ಬೆಳಗಾವಿ- ಮಹಾವೀರ ಜಯಂತಿಯ ನಿಮಿತ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಭಾಶಯ ಕೋರಿ ನಗರದೆಲ್ಲೆಡೆ ಕಟೌಟ್ ಮತ್ತು ಬ್ಯಾನರ್ ಹಾಕಿದೆ ಬ್ಯಾನರ್ ಗಳಲ್ಲಿ ಮಹಾವೀರನ ಬದಲು ಭಗವಾನ್ ಬುದ್ಧನ ಪೋಟೋ ಹಾಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು ಮಾಡಿದೆ
ಧರ್ಮ ಸಂಸ್ಜೃತಿಯ ಗಂಧ ಗಾಳಿ ಇತಿಹಾಸ ತಿಳಿದುಕೊಳ್ಳದ ಅಜ್ಞಾನಿ ಅಧಿಕಾರಿಗಳಿಗೆ ಬುದ್ಧ ಯಾರು? ಮಹಾವೀರ ಯಾರು ? ಅವರು ಯಾವ ಆಸನದಲ್ಲಿರುತ್ತಾರೆ ಅನ್ನೋದೇ ಈ ಅಧಿಕಾರಿಗಳಿಗೆ ಗೊತ್ತಿಲ್ಲ ಅತ್ತೆ ಮನೆಯಂದೇ ಕರೆಯಲ್ಪಡುವ ಗೂಗಲ್ ನಲ್ಲಿ ಮಹಾವೀರ ಎಂದು ಸರ್ಚ ಮಾಡಿದ್ದಾರೆ ಈಗಲೂ ಗೂಗಲ್ ದಲ್ಲಿ ಮಹಾವೀರನ ಬದಲು ಬುದ್ಧನ ಪೋಟೋ ಬರುತ್ತಿದೆ ಗೂಗಲ್ ನಲ್ಲಿ ಬಂದಿದ್ದೇ ಮಹಾವೀರ ಎಂದು ತಿಳಿದು ಈ ಅಜ್ಞಾನಿ ಅಧಿಕಾರಿಗಳು ಅತ್ತೆ ಮನೆ ಗೂಗಲ್ ನಂಬಿ ತಪ್ಪು ಸಂದೇಶ ನೀಡಿದ್ದಾರೆ
ಜೈನ ಧರ್ಮದಲ್ಲಿ 24 ಜನ ತೀರ್ಥಂಕರು ಬರುತ್ತಾರೆ ಬಹುತೇಕ ಎಲ್ಲ ತೀರ್ಥಂಕರ ಚಿತ್ರ ಪದ್ಮಾಸನದಲ್ಲಿ ಇರುತ್ತದೆ ಎಲ್ಲರೂ ನಿರ್ವಸ್ತ್ರರಾಗಿರುತ್ತಾರೆ ಮಹಾವೀರ ಅವರೂ ನಿರ್ವಸ್ತ್ರ ರಾಗಿದ್ದು ಅವರ ಆಸನದ ಕೆಳಗೆ ಸಿಂಹದ ಚಿಹ್ನೆ ಇರುತ್ತದೆ ಮಹಾವೀರ ಅವರ ಪದ್ಮಾಸನದ ಕೆಳಗೆ ಸಿಂಹ ಕುಂತಿನಾಥ ತೀರ್ಥಂಕರ ಪದ್ಮಾಸನದ ಕೆಳಗೆ ಕುರಿ ಹೀಗೆ ಪ್ರತಿಯೊಬ್ಬ ತೀರ್ಥಂಕರ ಪದ್ಮಾಸನದ ಕೆಳಗೆ ಒಂದೊಂದು ಚಿಹ್ನೆ ಇರುತ್ತದೆ
ಅತ್ಯಂತ ಸರಳವಾಗಿ ಹೇಳ ಬೇಕೆಂದರೆ ಮಹಾವೀರರು ನಿರ್ವಸ್ತ್ರ ಅವರ ಪದಮಾಸನ ತಪಸ್ಸು ಮಾಡುವ ಭಂಗಿಯಲ್ಲಿ ಇರುತ್ತದೆ ಬುದ್ಧನ ಚಿತ್ರ ವಸ್ತ್ರ ಧಾರಿ ಇರುತ್ತದೆ ಎನ್ನುವ ಸಾಮಾನ್ಯ ಜ್ಞಾನ ನಮ್ಮ ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಿಲ್ಲ
ನಗರದೆಲ್ಲೆಡೆ ಹಾಕಲಾಗಿರುವ ಮಹಾವೀರ ಜಯಂತಿಯ ಶುಭ ಸಂದೇಶದ ಬ್ಯಾನರ್ ನೋಡಿದ ಜೈನ ಬಂಧುಗಳು ಅಧಿಕಾರಿಗಳ ಅಜ್ಞಾನಕ್ಕೆ ಛೀಮಾರಿ ಹಾಕುತ್ತಿದ್ದಾರೆ