ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲೂ ಮಹಾದಾಯಿ ಹೋರಾಟ ಕಿಚ್ಚು ಜೋರಾಗಿತ್ತು. ಬೆಳಿಗ್ಗೆಯಿಂದಲೇ ಬೀದಿಗಿಳಿದು ರೈತ ಮತ್ತು ಕನ್ನಡಪರ ಸಂಘನೆಗಳು ಜಿಲ್ಲೆಯ ಅಲ್ಲಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ರು.. ಗೋವಾ ಸರ್ಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧಿಕ್ಕಾರ ಕೂಗಿ ಛೀಮಾರಿ ಹಾಕಿದ್ರು. ಇನ್ನು ಬೆಳಗಾವಿಯಲ್ಲಿ ಸಾಲು ಸಾಲು ಪ್ರತಿಭಟನೆಗಳೂ ನಡೆದ್ರೆ, ಬೈಲಹೊಂಗಲ್ ಸಂಪೂರ್ಣ ಸ್ತಬ್ಧವಾಗಿತ್ತು. ಗಡಿ ಜಿಲ್ಲೆಯ ಜನತೆ ಮಹಾದಾಯಿ ನೀರು ಸಿಗೋವರೆಗೂ ಹೋರಾಟ ನಿಲ್ಲೊದಿಲ್ಲ ಅನ್ನೊ ಎಚ್ಚರಿಕೆಯವನ್ನ ಬಂದ್ ಮೂಲಕ ರವಾಣಿಸಿದ್ದು, ಮಹಾದಾಯಿ ಕಿಚ್ಚಿಗೆ ಬೆಳಗಾವಿ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗ ಸ್ಥಬ್ದಗೊಂಡಿತ್ತು.
ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕ ಬಂದ್ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ವಿವಿಧ ಕನ್ನಡಪರ ಮತ್ತು ಸಂಘ ಸಂಸ್ಥೆಗಳ ಬೆಂಬಲಿಸಿ ಹೋರಾಟಕ್ಕೆ ಧುಮುಕಿದ್ದರಿಂದ ಬಂದ್ ಯಶಸ್ವಿಯಾಗಿದೆ. ಬೆಳಿಗ್ಗೆ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲಿ ಟಾಯರ್ ಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಮತ್ತು ಗೋವಾ ಸರ್ಕಾರರಗಳ ವಿರುದ್ಧ ಸಿಡಿದೆದ್ದರು. ರೈತರು ನಂತರ ನಗರದ ಚನ್ನಮ್ಮ ವೃತ್ತದಲ್ಲೂ ಟೈಯರಿಗೆ ಬೆಂಕಿ ಹಚ್ಚಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ರು. ಈ ವೇಳೆ ಮಾತನಾಡುತ್ತ ಪ್ರಧಾನಿ ಮಧ್ಯಸ್ಥಿಕೆಯಿಂದ ಮಾತ್ರ ಮಹಾದಾಯಿ ವಿವಾದ ಬಗೆಹರಿಯಲು ಸಾಧ್ಯ ಕೂಡಲೇ ಈ ಕೆಲಸ ಆಗಬೇಕು ಅಂತ ರೈತ ಮುಖಂಡರು ಆಗ್ರಹಿಸಿದ್ರು. ಇನ್ನು ಗೋವಾ, ಬೆಳಗಾವಿ ನಗರ ಸಾರಿಗೆ ಸೇರಿದಂತೆ ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟ, ಬೆಂಗಳೂರು ಕಡೆಗೆ ಹೋಗುವ ಬಸ್ಸುಗಳನ್ನ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ರಾಮದುರ್ಗ, ಸವದತ್ತಿ ಹಾಗೂ ಬೈಲಹೊಂಗಲ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಲಾಗಿತ್ತು.
ಇನ್ನು ಮಹಾದಾಯಿ ಹೋರಾಟ ಬೈಲಹೊಂಗಲ ಪಟ್ಟಣದಲ್ಲಿ ಹೆಚ್ಚು ಕಾವು ಪಡೆದಿತ್ತು. ಬಂದ್ ವೇಳೆ ನಗರದಲ್ಲಿನ ಕೆವಿಜಿ ಬ್ಯಾಂಕ್ ಬಂದ್ ಮಾಡದ ಕಾರಣ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ರು. ಇದ್ರಿಂದ ಬ್ಯಾಂಕಿನ ಗಾಜುಗಳು ಪುಡಿಪುಡಿಯಾಗಿವೆ. ಬೈಲಹೊಂಗಲದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿದ ಅಂಗಡಿಕಾರರು ಮಹಾದಾಯಿಗಾಗಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ್ರು. ನಗರದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿದ್ದವು. ಬೈಲಹೊಂಗಲದ ಮೂರು ಸಾವಿರ ಮಠದ ಶ್ರೀಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ರಾಜಕೀಯ ಮುಖಂಡ್ರು ಮತ್ತು ವಿವಿಧ ರೈತ ಸಂಘಟನೆಗಳು ಬೃಹತ್ ರ್ಯಾಲಿ ನಡೆಸಿದರು
ಬೆಳಗಾವಿ ಜಿಲೆಯ ಸವದತ್ತಿ, ರಾಮದುರ್ಗ,ಯರಗಟ್ಟಿಯಲ್ಲೂ ಬಂದ್ ಆಚರಣೆ ನಡೆಸಿದ್ರೆ. ಉಳಿದ ತಾಲೂಕುಗಳಲ್ಲಿ ನಡೆದ ಬೀದಿ ಹೋರಾಟಗಳು ಮಹದಾಯಿ ಬಂದ್ಗೆ ಶಕ್ತಿ ತುಂಬಿದವು. ಇನ್ನು ಚುನಾವಣೆಯ ಹೊಸ್ತಿಲಲ್ಲಿ ಮಹದಾಯಿ ವಿಚಾರವನ್ನೆ ಅಸ್ತ್ರವಾಗಿ ಉಪಯೋಗಿಸಿಕೊಳ್ಳಲು ಮುಂದಾದ ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಲು ಉತ್ತರ ಕರ್ನಾಟಕ ಭಾಗದ ರೈತರು ಸಜ್ಜಾಗಿದ್ದು, ಇದಕ್ಕೆ ಉತ್ತರ ಕರ್ನಾಟಕ ಮಹದಾಯಿ ಬಂದ್ ಸಾಕ್ಷಿಯಾಗಿದೆ.