡಿಕೊಳ್ಳುತ್ತೆನೆ ಎಂದು ಎಸಿಪಿಗೆ ಧಮ್ಕಿ.ಹಾಕಿದ ಘಟನೆಯೂ ನಡೆಯಿತು
ಯಾಕೆ ನಮ್ಮನ್ನ ಮುಟ್ಟುತ್ತಿದ್ದಿರಿ ಎಂದ ಸಂಜಯ್ ಪಾಟೀಲ್ ಜೊತೆ ನಯವಾಗಿಯೇ ಮಾತನಾಡಿದ ಎಸಿಪಿ ಜಯಕುಮಾರ್ ಶಾಸಕ ಸಂಜಯ ಪಾಟೀಲರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡದರೂ ಸಂಜಯ ಪಾಟೀಲರ ಆಕ್ರೋಶ ತನ್ನಗಾಗಲಿಲ್ಲ
ನಾವು ಪ್ರತಿಭಟನೆ ಮಾಡಿಲ್ಲ ಸುಳ್ಳು ಹೇಳಬೇಡಿ ಎಂದು ಎಸಿಪಿಗೆ ಆವಾಜ್ ಹಾಕಿದ್ದಲ್ಲದೇ ಯಾರು ನೀಜ ಮಾತಾಡ್ತಾರೆ ಅವರು ಒಂದೇ ತಂದೆ-ತಾಯಿಗೆ ಹುಟ್ಟಿದಂಗೆ… ಸುಳ್ಳು ಹೇಳೋರ ತಂದೆ ಎಷ್ಟು ಅಂತ ವಿಚಾರ ಮಾಡಿ ಎಂದು ಶಾಸಕ ಸಂಜಯ ಪಾಟೀಲ ಎಸಿಪಿ ಜೈಕುಮಾರ್ ಅವರಿಗೆ ದರ್ಪ ತೋರಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ