ಬೆಳಗಾವಿ- ಯೋಗೇಶ್ ಗೌಡ್ರ ಧರ್ಮ ಪತ್ನಿ ಮಲ್ಲಮ್ಮ ಇಂದು ಸಂಜೆ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಲಕ್ಷ್ಮೀ ಹೆಬ್ಬಾಳಕರ ಅವರು ಮಲ್ಲಮ್ಮ ಯೋಗೇಶಗೌಡ ಗೌಡರ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು
ಮಲ್ಲಮ್ಮ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾದ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಯೋಗೇಶಗೌಡಾ ಪತ್ನಿ ಮಲ್ಲಮ್ಮಾ ಪಕ್ಷ ಸೇರ್ಪಡೆಯಾಗಿದ್ದಾರೆಪಕ್ಷ ಸೇರ್ಡೆಗೂ ಮುನ್ನ ಒಂದು ಗಂಟೆ ಮಲ್ಲಮ್ಮಾ ಜೊತೆ ಚರ್ಚಿಸಿರುವೆ ಯಾವುದೇ ಒತ್ತಡವಿಲ್ಲದೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ ಪಕ್ಷ ಸೇರಿಕೊಂಡಿರುವ ಮಲ್ಲಮ್ಮ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿರುವೆ ಎಂದು ಹೆಬ್ಬಾಳಕರ ಹೇಳಿದರು
ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಮಲ್ಲಮ್ಮಾ ಮಾತನಾಡಿ ನಾನು ವಿಜಯಪುರದಲ್ಲಿ ಸಿಎಂ ಅವರನ್ನ ಭೇಟಿ ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದೆ ಅದರಂತೆ ನಾನು ಸ್ವಯಂ ಪ್ರೇರಿತವಾಗಿ, ಯಾವುದೇ ಒತ್ತಡವಿಲ್ಲದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ
ಬಿಜೆಪಿಯವರೇ ವಿನಯ ಕುಲಕರ್ಣಿ ವಿರುದ್ಧ ಮಾತನಾಡುವಂತೆ ಹೇಳಿದ್ರು ನನ್ನ ಮಕ್ಕಳ ಭವಿಷ್ಯ, ನೆಮ್ಮದಿಗಾಗಿ ಕಾಂಗ್ರೆಸ್ ಸೇರ್ಪಡೆಯಾಗಿರುವೆ ಎಂದರು
ಕಾಂಗ್ರೆಸ್ ಸೇರಿ ಜನರ ಸೇವೆ ಮಾಡುವ ಆಸೆಯಿದೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಆಸೆಯಿಲ್ಲ ಡಿವೈಎಸ್ಪಿ ತುಳಜಪ್ಪ ಸುಲ್ಪಿ ಆಗಲಿ ಮತ್ತು ಕಾಂಗ್ರೆಸನ ಯಾವುದೇ ನಾಯಕರು ನನ್ನ ಮನೆಗೆ ಬಂದಿಲ್ಲ ನನ್ನ ಪತಿ ಯೋಗೇಶಗೌಡಾ ಕೊಲೆ ಪ್ರಕರಣ ಸಿಬಿಐ ಒಪ್ಪಿಸುವಂತೆ ಸಿಎಂ ಗೆ ಹೇಳುವೆ ಎಂದು ಮಲ್ಲಮ್ಮಾ ಹೇಳಿದರು