ಬೆಳಗಾವಿ ಕ್ರೀಡಾ ಶಾಲೆಯ ವಿದ್ಯಾರ್ಥಿನಿ ಮಲಪ್ರಭಾ ಜಾಧವ ಏಷ್ಯನ್ ಗೇಮ್ಸ ನಲ್ಲಿ ಕಂಚಿನ ಪದಕ ತರುವ ಮೂಲಕ ಬೆಳಗಾವಿಗೆ ಕೀರ್ತಿ ತಂದಿದ್ದು ಇಂದು ಬೆಳಗಾವಿಯಲ್ಲಿ ಮಲಪ್ರಭಾಗೆ ಅದ್ದೂರಿಯಿಂದ ಬರಮಾಡಿಕೊಳ್ಳಲಾಯಿತು
ನಗರ ಪೋಲೀಸ್ ಆಯುಕ್ತ ರಾಜಪ್ಪ ಅವರು ಮಲಪ್ರಭಾಗೆ ಮೈಸೂರು ಪೇಟಾ ಹಾಕಿ ಜಿಲ್ಲಾಡಳಿತದ ಪರವಾಗಿ ಸತ್ಕರಿಸಿ ಗೌರವಿಸಿದರು
ಸನ್ಮಾನ ಸ್ವಿಕರಿಸಿ ಮಾತನಾಡಿದ ಮಲಪ್ರಭಾ ಬೆಳಗಾವಿಯಲ್ಲಿನ ಜುಡೋ ಕ್ರೀಡಾಪಟುಗಳಿಗಾಗಿ ಅಕಾಡೆಮಿಯ ನಿರ್ಮಿಸಿ ಪ್ರೋತ್ಸಹ ನೀಡಬೇಕೆಂದು ಇಂಡೋನೇಶಿಯಾದ ಜಾಕಾತರ್ತಾದಲ್ಲಿ 18ನೇ ಏಶಿಯನ್ ಗೇಮ್ಸ್ ನ ಕುರಾಶ್ ಕ್ರೀಡೆಯಲ್ಲಿ 52 ಕೆ.ಜಿ.ವಿಭಾಗದಲ್ಲಿ ಕಂಚಿನ ಪದಕ ವಿಜೇತ ಮಲಪ್ರಭಾ ಜಾಧವ ಹೇಳಿದರು.
ಬೆಳಗಾವಿ ಹಾಗೂ ನನ್ನ ಗ್ರಾಮಸ್ಥರು, ಕೋಚ್ ಗಳ ಸಹಕಾರದಿಂದ ಕಂಚಿನ ಪದಕ ಗೆಲವು ಸಾಧಿಸಲು ಸಾಧ್ಯವಾಯಿತು. ಕುರಾಸ ಹಾಗೂ ಜುಡೋ ಕ್ರೀಡೆ ಒಂದೆ ಇದೆ. ಬೆಳಗಾವಿಯಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದಾರೆ. ಸರಿಯಾದ ಮಾರ್ಗದರ್ಶನವಿಲ್ಲದೆ ವಂಚಿತರಾಗುತ್ತಿದ್ದಾರೆ. ಅವರಿಗಾಗಿ ಬೆಳಗಾವಿಯಲ್ಲಿ ಅಕಾಡೆಮಿ ನಿರ್ಮಿಸಿ ಪ್ರೋತ್ಸಾಹ ನೀಡಬೇಕೆಂದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಹತ್ತು ಸಾವಿರ ಬಹುಮಾನ ನೀಡಲಾಗುವುದು ಎಂದು ಡಾ. ಡಿ.ಸಿ.ರಾಜಪ್ಪ ಘೋಷಣೆ ಮಾಡಿದರು.
ಎಡಿಸಿ ಎಚ್.ಬಿ.ಬೂದೇಪ್ಪ, ಎಸ್ಪಿ ಸುಧೀಂದ್ರಕುಮಾರ ರೆಡ್ಡಿ, ಡಿಸಿಪಿ ಸೀಮಾ ಲಾಟ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.