ಬೆಳಗಾವಿ–ಬೆಳಗಾವಿ ಲೋಕಸಭಾಮತಕ್ಷೇತ್ರದಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಕಾಂಗ್ರೆಸ್ ಅಭ್ಯರ್ಥಿ ಡಾ,ವ್ಹಿ ಎಸ್ ಸಾಧುನವರ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದಾರೆ ಬೈಲಹೊಂಗಲ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದ್ದಾರೆ
ಶಾಸಕ ಮಹಾಂತೇಶ ಕೌಜಲಗಿ ಕಾಂಗ್ರೆಸ್ ಅಭ್ಯರ್ಥಿ ಸಾಧುನವರ ಅವರ ಪರವಾಗಿ ಬೈಲಹೊಂಗಲ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ ಸಾಧುನವರ ಅವರ ಪುತ್ರಿ ಕೃಪಾ ಅವರೂ ಕೂಡಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು ಶಾಸಕ ಮಹಾಂತೇಶ ಕೌಜಲಗಿ ಅವರ ಪ್ರಚಾರಕ್ಕೆ ಸಾಥ್ ನೀಡುತ್ತಿದ್ದಾರೆ
ಬೈಲಹೊಂಗಲ ಕ್ಷೇತ್ರದ ಯಡಳ್ಳಿಯಲ್ಲಿ ಮತಯಾಚಿಸಿ ಮಾತನಾಡಿದ ಶಾಸಕ ಮಹಾಂತೇಶ ಕೌಜಲಗಿ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ ಬೆಳಗಾವಿ ನಗರದ ಅಭಿವೃದ್ಧಿಗೆ ನಗರೋಥ್ಥಾನ ಯೋಜನೆಯ ನೂರು ಕೋಟಿಯ ಜೊತೆಗೆ ಹೆಚ್ಚುವರಿಯಾಗಿ ನೂರು ಕೊಟಿ ಅನುದಾನ ನೀಡಿದ್ದರಿಂದಲೇ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಘೋಷಿಸುವ ಮೊದಲೇ ಬೆಳಗಾವಿ ಸ್ಮಾರ್ಟ ಸಿಟಿ ಆಗಲು ಸಾಧ್ಯವಾಯಿತು ಎಂದು ಮಹಾಂತೇಶ ಕೌಜಲಗಿ ಹೇಳಿದರು
ಬೆಳಗಾವಿ ಕೇಂದ್ರ ಬಸ್ ನಿಲ್ಧಾಣದ ನವ ನಿರ್ಮಾಣಕ್ಕೆ ,ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಬೈಲಹೊಂಗಲದ ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ಸಮಾಧಿ ಅಭಿವೃದ್ಧಿಗೆ ,ಬೆಳಗಾವಿಯಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದು ಸಿದ್ರಾಮಯ್ಯ ಹೀಗಾಗಿ ಬೆಳಗಾವಿ ಜಿಲ್ಲೆಯಾದ್ಯಂತ್ಯ ಸಿದ್ರಾಮಯ್ಯನವರ ಅಲೆ ಇದೆ ಇಲ್ಲಿ ಕಾಂಗ್ರೆಸ್ ಅಲೆ ಇದೆ ಹೀಗಾಗಿ ಕಾಂಗ್ರೆಸ್ ಅಭ್ಯರ್ಥೀ ಸಾಧುನವರ ಗೆಲ್ಲೋದು ಖಚಿತ ಎಂದು ಮಹಾಂತೇಶ ವಿಶ್ವಾಸ ವ್ಯೆಕ್ತ ಪಡಿಸಿದರು
ಬೈಲಹೊಂಗಲ ಕೇತ್ರದ ಯಡಹಳ್ಳಿಯಲ್ಲಿ ಮಹಾಂತೇಶ ಕೌಜಲಗಿ ಮತಯಾಚಿಸುತ್ತಿರುವಾಗ ಗ್ರಾಮದ ಹಿರಿಯರು ಸಂಸದ ಸುರೇಶ ಅಂಗಡಿ ವಿರುದ್ಧ ತೀವ್ರ ಆಕ್ರೋಶ ವ್ಯೆಕ್ತ ಪಡಿಸಿ ಸುರೇಶ ಅಂಗಡಿ ಯಾರು ನಾವು ನೋಡಿಯೇ ಇಲ್ಲ ನಮ್ಮ ಗಾಮಕ್ಕೆ ಒಂದು ಬಾರಿಯೂ ಬಂದಿಲ್ಲ ಎಂದು ಆಕ್ರೋಶ ವ್ಯೆಕ್ತ ಪಡಿಸಿದರು
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹೆಚ್ ಕೆ ಪಾಟೀಲ ಪ್ರವಾಸ
ನಾಳೆ ಬುಧವಾರ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ರಾಜ್ಯ ಕಾಂಗ್ರೆಸ್ ಪ್ರಚಾರ ಪ್ರಚಾರ ಸಮೀತಿಯ ಅಧ್ಯಕ್ಷ ಹೆಚ್ ಕೆ ಪಾಟೀಲ ಪ್ರಚಾರ ಕೈಗೊಳ್ಳಲಿದ್ದಾರೆ ಬುಧವಾರ ಬೆಳಿಗ್ಗೆ 10 ಘಂಟೆಗೆ ಸವದತ್ತಿ ತಾಲ್ಲೂಕಿನ ಹಂಚಿನಾಳ,11-30 ಕ್ಕೆ ಸವದತ್ತಿ ಪಟ್ಟಣ,12-30 ಹೂಲಿಕಟ್ಟಿ,1-30 ಮುನವಳ್ಳಿ,2-30 ಯರಗಟ್ಟಿ ಮಧ್ಯಾಹ್ನ 3-00 ಘಂಟೆಗೆ ರಾಮದುರ್ಗ ತಾಲ್ಲೂಕಿನ ಹುಲಕುಂದ,ಚಿಕ್ಕೊಪ್ಪ ಹಾಗೂ ಬಾಗೋಜಿಕೊಪ್ಪ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಸಂಜೆ 4-30 ಘಂಟೆಗೆ ಅರಭಾಂವಿ ಕ್ಷೇತ್ರದ ಯಾದವಾಡ,ಕುಲಗೋಡ ಹಾಗೂ ಮೂಡಲಗಿಯಲ್ಲಿ ಹೆಚ್ ಕೆ ಪಾಟೀಲ ಪ್ರಚಾರ ಸಭೆಗಳನ್ನು ನಡೆಸಿ ಮತಯಾಚಿಸಲಿದ್ದಾರೆ