ಬೆಳಗಾವಿ- ಬೆಂಗಳೂರಿನಲ್ಲಿ ನಡೆಯುತ್ತಿದ್ದ ಮಾವು ಮೇಳ ಮೊದಲ ಬಾರಿಗೆ ಬೆಳಗಾವಿಯಲ್ಲಿ ನಡೆಯುತ್ತಿದೆ ನಾಳೆ ಮಂಗಳವಾರ ಬೆಳಿಗ್ಗೆ 11-30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಚನ್ನಮ್ಮ ವೃತ್ತ ದಲ್ಲಿರುವ ತೋಟಗಾರಿಕೆ ಕಚೇರಿ ಆರಣದಲ್ಲಿ ಮಾವು ಮೇಳವನ್ನು ಉದ್ಘಾಟಿಸಲಿದ್ದಾರೆ
ಬೆಳಗಾವಿ ಪ್ರದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಮಾವು ಮೇಳದಲ್ಲಿ ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ವಿವಿಧ ಜಾತಿಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು ಪ್ರಥಮ ಬಾರಿಗೆ ನಡೆಯುವ ಈ ಮೇಳ ಎಲ್ಲರನ್ನು ಆಕರ್ಷಿಸುವಲ್ಲಿ ಸಂಧೇಹವೇ ಇಲ್ಲ
ಪ್ರದರ್ಶನದಲ್ಲಿ ರತ್ನಾಗಿರಿ ಆಪುಸು ದೇವಗಡ ಆಪುಸು ಪೈರಿ ಧಾರವಾಡ ಮತ್ತು ಕಲಘಟಗಿ ಭಾಗದ ಫೇಮಸ್ ಮಾವು ಈಷಾಡಿ ಮತ್ತು ಗಾತ್ರದಲ್ಲೂ ದೊಡ್ಡದಾಗಿರುವ ಮಲಗೋಬಾ ಮಾವು ಎಲ್ಲರ ಬಾಯಲ್ಲಿ ನಿರೂರಿಸುವದು ಗ್ಯಾರಂಟಿ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ