Breaking News

ಸಹಾಯ ಕೇಳಲು ಹೋದವರಿಗೆ ದುಡ್ಯಾಕ ಹೋಗ್ರೀ ಅಂದ್ರು …. ಸುಮ್ಮನೇ ಗುದ್ದ್ಯಾಡಾಕ ಹೋಗಬ್ಯಾಡ್ರಿ ಅಂದ್ರು…..!!

ಬೆಳಗಾವಿ-ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರದ್ದು ಸಾಧು ಸ್ವಭಾವ ಇದನ್ನು ಎಲ್ಲರೂ ನಂಬುತ್ತಾರೆ.ಆದ್ರೆ ಬಡವರು ಅವರ ಹತ್ತಿರ ಸಹಾಯ ಕೇಳಲು ಹೋದ ಸಂಧರ್ಭದಲ್ಲಿ ಅವರು ಆಡಿದ ಮಾತುಗಳನ್ನು ಕೇಳಿದರೆ ಅದನ್ನು ನಂಬೋಕೆ ಆಗ್ತಾ ಇಲ್ಲ

ಕೊರೋನಾ ಸಂಕಷ್ಟದಿಂದ ಎಲ್ಲರೂ ಕಷ್ಟ ಅನುಭವಿಸುತ್ತಿದ್ದಾರೆ.ಟಿವ್ಹಿ ಯಲ್ಲಿ,ಪೇಪರ್ ನಲ್ಲಿ ಎಲ್ಲಾ ಕ್ಷೇತ್ರದ ಶಾಸಕರು ಸಹಾಯ ಮಾಡುತ್ತಿರುವ ಸುದ್ಧಿ ನೋಡಿ,ಬೈಲಹೊಂಗಲದ ಬಡಪಾಯಿಗಳು ಸಹಾಯ ಮಾಡುವಂತೆ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಬಳಿ ಹೋದ ಸಂಧರ್ಭದಲ್ಲಿ ಬಡವರ ಜೊತೆ ಅವರು ನಡೆದುಕೊಂಡ ರೀತಿ ನೋಡಿದ್ರೆ ,ಮಹಾಂತೇಶ ಕೌಜಲಗಿ ಹಿಗೂ ಮಾಡಬಹುದೇ ಅನ್ನೋದು ಖಾತ್ರಿಯಾಗುತ್ತೆ

ಸಹಾಯ ಕೇಳಲು ಬಂದ ಬಡವರಿಗೆ ನಮ್ಮ ಹೆಮ್ಮೆಯ ಶಾಸಕ ಮಹಾಂತೇಶ ಕೌಜಲಗಿ ಹೇಳಿರುವ ಕಹಿ ಮಾತುಗಳ ವಿಡಿಯೋ ಫುಲ್ ವೈರಲ್ ಆಗಿದೆ.

ಸಹಾಯ ಕೇಳಲು ಹೋದವರ ಬಳಿ ಬೇಜವಾಬ್ದಾರಿತನ ಮೆರೆದ ‘ಕೈ’ ಎಂಎಲ್‌ಎ
ಬೈಲಹೊಂಗಲ ಕಾಂಗ್ರೆಸ್ ಶಾಸಕ ಮಹಾಂತೇಶ ಕೌಜಲಗಿಯಿಂದ ಉದ್ಧಟತನ ಮಾತುಗಳು ಸಹಾಯ ಕೇಳಲು ಹೋದ ಜನರಿಗೆ ಬೇಜವಾಬ್ದಾರಿ ಉತ್ತರ ಹೇಳಿ ಕಳಿಸಿದ ಶಾಸಕ ವರ್ತನೆ ನೋಡಿ ದವರಿಗೆ ಬೇಸರ ವಾಗುವದರಲ್ಲಿ ಸಂದೇಹವೇ ಇಲ್ಲ.

ಸಂಕಷ್ಟದಲ್ಲಿರುವ ಕ್ಷೇತ್ರದ ಜನರಿಗೆ ಸಾಂತ್ವನ ಹೇಳುವ ಬದಲು ಅಸಡ್ಡೆತನ ತೋರಿಸಿದ್ದಾರೆ ಮಹಾಂತೇಶ ಕೌಜಲಗಿ ನಿವಾಸದಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ಬಡಜನರು ಲಾಕ್‌ಡೌನ್ ಹಿನ್ನೆಲೆ ಸಂಕಷ್ಟವಿದೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ವಾಕಿಂಗ್‌ಗೆ ಬಂದಿದ್ದ ಶಾಸಕ ಮಹಾಂತೇಶ ಕೌಜಲಗಿ ಎಲ್ಲಾ ಅಂಗಡಿಗಳು ಓಪನ್ ಆಗಿವೆ ಕೆಲಸಕ್ಕೆ ಹೋಗಿ ಇನ್ನೂ’

ಸುಮ್ಮನೇ ಇಲ್ಲಿ ಗುದ್ದಾಡಿಕೊಂಡು ಕೂರಕ್ಕೆ ಹೋಗಬೇಡಿ’ ಎಂದು ಮಹಾಂತೇಶ ಕೌಜಲಗಿ ಬಡವರಿಗೆ ಉತ್ತರಿಸಿದ್ದಾರೆ.

ಶಾಸಕ ಮಹಾಂತೇಶ ಕೌಜಲಗಿ ಮಾತು ಕೇಳಿ ಮಹಿಳೆಯರು ವಾಪಸ್ ಹೋಗುವ ಸಂಧರ್ಭದಲ್ಲಿ ಎರಡನೇ ಸಲ ಹೀಗೆ ಮಾಡೋದು ನಡೀರಿ
ವೋಟ್ ಕೇಳಲು ಬಂದಾಗ ಹೇಳಾಕ್ ಬರ್ತೇತಿ ಬರ್ರಿ ಸಾಹೇಬ್ರಿಗೆ’ ಅಂತಾ ಆಕ್ರೋಶ ವ್ಯೆಕ್ತ ಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಘಟನೆಯ ಸಂಪೂರ್ಣ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ‘ಜನರ ಬಳಿ ವೋಟ್ ಕೇಳಲು ಬರುವಾಗ ಇರುವ ಸ್ವಭಾವ ಜನ ಸಹಾಯ ಕೇಳಲು ಬಂದಾಗ ಇರೊಲ್ವಾ?’ ಎನ್ನುವ ಅನುಮಾನ ಈಗ ಶುರುವಾಗಿದೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *