ಬೆಳಗಾವಿ- ಮಹಿಳಾ ಸಬಲೀಕರಣ ಸೇರಿದಂತೆ ಸಾಮಾಜಿಕ ಜಾಗೃತಿಗಾಗಿ ಕೆಎಸ್ ಆರ್ ಪಿ ಆಯೋಜಿಸಿದ ಸೈಕಲ್ ಜಾತಾ ದಲ್ಲಿ ನೂರಕ್ಕೂ ಹೆಚ್ವು ಮಹಿಳಾ ಪೋಲೀಸರು ಭಾಗವಹಿಸಿದ್ದರು
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಎಡಿಜಿಪಿ ಭಾಸ್ಕರ್ ರಾವ್ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ನಗರ ಪೋಲೀಸ್ ಆಯುಕ್ತ ರಾಜಪ್ಪ ಸೇರಿದಂತೆ ಹಲವಾರು ಜನ ಅಧಿಕಾರಿಗಳು ಭಾಗವಹಿಸಿದ್ದರು ಮಹಿಳಾ ಪೋಲೀಸ್ ಸೈಕಲ್ ಜಾತಾ ದಲ್ಲಿ ಮೂರು ಜನ ಐಪಿಎಸ್ ಮತ್ತು ಐಎಎಸ್ ಮಹಿಳಾ ಅಧಿಕಾರಿಗಳು ಭಾಗವಹಿಸಿರುವದು ವಿಶೇಷ
ಮಹಿಳಾ ಸಬಲೀಕರಣ,ಮಹಿಳಾ ಶಿಕ್ಷಣ,ಪರಿಸರ ರಕ್ಷಣೆ ,ಬಾಲ್ಯವಿವಾಹ ದಿಂದ ಆಗುವ ದುಷ್ಪರಿಣಾಮ, ಸ್ವಚ್ಛ ಭಾರತದ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸೈಕಲ್ ಜಾತಾ ಹಮ್ಮಿಕೊಳ್ಳಲಾಗಿದೆ
ಈ ಜಾತಾದಲ್ಲಿ ನೂರು ಮಹಿಳಾ ಪೋಲೀಸರು ಭಾಗವಹಿಸಿದ್ದಾರೆ ಪ್ರತಿ ದಿನ ನೂರು ಕಿಮಿ ಕ್ರಮಿಸಿ 9 ರಂದು ಈ ಜಾತಾ ಬೆಂಗಳೂರಿಗೆ ತಲುಪಲಿದೆ
ಹುಬ್ಬಳ್ಳಿ,ಚಿತ್ರದುರ್ಗ ತುಮಕೂರು ಮಾರ್ಗವಾಗಿ ಈ ಸೈಕಲ್ ಜಾತಾ ಬೆಂಗಳೂರಿಗೆ ಮುಟ್ಟಲಿದ್ದು ವಿವಿಧ ಸಂಘಟನೆಗಳು ಸೈಕಲ್ ಜಾತಾಗೆ ಬೆಂಬಲ ನೀಡಿ ಜಾತಾದಲ್ಲಿ ಭಾಗವಹಿಸಿವೆ
ಸೈಕಲ್ ಜಾತಾಗೆ ಚಾಲನೆ ನೀಡಿ ಮಾತನಾಡಿದ ಪ್ರಭಾಕರ ಕೋರೆ ಸಾಮಾಜಿಕ ಕಳಕಳಿಯಿಂದ ಮಹಿಳಾ ಪೋಲೀಸರು ಜನಜಾಗೃತಿ ಮೂಡಿಸಲು ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್ ಜಾತಾ ನಡೆಸಿರುವದು ಪ್ರಶಂಸನೀಯ ಎಡಿಜಿಪಿ ಭಾಸ್ಕರ್ ರಾವ್ ಅವರು ತಮ್ಮ ಇಲಾಖೆಯ ಕರ್ತವ್ಯ ನಿಭಾಯಿಸುವ ಜೊತೆಗೆ ಸಾಮಾಜಿಕ ಕಳಕಳಿ ತೋರಿಸಿ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯೆಕ್ತಪಡಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ