ಬೆಳಗಾವಿ- ಶಾಸಕ ಸಂಜಯ ಪಾಟೀಲ್ ನಾಡ ವಿರೋಧಿ ಹೇಳಿಕೆಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ಕರವೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬೆಳಗಾವಿ ಚನಮ್ಮ ವೃತ್ತದಲ್ಲಿ ಜಮಾವಣೆಗೊಂಡ ನಾರಾಯಣ ಗೌಡ ಬಣದ ಕಾರ್ಯಕರ್ತರು ಶಾಸಕ ಸಂಜಯ ಪಾಟೀಲ್ ನಾಡದ್ರೋಹಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಶಾಸಕ ಸಂಜಯ ಪಾಟೀಲ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು
ನಿನ್ನೆ 132 ನೇ ಮರಾಠಿ ಸಾಹಿತ್ಯ ಸಮೇಳನದಲ್ಲಿ ನಾನೊಬ್ಬ ಶಾಸಕನಾಗಿ ಬಂದಿಲ್ಲಾ, ಮರಾಠಿಗರನಾಗಿ ಬಂದಿದ್ದೇನು ಎಂದು ಹೇಳಿಕೆ ನೀಡಿದ್ದರು, ಅಲ್ಲದೆ ನನಗೆ ಮಾರಾಠಿ ಪ್ರೇಮ ಇದೆ ಅಂತ ಹೇಳಿದ್ದರು. ಈ ವಿಚಾವಾಗಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಶಾಸಕ ಸಂಜಯ ಪಾಟೀಲ್ ಇಂತ ನಿಚ ರಾಜಕಾರಣ ಮಾಡುವದು ಬಿಡಬೇಕು, ಕರ್ನಾಟಕದಲ್ಲಿ ಶಾಸಕನಾಗಿ ಇದ್ದುಕೊಂಡು ಮರಾಠಿ ಬಾಷೆಗೆ, ಮಹಾರಾಷ್ಟ್ರದ ಪರವಾಗಿ ಹೇಳಿಕೆ ನೀಡುವದನ್ನು ಬಿಡಬೇಕು ಶಾಸಕರ ವಿರುದ್ದ ಘೋಷಣೆ ಕೂಗಿದರು
ಬಿಜೆಪಿ ನಾಯಕರು ಶಾಸಕ ಸಂಜಯ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ